AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಮೂಲದ ಮಹಿಳೆ ಸುಡಾನ್​ನಲ್ಲಿ ಅನುಮಾನಾಸ್ಪದವಾಗಿ ಸಾವು

ವ್ಯಾಪಾರಕ್ಕೆಂದು ಸುಡಾನ್​ಗೆ ತೆರಳಿದ್ದ​ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಪಕ್ಷಿರಾಜಪುರದ ಹಕ್ಕಿಪಿಕ್ಕಿ ಜನಾಂಗದ ಮಹಿಳೆ ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ಪಕ್ಷಿರಾಜಪುರದಲ್ಲಿ ನಂದಿನಿ ಪತಿ ಹಾಗೂ ಮಕ್ಕಳು ವಾಸವಾಗಿದ್ದು, ನಂದಿನಿ ಮೃತದೇಹ ದೇಶಕ್ಕೆ ಕರೆತರುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮೈಸೂರು ಮೂಲದ ಮಹಿಳೆ ಸುಡಾನ್​ನಲ್ಲಿ ಅನುಮಾನಾಸ್ಪದವಾಗಿ ಸಾವು
ಮೃತ ನಂದಿನಿ
ರಾಮ್​, ಮೈಸೂರು
| Updated By: ವಿವೇಕ ಬಿರಾದಾರ|

Updated on:Apr 16, 2024 | 1:17 PM

Share

ಮೈಸೂರು, ಏಪ್ರಿಲ್​ 16: ಹುಣಸೂರು (Hunasuru) ತಾಲೂಕಿನ ಪಕ್ಷಿರಾಜಪುರದ ನಿವಾಸಿ, ಹಕ್ಕಿಪಿಕ್ಕಿ ಜನಾಂಗದ (Hakkipikki People) ಮಹಿಳೆ ಸುಡಾನ್​​​ನಲ್ಲಿ (Sudan) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ನಂದಿನಿ ಮೃತ ದುರ್ದೈವಿ. ನಂದಿನಿ ಅವರು ಸುಡಾನ್​ಗೆ ವ್ಯಾಪಾರಕ್ಕಾಗಿ ತೆರಳಿದ್ದರು. ನಂದಿನಿ ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪಕ್ಷಿರಾಜಪುರದಲ್ಲಿ ನಂದಿನಿ ಪತಿ ಹಾಗೂ ಮಕ್ಕಳು ವಾಸವಾಗಿದ್ದು,  ಮೃತದೇಹನ್ನು ದೇಶಕ್ಕೆ ಕರೆತರುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸುಡಾನ್​ನಲ್ಲಿರುವ​ ಭಾರತದ ರಾಯಭಾರಿ ಜೊತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ​​ರಜನೀಶ್ ಗೋಯಲ್ ಮಾತನಾಡಿದ್ದು, ನಂದಿನಿ ಶವ ಏ.17 ರಂದು ಹುಣಸೂರಿಗೆ‌ ಕರೆತರುವ ಸಾಧ್ಯತೆ ಇದೆ.

ಅರಣ್ಯ ಅಂಚಿನಲ್ಲಿ ಅಪರಿಚಿತ ಯುವಕನ ಶವ ಪತ್ತೆ

ದಾವಣಗೆರೆ: ಜಗಳೂರು ತಾಲೂಕಿನ ಸಿದ್ದಯ್ಯನ‌ಕೋಟೆ ಹಾಗೂ ಮಾದಾಪುರ ಗ್ರಾಮದ ಕಾಡಂಚಿನಲ್ಲಿ 25 ರಿಂದ 30 ವರ್ಷ ನಡುವಿನ ಶವ ಪತ್ತೆಯಾಗಿದೆ. ಕೊಳತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಯುವಕ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮಸ್ಥರು ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬೀಳಿಚೋಡು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ವ್ಯಕ್ತಿಯ ಗುರ್ತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:37 am, Tue, 16 April 24