ವಾಹನಗಳಿಗೆ ಗ್ಯಾಸ್ ತುಂಬಿಸುವಾಗ ಅವಘಡ; ಬಾಂಬ್ ರೀತಿ ಸಿಡಿದ ಓಮಿನಿ ಕಾರು
ಅನಧಿಕೃತವಾಗಿ ವಾಹನಗಳಿಗೆ ಗ್ಯಾಸ್ ಸಿಲಿಂಡರ್ ತುಂಬಿಸುವಾಗ ಅವಘಡ ನಡೆದಿದ್ದು, ಬಾಂಬ್ ರೀತಿ ಎರಡು ಬಾರಿ ಬ್ಲಾಸ್ಟ್ ಆದ ಘಟನೆ ದಾವಣಗೆರೆ(Davanagere) ತಾಲೂಕಿನ ದೊಡ್ಡಬೂದಿಹಾಳ್ ಗ್ರಾಮದಲ್ಲಿ ನಡೆದಿದೆ. ಜನನಿಬಿಡ ಪ್ರದೇಶದಲ್ಲಿ ಹಲವು ದಿನಗಳಿಂದ ಓಮಿನಿ ಹಾಗೂ ಆಟೋಗಳಿಗೆ ಅನಧಿಕೃತವಾಗಿ ಎಲ್ಪಿಜಿ ಗ್ಯಾಸ್ ತುಂಬಲಾಗುತ್ತಿತ್ತು. ಇಂದು ಇದ್ದಕ್ಕಿದ್ದಂತೆ ಸಿಲಿಂಡರ್ನಲ್ಲಿ ಲೀಕೇಜ್ ಆಗಿ ಬೆಂಕಿ ಕಾಣಿಸಿಕೊಂಡಿದೆ.
ದಾವಣಗೆರೆ, ಏ.16: ಅನಧಿಕೃತವಾಗಿ ವಾಹನಗಳಿಗೆ ಗ್ಯಾಸ್ ಸಿಲಿಂಡರ್ ತುಂಬಿಸುವಾಗ ಅವಘಡ ನಡೆದಿದ್ದು, ಬಾಂಬ್ ರೀತಿ ಎರಡು ಬಾರಿ ಬ್ಲಾಸ್ಟ್ ಆದ ಘಟನೆ ದಾವಣಗೆರೆ(Davanagere) ತಾಲೂಕಿನ ದೊಡ್ಡಬೂದಿಹಾಳ್ ಗ್ರಾಮದಲ್ಲಿ ನಡೆದಿದೆ. ಜನನಿಬಿಡ ಪ್ರದೇಶದಲ್ಲಿ ಹಲವು ದಿನಗಳಿಂದ ಓಮಿನಿ ಹಾಗೂ ಆಟೋಗಳಿಗೆ ಅನಧಿಕೃತವಾಗಿ ಎಲ್ಪಿಜಿ ಗ್ಯಾಸ್ ತುಂಬಲಾಗುತ್ತಿತ್ತು. ಇಂದು ಇದ್ದಕ್ಕಿದ್ದಂತೆ ಸಿಲಿಂಡರ್ನಲ್ಲಿ ಲೀಕೇಜ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಇನ್ನು ಬೆಂಕಿ ಹೆಚ್ಚಾಗುತ್ತಿದ್ದಂತೆ ಬಾಂಬ್ ರೀತಿ ಓಮಿನಿ ಕಾರು ಸಿಡಿದಿದೆ. ಬಾಂಬ್ ರೀತಿ ಸಿಡಿದ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಇನ್ನು ಈ ಘಟನೆ ಗಾಂಧಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Latest Videos