ಇಂದು ಕರ್ನಾಟಕಕ್ಕೆ ರಾಹುಲ್ ಗಾಂಧಿ: ಮಂಡ್ಯ, ಕೋಲಾರದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ

ಮಂಡ್ಯ. ಲೋಕಸಭೆ ಸಮರದಲ್ಲಿ ಮತ್ತೊಮ್ಮೆ ರಣರಣ ಅನ್ನೋಕೆ ಶುರುವಾಗಿದೆ.. ಕಳೆದ ಲೋಕಸಭೆಗಿಂತೂ ಈ ಬಾರಿಯೂ ಫುಲ್​ ಹೈವೋಲ್ಟೇಜ್​ ಕದನ ಕಣವಾಗಿದೆ. ಜಿದ್ದಿಗೆ ಜಿದ್ದು ಎಂಬಂತೆ ಸಕ್ಕರೆ ನಾಡು ವಶಕ್ಕಾಗಿ ಕಾಂಗ್ರೆಸ್, ಬಿಜೆಪಿ ಕಾಲು ಕೆರೆದು ನಿಂತಿವೆ. ಮೊನ್ನೆಯಷ್ಟೇ ಪ್ರಧಾನಿ ಮೋದಿಯವರನ್ನ ಮೈಸೂರಿಗೆ ಕರೆಸಿದ್ದ ಬಿಜೆಪಿ, ಜೆಡಿಎಸ್ ದೋಸ್ತಿಗಳು ಶಕ್ತಿ ಪ್ರದರ್ಶನ ಮಾಡಿದ್ರು. ಒಂದು ಭೇಟಿಯಲ್ಲಿ ಮೂರು ಕ್ಷೇತ್ರಗಳನ್ನ ಟಾರ್ಗೆಟ್​ ಮಾಡಿದ್ರು. ಆದ್ರೆ ಆದ್ರೀಗ ಇದನ್ನ ನೋಡಿಕೊಂಡು ಕಾಂಗ್ರೆಸ್ ಸುಮ್ನೆ ಕೂತಿಲ್ಲ. ಬದಲಾಗಿ ಏನಾದ್ರು ಮಾಡಿ ಮಂಡ್ಯವನ್ನ ಕೈ ವಶ ಮಾಡಿಕೊಳ್ಳಬೇಕು. ಕುಮಾರಸ್ವಾಮಿಯನ್ನ ಕಟ್ಟ ಹಾಕಬೇಕು ಎಂದು ರಾಹುಲ್ ಗಾಂಧಿ ಅಸ್ತ್ರ ಹೂಡಿದ್ದಾರೆ.

ಇಂದು ಕರ್ನಾಟಕಕ್ಕೆ ರಾಹುಲ್ ಗಾಂಧಿ: ಮಂಡ್ಯ, ಕೋಲಾರದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ
Follow us
TV9 Web
| Updated By: ವಿವೇಕ ಬಿರಾದಾರ

Updated on:Apr 17, 2024 | 6:36 AM

ಬೆಂಗಳೂರು, (ಏಪ್ರಿಲ್ 17): ಹಳೇ ಮೈಸೂರು ಗೆಲ್ಲುವುದಕ್ಕೆ ಕಾಂಗ್ರೆಸ್​ ಈಗಾಗಲೇ ಒಂದು ಕಾರ್ಡ್​ ಪ್ಲೇ ಮಾಡಿದೆ. ಅದು ಒಕ್ಕಲಿಗ ಜಾತಿ ಕಾರ್ಡ್​. ಇದೇ ಒಕ್ಕಲಿಗ ಅಸ್ತ್ರವನ್ನ ಮತ್ತಷ್ಟು ಜೀವಂತವಾಗಿಡಲು ಕಾಂಗ್ರೆಸ್ ಮತ್ತೊಂದು​ ಪ್ಲ್ಯಾನ್ ಮಾಡಿಕೊಂಡಿದೆ. ಮೋದಿ ಆಗಮನಕ್ಕೂ ಕೌಂಟರ್​ ಕೊಡಲು ನಾಳೆ (ಏಪ್ರಿಲ್ 17) ರಾಹುಲ್ ಗಾಂಧಿಯವರನ್ನ (Rahul Gandhi) ಅಖಾಡಕ್ಕೆ ಇಳಿಸುತ್ತಿದ್ದಾರೆ. ಹೌದು.. ನಾಳೆ ಮಧ್ಯಾಹ್ನ 1.20ಕ್ಕೆ ರಾಹುಲ್​ ಗಾಂಧಿ   ಕೇರಳದಿಂದ ಬೆಂಗಳೂರಿನ ಹೆಚ್​ಎಎಲ್​​ಗೆ ಆಗಮಿಸಲಿದ್ದಾರೆ.. ಅಲ್ಲಿಂದ ಮಂಡ್ಯಕ್ಕೆ(Mandya) ತೆರಳಲಿದ್ದು, ಸಾರ್ವಜನಿಕ ಸಭೆಯಲ್ಲಿ ಭಾಗಿ ಆಗಲಿದ್ದಾರೆ. ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ನಂತರ ಅಲ್ಲಿಂದ ಮಧ್ಯಾಹ್ನ 3.30ಕ್ಕೆ ಹೆಲಿಕಾಪ್ಟರ್​ ಮೂಲಕ ಕೋಲಾರಕ್ಕೆ (Kolar) ತೆರಳಲಿದ್ದಾರೆ.. ಅಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಮತಬೇಟೆಯಾಡಲಿದ್ದಾರೆ.

ಕೋಲಾರದಲ್ಲಿ ಪ್ರಜಾಧ್ವನಿ 2.0

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಚೊಕ್ಕಂಡಹಳ್ಳಿ ಗ್ರಾಮದ ಬಳಿ ಸುಮಾರು 50 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಇನ್ನು . ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ.

ಇದನ್ನೂ ಓದಿ: ‘ಕೈ’ ಕಡೆ ವಾಲಿದ ಶ್ರೀನಿವಾಸ್ ಪ್ರಸಾದ್ ರಿಂದ ಬಿಜೆಪಿಗೆ ಆಗುವ ಲಾಭ-ನಷ್ಟವೇನು?

ಒಗ್ಗಟ್ಟು ಪ್ರದರ್ಶನ

ನಾಳೆ ಅಂದರೆ ಏಪ್ರಿಲ್.17 ರಂದು ಮಧ್ಯಾಹ್ನ 3 ಗಂಟೆಗೆ ರಾಹುಲ್ ಗಾಂಧಿ‌ ಅವರು ಹೆಲಿಕಾಪ್ಟರ್ ಮೂಲಕ ಕೋಲಾರಕ್ಕೆ ಆಗಮಿಸಲಿದ್ದಾರೆ. ಹೀಗಾಗಿ ವೇದಿಕೆಯಿಂದ ಸುಮರು 5 ಕಿ.ಮೀ‌. ದೂರದಲ್ಲಿ ಹೆಲಿಪ್ಯಾಡ್ ನ್ನು ನಿರ್ಮಾಣ ಮಾಡಲಾಗಿದೆ. ಇನ್ನು ಟಿಕೆಟ್​ ಹಂಚಿಕೆ ವೇಳೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗುಂಪುಗಾರಿಕೆ ಪ್ರದರ್ಶನ ಮಾಡಿ ಗಮನ ಸೆಳೆದಿದ್ದ ಕೋಲಾರ ಜಿಲ್ಲಾ ಕಾಂಗ್ರೆಸ್​ ನಾಳೆ ಪಕ್ಷದ ರಾಷ್ಟ್ರೀಯ ನಾಯಕರ ಎದುರಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುವ ಸಾಧ್ಯತೆ ಇದೆ.

ಇನ್ನು ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಮೇಗಾ ಪ್ಲಾನ್​ ಮಾಡಿದೆ. ಕಳೆದ ವಾರವಷ್ಟೇ ಮೂಡಣ ಬಾಗಿಲು ಮುಳಬಾಗಲಿನ ಕುರುಡುಮಲೆ ವಿನಾಯಕನಿಗೆ ಪೂಜೆ ಸಲ್ಲಿಸುವ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ರಣಕಹಳೆ ಮೊಳಗಿಸಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೋಲಾರ ಲೋಕಸಭಾ ಅಭ್ಯರ್ಥಿ ಪರ‌ ಭರ್ಜರಿ ಪ್ರಚಾರ ಮಾಡಿ ತೆರಳಿದ್ದರು. ಈಗ ಮತ್ತೊಮ್ಮೆ ಮತಬೇಟಿಗಾಗಿ ಕಾಂಗ್ರೆಸ್ ನ ರಾಹುಲ್ ಗಾಂಧಿ‌, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೇರಿದಂತೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ‌ ಸಚಿವರು ಭಾಗವಹಿಸಲಿದ್ದಾರೆ.

ನಾಳೆ ಮಧ್ಯಾಹ್ನ 3 ಗಂಟೆಗೆ ಆಗಮಿಸಿ ಕೆ.ವಿ.ಗೌತಮ್ ಪರ ಮತಯಾಚನೆ ಮಾಡಲಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಿಂದ 50 ಸಾವಿರಾರು ಹೆಚ್ಚಿನ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ರಾಹುಲ್​ ಭೇಟಿ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಮಂಡ್ಯ, ಕೋಲಾರದಲ್ಲಿ ರಾಹುಲ್​ ಗಾಂಧಿ ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಇನ್ನು ರಾಹುಲ್​ ಗಾಂಧಿ ರಾಜ್ಯ ಭೇಟಿಗೆ ಲೇವಡಿ ಮಾಡಿದ ಬಿಜೆಪಿ ಸಂಸದ ಮುನಿಸ್ವಾಮಿ, ರಾಹುಲ್ ಗಾಂಧಿ ಅವರ ಅಪ್ಪ, ಅಮ್ಮ, ಅಜ್ಜಿ, ತಾತ ಯಾರೇ ಬಂದರೂ, ಕೋಲಾರದಲ್ಲಿ ಎನ್​ಡಿಎ ಅಭ್ಯರ್ಥಿ ಮಲ್ಲೇಶ್​ ಬಾಬು ಸೋಲಿಸಲು ಆಗಲ್ಲ ಎಂದು ಕಾಲೆಳೆದಿದ್ದಾರೆ,

ರಾಜ್ಯಕ್ಕೆ ಮೋದಿ ಭೇಟಿ ಬೆನ್ನಲ್ಲೇ ರಾಹುಲ್​ ಗಾಂಧಿ ಎಂಟ್ರಿ ಕೊಡ್ತಿದ್ದಾರೆ.. ಶತಾಯಗತಾಯ ಮಂಡ್ಯ, ಕೋಲಾರ ಗೆಲ್ಲಲೇ ಬೇಕು ಅಂತ ಕಾಂಗ್ರೆಸ್​ ಪಣ ತೊಟ್ಟು ನಿಂತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:57 pm, Tue, 16 April 24

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ