ಜೈಪುರ: ಮನೆಯಲ್ಲಿ ಸಿಲಿಂಡರ್ ಸ್ಫೋಟ, ಒಂದೇ ಕುಟುಂಬದ ಐವರ ಸಜೀವದಹನ
ಮನೆಯೊಂದರಲ್ಲಿ ಸಿಲಿಂಡರ್ ಸ್ಪೋಟಗೊಂಡು ಕುಟುಂಬದ ಐವರು ಸದಸ್ಯರು ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ವಿಶ್ವಕರ್ಮ ಪೊಲೀಸ್ ಠಾಣೆ ವ್ಯಾಪ್ತಿಯ ಜೈಸಲ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರೆಲ್ಲರೂ ಬಿಹಾರ ನಿವಾಸಿಗಳು. ಈ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು.
ರಾಜಸ್ಥಾನದ ಜೈಪುರದ ಮನೆಯೊಂದರಲ್ಲಿ ಗುರುವಾರ ಬೆಳಗ್ಗೆ ಭಾರೀ ಅಗ್ನಿ ಅವಘಡ(Fire Accident) ಸಂಭವಿಸಿದ್ದು, ಕುಟುಂಬದ ಐವರು ಸಜೀವದಹನವಾಗಿದ್ದಾರೆ. ಅಪಘಾತದಲ್ಲಿ ಪತಿ, ಪತ್ನಿ ಹಾಗೂ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ವಿಶ್ವಕರ್ಮ ಪೊಲೀಸ್ ಠಾಣೆ ವ್ಯಾಪ್ತಿಯ ಜೈಸಲ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರೆಲ್ಲರೂ ಬಿಹಾರ ನಿವಾಸಿಗಳು.
ಈ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು. ಮಾಹಿತಿ ಪಡೆದ ತಕ್ಷಣ ಪೊಲೀಸರು ಮತ್ತು ಆಡಳಿತ ತಂಡಗಳು ಸ್ಥಳಕ್ಕೆ ಧಾವಿಸಿವೆ. ಅಗ್ನಿಶಾಮಕ ದಳದ ವಾಹನಗಳು ಸಾಕಷ್ಟು ಪ್ರಯತ್ನದ ನಂತರ ಬೆಂಕಿಯನ್ನು ಹತೋಟಿಗೆ ತಂದರು.
ಏಕಾಏಕಿ ಸಿಲಿಂಡರ್ ಸ್ಫೋಟಗೊಂಡು ಇಡೀ ಮನೆಗೆ ಬೆಂಕಿ ಹೊತ್ತಿಕೊಂಡಿತ್ತು, ಇದರಿಂದಾಗಿ ಮನೆಯಿಂದ ಯಾರಿಗೂ ಹೊರಬರಲಾಗಲಿಲ್ಲ. ಸದ್ಯ ಪೊಲೀಸ್ ತಂಡ ಈ ಬಗ್ಗೆ ತನಿಖೆ ನಡೆಸುತ್ತಿದೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮತ್ತೊಂದು ಘಟನೆ ಸುಟ್ಟು ಕರಕಲಾದ 9 ತಿಂಗಳ ಮಗು ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 9 ತಿಂಗಳ ಮಗು ಕೂಡ ಸುಟ್ಟು ಕರಕಲಾಗಿತ್ತು, ಬುಡಕಟ್ಟು ಸಮುದಾಯದ ಮಹಿಳೆ ತನ್ನ ನಾಲ್ವರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಸಮೀಪದಲ್ಲೇ ಬಟ್ಟೆ ತೊಳೆಯಲು ಹೋಗಿದ್ದರು. ಸ್ವಲ್ಪ ಸಮಯದ ನಂತರ ಮಹಿಳೆ ಹಿಂತಿರುಗಿ ನೋಡಿದಾಗ ಮನೆಗೆ ಬೆಂಕಿ ಹೊತ್ತಿಕೊಂಡಿರುವುದು ಕಂಡಿತು. ಮಹಿಳೆ ಮತ್ತು ಆಕೆಯ ಇತರ ಸಂಬಂಧಿಕರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು ಆದರೆ ಅಷ್ಟರಲ್ಲಿ ಮುಗ್ಧ ಮಗು ಸಾವನ್ನಪ್ಪಿತ್ತು.
ಮತ್ತಷ್ಟು ಓದಿ:ಪರ್ಫ್ಯೂಮ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ಹೈ ಫ್ಲೇಮ್ ಗ್ಯಾಸ್ನಿಂದ ಹೊತ್ತಿಕೊಂಡ ಬೆಂಕಿ
ಬನ್ಸ್ವಾರಾ ಜಿಲ್ಲೆಯ ಭುಂಗ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಸೋಂಪುರ್ ಗ್ರಾಮದಲ್ಲಿ ಪ್ರಕರಣ ನಡೆದಿದೆ. ಗ್ರಾಮದ ಅನೇಕ ಆದಿವಾಸಿಗಳು ಹುಲ್ಲು ಮತ್ತು ಮಣ್ಣಿನಿಂದ ಮಾಡಿದ ಮಣ್ಣಿನ ಮನೆಗಳಲ್ಲಿ ವಾಸಿಸುತ್ತಿದ್ದರು. ಜನವರಿ 26ರಂದು ಪತ್ನಿ ಭೂಲಾ ದೇವಿ ಬಟ್ಟೆ ಒಗೆಯಲು ತೆರಳಬೇಕಿದ್ದಾಗ 9 ತಿಂಗಳ ಮಗಳು ಕಲ್ಪನಾ ಹಾಗೂ ಮೂವರು ಪುತ್ರರನ್ನು ಮನೆಯಲ್ಲಿ ಬಿಟ್ಟು ಹೋಗಿದ್ದರು.
ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ಅಷ್ಟರಲ್ಲಿ ಮೂವರು ಗಂಡು ಮಕ್ಕಳು ಹೇಗೋ ಮನೆಯಿಂದ ಹೊರ ಬಂದರು. ಆದರೆ, ಏನೂ ತೋಚದ 9 ತಿಂಗಳ ಮಗು ಒಳಗೆ ಸಿಕ್ಕಿಹಾಕಿಕೊಂಡಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:25 am, Thu, 21 March 24