ಸಿಡ್ನಿ, ಏಪ್ರಿಲ್ 15: ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ಶಾಪಿಂಗ್ ಮಾಲ್ವೊಂದರಲ್ಲಿ ಶನಿವಾರ (ಏ. 13) ಐವರು ಮಹಿಳೆಯರು ಸೇರಿದಂತೆ ಆರು ಜನರನ್ನು ಬಲಿ ತೆಗೆದುಕೊಂಡಿದ್ದ 40 ವರ್ಷದ ಜೋಯಲ್ ಕೌಚಿ (Joel Cauchi) ಎಂಬಾತನ ಬಗ್ಗೆ ವೈಯಕ್ತಿಕ ಮಾಹಿತಿ ಹೊರಬರತೊಡಗಿದೆ. ವೆಸ್ಟ್ಫೀಲ್ಡ್ ಬಾಂಡಿ ಜಂಕ್ಷನ್ ಮಾಲ್ನಲ್ಲಿ ಶನಿವಾರವೇ ಈತನನ್ನು ಪೊಲೀಸರು ಗುಂಡಿಟ್ಟು ಕೊಂದಿದ್ದರು. ಅಷ್ಟರೊಳಗೆ ಈತ ಚಾಕುವಿನಿಂದ ಹಲ್ಲೆ ಮಾಡಿ ಆರು ಮಂದಿಯನ್ನು ಬಲಿತೆಗೆದುಕೊಂಡಿದ್ದೂ ಅಲ್ಲದೇ 12 ಮಂದಿಯನ್ನು ಗಾಯಗೊಳಿಸಿದ್ದ. ಸತ್ತವ ಆರು ಜನರಲ್ಲಿ ಐವರು ಮಹಿಳೆಯರೇ ಆಗಿದ್ದಾರೆ. ಗಾಯಗೊಂಡವರೆಲ್ಲರೂ ಮಹಿಳೆಯರೇ ಆಗಿದ್ದಾರೆ. ಮೇಲ್ನೋಟಕ್ಕೆ ನೋಡಿದರೂ ಈತನ ಟಾರ್ಗೆಟ್ ಮಹಿಳೆಯರೇ ಆಗಿದ್ದಾರೆ ಎಂದು ಪೊಲೀಸರು ಅನುಮಾನಿಸಿದ್ದಾರೆ.
ಸಿಸಿಟಿವಿ ಫೂಟೇಜ್ನಲ್ಲಿ ಕಂಡಿರುವ ದೃಶ್ಯದ ಪ್ರಕಾರ ಜೋಯಲ್ ಕೌಚಿ ಮಹಿಳೆಯರನ್ನು ನೋಡಿ ನೋಡಿಯೇ ಹಲ್ಲೆ ಮಾಡಿದಂತಿದೆ. ಅಪರಾಧಿಯು ಪುರುಷರನ್ನು ಬಿಟ್ಟು ಮಹಿಳೆಯರನ್ನೇ ಗುರಿ ಮಾಡಿದ್ದು ಸ್ಪಷ್ಟವಾಗಿದೆ ಎಂದಿದ್ದಾರೆ ಪೊಲೀಸರು.
ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ, ಕಾರಿನಲ್ಲಿ ಶವ ಪತ್ತೆ
ಇದೇ ವೇಳೆ ಕೊಲೆಗಡುಕ ಜೋಯಲ್ನ ತಂದೆ ತಮ್ಮ ಮಗನ ಬಗ್ಗೆ ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ತಮ್ಮ ಮಗನಿಗೆ ಒಬ್ಬ ಗರ್ಲ್ ಫ್ರೆಂಡ್ ಕೂಡ ಸಿಕ್ಕಿಲ್ಲ. ಈ ಹತಾಶೆಯಲ್ಲಿದ್ದ ಈತನಿಗೆ ಶಿಜೋಫ್ರೆನಿಯಾ ರೋಗ ಇತ್ತು ಎಂದಿದ್ದಾರೆ ಈ ತಂದೆ.
ಅವನಿಗೆ ಗರ್ಲ್ಫ್ರೆಂಡ್ ಬೇಕಿತ್ತು. ಆದರೆ, ಸೋಷಿಯಲ್ ಸ್ಕಿಲ್ ಇರಲಿಲ್ಲ. ಇದರಿಂದ ಹುಚ್ಚನಂತಾಗಿದ್ದ. ಅವ ನನ್ನ ಮಗ. ನಿಮಗೆ ಆತ ರಕ್ಕಸ ಎನಿಸಬಹುದು. ನನಗೆ ಆತ ಕಾಯಿಲೆಯಿಂದ ಬಳಲುತ್ತಿದ್ದ ಹುಡುಗ,’ ಎಂದು ಆಂಡ್ರ್ಯೂ ಕೌಚಿ ಹೇಳಿದ್ದಾರೆ.
ಇದನ್ನೂ ಓದಿ: ಪ್ರತಿಷ್ಟಿತ ವಿಲ್ಲಾದಲ್ಲಿ ಕೆಲಸ ಮಾಡ್ತಿದ್ದ ಯುವಕ ಸಾವು; ಮನೆ ಮಗನನ್ನ ಕಳೆದುಕೊಂಡು ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಜೋಯಲ್ಗೆ ಬಲಿಯಾದ ಒಬ್ಬನೇ ಪುರುಷನ ಹೆಸರು ಫರಾಜ್ ತಾಹಿರ್. ಆತ ಪಾಕಿಸ್ತಾನೀ ಮೂಲದವನು. ಮಾಲ್ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ. ಈ ಕಾರಣಕ್ಕೆ ಆತನನ್ನು ಜೋಯಲ್ ಹತ್ಯೆಗೈದಿರುವ ಸಾಧ್ಯತೆ ಇದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ