ವಿಜಯಪುರ: ರಂಜಾನ್ ಹಬ್ಬದಂದೇ ಯುವಕನ ಹತ್ಯೆ ಪ್ರಕರಣ; ಆರೋಪಿಗಳ ಬಂಧನ

ವಿಜಯಪುರ ನಗರದಲ್ಲಿ ರೌಡಿಸಂ ಗುಂಪುಗಳ ಮಧ್ಯೆ ರಿವೇಂಜ್ ಆ್ಯಟಿಟ್ಯೂಡ್ ನಡೆಯುತ್ತಿದೆಯಾ?, ಹೀಗೊಂದು ಸವಾಲು ಇದೀಗಾ ಜಿಲ್ಲಾ ಪೊಲೀಸ್ ಇಲಾಖೆ ಮುಂದಿದೆ. ಕಳೆದ ರಂಜಾನ್ ಹಬ್ಬದ ವೇಳೆ ರಾತ್ರಿ ನಗರದ ಜುಮ್ಮಾ ಮಸೀದಿ ಪಕ್ಕದಲ್ಲೇ ಯುವಕನನ್ನ ಕೊಲೆ ಮಾಡಲಾಗಿತ್ತು. ರಂಜಾನ್ ಹಬ್ಬದ ಸಡಗರದಲ್ಲಿದ್ದವರು ಬೀಕರ ಕೊಲೆಯನ್ನು ಕಂಡು ಹೌಹಾರಿದ್ದರು. ಇದೀಗ ತನಿಖೆ ನಡೆಸಿದ ಖಾಕಿ ಪಡೆ, ಕೆಲ ಹಂತಕರನ್ನು ಬಂಧನ ಮಾಡಿ, ಇತರೆ ಆರೋಪಿಗಳಿಗೆ ಜಾಲ ಬೀಸಿದೆ.

ವಿಜಯಪುರ: ರಂಜಾನ್ ಹಬ್ಬದಂದೇ ಯುವಕನ ಹತ್ಯೆ ಪ್ರಕರಣ; ಆರೋಪಿಗಳ ಬಂಧನ
ಮೃತ ವ್ಯಕ್ತಿ
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 14, 2024 | 8:48 PM

ವಿಜಯಪುರ, ಏ.14: ಇದೇ ಏಪ್ರೀಲ್ 11ರಂದು ವಿಜಯಪುರ(Vijayapura) ಜಿಲ್ಲೆಯ ಎಲ್ಲೆಡೆ ರಂಜಾನ್ ಹಬ್ಬದ ಸಂಭ್ರಮ, ಸಡಗರ ಮನೆ ಮಾಡಿತ್ತು. ಬೆಳ್​ ಬೆಳಿಗ್ಗೆಯಿಂದಲೇ ಮುಸ್ಲಿಂ ಸಮುದಾಯದ ಜನರು ಪ್ರಾರ್ಥನಾ ಮಂದಿರ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದ್ದರು. ಬಳಿಕ ಮನೆಗಳಲ್ಲೂ ಕುಟುಂಬಸ್ಥರು, ಗೆಳೆಯರು, ಬಂಧು-ಬಾಂಧವವರೊಂದಿಗೆ ಭೋಜನ ಮಾಡಿದ್ದರು. ಸಾಯಂಕಾಲ ರಂಜಾನ್ ಶುಭಾಶಯಗಳ ವಿನಿಮಯ ಮಾಡಿಕೊಂಡು ಕಠಿಣ ಉಪವಾಸದ ಸಾಂಪ್ರದಾಯಿಕ ಹಬ್ಬಕ್ಕೆ ಅಂದು ತೆರೆ ನೀಡುತಲಿದ್ದರು. ಇದೇ ವೇಳೆ ನಗರದ ಜುಮ್ಮಾ ಮಸೀದಿ ಬಳಿಕ ಗುಂಪೊಂದು ಯುವಕನೋರ್ವನ ಮೇಲೆ ಮುಗಿ ಬಿದ್ದಿತ್ತು. ನೋಡ ನೋಡುತ್ತಲೇ ಕಲ್ಲು ಗಾಜು ಹಾಗೂ ಹರಿತವಾದ ಆಯುಧದಿಂದ ಮನ ಬಂದಂತೆ ಹಲ್ಲೆ ಮಾಡಿ ಕ್ಷಣಾರ್ಧದಲ್ಲೇ ಎಸ್ಕೇಪ್ ಆಗಿತ್ತು. ಹಲ್ಲೆಗೊಳಗಾದವ ಸ್ಥಳದಲ್ಲೇ ಕುಸಿದು ಬಿದ್ದು ಜೀವ ಬಿಟ್ಟಿದ್ದ. ಸೇರಿದ್ದ ಜನರು ಗೋಲಗುಮ್ಮಟ ಪೊಲೀಸ್ ಠಾಣೆಗೆ ವಿಚಾರ ತಿಳಿಸಿದರು.

ಇನ್ನು ವಿಷಯ ತಿಳಿಯುತ್ತಿದ್ದಂತೆ ಗೋಲಗುಮ್ಮಟ ಠಾಣೆಯ ಸಿಪಿಐ ಮಹಾಂತೇಶ್​ ಮಠಪತಿ ಹಾಗೂ ತಂಡ ಸ್ಥಳಕ್ಕೆ ದೌಢಾಯಿಸಿತ್ತು. ಕೊಲೆಯಾದವ ಯಾರೆಂದು ನೋಡಿದಾಗ ಆತ ರಜೀನ್ ಜಮಾದಾರ್ ( 27 ) ಎಂದು ಗೊತ್ತಾಗಿತ್ತು. ಇಷ್ಟು ದಿನ ಇದೇ ಜುಮ್ಮಾ ಮಸೀದಿ ಏರಿಯಾದಲ್ಲೇ ಹುಟ್ಟಿ ಬೆಳೆದಿದ್ದ ರಜೀನ್ ಇತ್ತೀಚೆಗೆ ನಗರದ ಠಕ್ಕೆ ಪ್ರದೇಶದಲ್ಲಿದ್ದ. ಸ್ಥಳದಲ್ಲಿ ಕೊಲೆಯಾದ ರಜೀನ್ ಜಮಾದಾರ ತಂದೆ-ತಾಯಿ ಸಹೋದರಿಯರು, ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು. ನಮ್ಮ ಮಗ ತನ್ನ ಪಾಡಿಗೆ ತಾನಿದ್ದ. ಹೈದರ್ ನದಾಫ್​ನನ್ನು ಕೊಲೆ ಮಾಡಿದ ಶೇಖ್ ಮೋದಿ ಗ್ಯಾಂಗ್​ ನನ್ನ ಮಗನ ಕೊಲೆ ಮಾಡಿದೆ ಎಂದು ಆರೋಪಿಸಿದ್ದರು.‘

ಇದನ್ನೂ ಓದಿ:ಸ್ನೇಹಿತನ ಎಟಿಎಂನಲ್ಲಿ ಹಣ ನೋಡಿ ಕೊಲೆ;​ ಪೋಸ್ಟ್ ಮಾರ್ಟಮ್ ರಿಪೋರ್ಟ್​ನಲ್ಲಿ ಹತ್ಯೆ ರಹಸ್ಯ ಬಯಲು, ಆರೋಪಿ ಅರೆಸ್ಟ್

ಈ ಕುರಿತು ತನಿಖೆ ನಡೆಸಿದ ಇನ್ಸಪೆಕ್ಟರ್ ಮಹಾಂತೇಶ್​ ಮಠಪತಿ ಹಾಗೂ ಟೀಂ ರಜೀನ್ ಕೊಲೆ ಮಾಡಿದ ಆರೋಪಿತರ ಬೆನ್ನು ಬಿದ್ದಿದ್ದರು. ಇಡೀ ಪ್ರಕರಣದ ಹಿಂದೆ ಈ ಹಿಂದೆ 2023 ರ ಮೇ 5 ರಂದು ನಡೆದ ರೌಡಿ ಶೀಟರ್ ಹೈದರ್ ನದಾಫ್ ಕೊಲೆ ಹಾಗೂ ನಂತರ ಹೈದರ್ ನದಾಫ್ ಕೊಲೆ ಮಾಡಿದ ಶೇಖ್ ಮೋದಿ ಅವರ ಗ್ಯಾಂಗ್ ಸದಸ್ಯರ ಮೇಲೆ ಕಳೆದ ನವೆಂಬರ್ 10 ರಂದು ಗುಂಡಿನ ದಾಳಿ ನಡೆದಿತ್ತು. ಹೈದರ್ ನದಾಫ್ ಕೊಲೆಗೆ ಪ್ರತೀಕಾರವಾಗಿ ಶೇಖ್ ಮೋದಿ ಗ್ಯಾಂಗ್​ನ ಶೊಯೇನ್ ಕಕ್ಕಳಮೇಲಿ, ತೌಫಿಕ್ ಹಾಗೂ ಅಮಾನುಲ್ಲಾ ಲೋಣಿ ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಹಾಡು ಹಗಲೇ ಕಂಟ್ರೀ ಪಿಸ್ತೂಲ್​ನಿಂದ ಫೈರಿಂಗ್ ಮಾಡಿದ್ದರು. ಹೈದರ್ ನದಾಫ್ ಗ್ಯಾಂಗ್​ನ ಚಾರ್ಲೆ ಸಮೀರ್ ಹಾಗೂ ಇತರರು ದಾಳಿ ಮಾಡಿದ್ಧಾರೆಂಬುದು ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಚಾರ್ಲಿ ಸಮೀರ್, ಅಬ್ದುಲ್ ಖಾದರ್, ರುಜ್ಜು, ಮಕ್ಸೂದ್, ಸಮೀರ್ ಕಚ್ಛಾಪೂರ್ ಸೇರಿ13 ಜನರ ಬಂಧನವಾಗಿತ್ತು.

ಇದೇ ವೈಷಮ್ಯ ಮುಂದುವರೆದು ರಜೀನ್ ಜಮಾದಾರ್ ಕೊಲೆಯಾಗಿದೆ ಎಂಬುದು ಖಾಕಿ ಪಡೆಗೆ ಪ್ರಾಥಮಿಕ ತನಿಖೆಯಲ್ಲೇ ತಿಳಿದು ಬಂದಿತ್ತು. ಕಾರಣ 2023 ರ ಮೇ 5 ರಂದು ಕೊಲೆಯಾಗಿದ್ದ ರೌಡಿ ಶೀಟರ್ ಹೈದರ್ ನದಾಫ್ ರಂಜಾನ್ ಹಬ್ಬದ ದಿನ ಕೊಲೆಯಾದ ರಜೀನ್ ಜಮಾದಾರ್​ಗೂ ಒಡನಾಟ ಇತ್ತಂತೆ. ಹೈದರ್ ನದಾಫ್​ನ ವ್ಯವಹಾರಗಳನ್ನು ರಜೀನ್ ಜಮಾದಾರ್ ನೋಡಿಕೊಳ್ಳುತ್ತಿದ್ದನಂತೆ. ರೌಡಿಸಂನಲ್ಲಿನ ತನ್ನ ಗುರು ಹೈದರ್ ನದಾಫ್ ಕೊಲೆ ಮಾಡಿದವರ ಮೇಲೆ ರಜೀನ್ ಜಮಾದಾರ್ ತೀರಿಸಿಕೊಳ್ಳಲು ಸ್ಕೆಚ್ ಹಾಕುತ್ತಿದ್ದನಂತೆ. ಈ ವಿಚಾರ ಶೇಖ್ ಮೋದಿ ಗ್ಯಾಂಗ್​ಗೆ ಗೊತ್ತಾಗಿ ರಜೀನ್​ಗೆ ಮಹೂರ್ತ ಇಡಲು ಪಕ್ಕಾ ಪ್ಲ್ಯಾನ್ ಮಾಡಿದ್ದರು. ಅವರ ಪ್ಲ್ಯಾನ್​ನಂತೆ ರಂಜಾನ್ ಹಬ್ಬದ ದಿನ ರಜೀನ್ ಜುಮ್ಮಾ ಮಸೀದಿ ಬಳಿ ಬಂದೇ ಬರುತ್ತಾನೆ. ಆಗ ಆತನನ್ನು ಮುಗಿಸಿ ಬಿಡೋಣವೆಂದು ಪ್ಲ್ಯಾನ್ ಮಾಡುತ್ತಾರೆ. ಇವರ ಪ್ಲ್ಯಾನ್​ನಂತೆ ರಜೀನ್ ಜುಮ್ಮಾ ಮಸೀದಿ ಬಳಿ ಬಂದಾಗ ಅಟ್ಯಾಕ್ ಮಾಡಿ ಕಲ್ಲು ಗಾಜು ಹರಿತವಾದ ಚಾಕೂವಿನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.

ತನಿಖೆ ನಡೆಸಿದ ಗೋಲಗುಂಬಜ್ ಪೊಲೀಸರು ಮೊಹಮ್ಮದ್ ಅರಬಾಜ್ ಕಕ್ಕಳಮೇಲಿ, ಮೆಹಬೂಬ್ ಕಡ್ಲಿಮಟ್ಟಿ, ಹಬೀಬ್ ಇನಾಂದಾರ್ ಹಾಗೂ ಮೊಹಮ್ಮದ್ ಸಾಜೀದ್ ಇನಾಂದಾರ್ ಎಂಬಾತನನ್ನು ಬಂಧಿಸಿದ್ದಾರೆ. ಇತರೆ ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ. ಸದ್ಯ ವಿಜಯಪುರ ನಗರ ಗ್ಯಾಂಗ್, ಗ್ಯಾಂಗ್​ಗಳ ಮಧ್ಯದ ಹೊಡೆದಾಟ ಕೊಲೆಗಳಿಗೆ ಸಾಕ್ಷಿಯಾಗಿದೆ. ಅದರಲ್ಲೂ 2023 ರ ಮೇನಲ್ಲಿ ನಡೆದ ಹೈದರ್ ನದಾಫ್ ಕೊಲೆಯ ಬಳಿಕ ಗುಂಡಿನ ದಾಳಿ, ಹಲ್ಲೆ, ಕೊಲೆ ಯತ್ನ ಕೊಲೆಗಳಂತ ಕೇಸ್​ಗಳು ನಡೆಯುತ್ತಿವೆ. ಹೈದರ್ ನದಾಫ್ ಗ್ಯಾಂಗ್ ಹಾಗೂ ಆತನನ್ನು ಕೊಲೆ ಮಾಡಿದ ಶೇಖ್ ಮೋದಿ ಗ್ಯಾಂಗ್​ಗಳ ಮದ್ಯೆ ಈ ವಾರ್ ಶುರುವಾಗಿದೆ. ಇದೆಲ್ಲದಕ್ಕೂ ಜಿಲ್ಲಾ ಪೊಲೀಸ್ ಇಲಾಖೆ ಯಾವ ರೀತಿ ಪುಲ್ ಸ್ಟಾಪ್ ಇಡುತ್ತದೆಯೋ ಕಾಯ್ದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ