Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇನ್ನೂ 25 ಸಿನಿಮಾ ಮಾಡ್ಬೇಕು ಅಂತಿದ್ರು’: ದ್ವಾರಕೀಶ್ ಆಸೆ ಬಗ್ಗೆ ಪುತ್ರ ಯೋಗಿ ಮಾತು

‘ಇನ್ನೂ 25 ಸಿನಿಮಾ ಮಾಡ್ಬೇಕು ಅಂತಿದ್ರು’: ದ್ವಾರಕೀಶ್ ಆಸೆ ಬಗ್ಗೆ ಪುತ್ರ ಯೋಗಿ ಮಾತು

Mangala RR
| Updated By: ಮದನ್​ ಕುಮಾರ್​

Updated on: Apr 16, 2024 | 10:47 PM

ಹಲವು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ದ್ವಾರಕೀಶ್​ ಅವರಿಗೆ ಸಿನಿಮಾ ಬಗ್ಗೆ ಇದ್ದ ಉತ್ಸಾಹ ಅಪಾರ. ಅನೇಕ ಬಾರಿ ಸೋಲು ಕಂಡರೂ ಅವರ ಉತ್ಸಾಹ ತಗ್ಗಿರಲಿಲ್ಲ. ಇನ್ನೂ 25 ಸಿನಿಮಾಗಳನ್ನು ನಿರ್ಮಾಣ ಮಾಡಬೇಕು ಎಂಬ ಆಸೆ ಅವರಿಗೆ ಇತ್ತು. ಆ ಬಗ್ಗೆ ದ್ವಾರಕೀಶ್​ ಅವರ ಪುತ್ರ ಯೋಗಿ ಮಾತನಾಡಿದ್ದಾರೆ. ಅಪ್ಪನ ಆಸೆಗಳ ಕುರಿತು ಅವರು ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಸಿನಿಮಾ ಮೇಲೆ ಅಪಾರವಾದ ಪ್ರೀತಿ ಇಟ್ಟುಕೊಂಡಿದ್ದ ನಟ ದ್ವಾರಕೀಶ್​ (Dwarakish) ಅವರು ಕನ್ನಡ ಚಿತ್ರರಂಗಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ್ದರು. ನಿರ್ದೇಶಕನಾಗಿ, ನಿರ್ಮಾಪಕನಾಗಿ ಅವರು ಹಲವಾರು ಜನರಿಗೆ ಅವಕಾಶ ನೀಡಿದ್ದರು. ಚಿತ್ರರಂಗದಲ್ಲಿ ಹಲವು ಸೋಲು-ಗೆಲುವುಗಳನ್ನು ಕಂಡಿದ್ದರು. ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗ ಸಿಕ್ಕಾಪಟ್ಟೆ ಹಣ ಸಂಪಾದನೆ ಮಾಡಿದ್ದರು. ಸೋಲು ಬಂದಾಗ ಮನೆ ಮಾರಿಕೊಂಡಿದ್ದರು. ಇಷ್ಟೆಲ್ಲ ಆದರೂ ಕೂಡ ಅವರಿಗೆ ಸಿನಿಮಾರಂಗದ ಮೇಲೆ ಇರುವ ಪ್ರೀತಿ, ಉತ್ಸಾಹ ಕಡಿಮೆ ಆಗಿರಲಿಲ್ಲ. ಕೊನೇ ದಿನಗಳವರೆಗೂ ಅವರು ಹೊಸ ಸಿನಿಮಾಗಳನ್ನು ನೋಡುತ್ತಿದ್ದರು. ವಿನಯ್​ ರಾಜ್​ಕುಮಾರ್​ ನಟನೆಯ ‘ಒಂದು ಸರಳ ಪ್ರೇಮಕಥೆ’ ಸಿನಿಮಾವನ್ನು ನೋಡಿ ನಿರ್ದೇಶಕ ಸಿಂಪಲ್​ ಸುನಿಗೆ ದ್ವಾರಕೀಶ್​ ಮೆಚ್ಚುಗೆ ಸೂಚಿಸಿದ್ದರು ಎಂಬ ವಿಷಯವನ್ನು ಅವರ ಪುತ್ರ ಯೋಗಿ (Yogi Dwarakish) ಈಗ ಹಂಚಿಕೊಂಡಿದ್ದಾರೆ. ‘ಇನ್ನೂ 25 ಸಿನಿಮಾಗಳನ್ನು ಮಾಡಬೇಕು ಅಂತ ಅವರು ಹೇಳುತ್ತಿದ್ದರು. ಕೆಜಿಎಫ್​ ದೇಶಾದ್ಯಂತ ಹಿಟ್​ ಆದಾಗ ಒಂದು ಕನ್ನಡ ಸಿನಿಮಾ ಇಷ್ಟು ದೊಡ್ಡ ಮಟ್ಟಕ್ಕೆ ಹಿಟ್​ ಆಗಿದೆ ಎಂದು ಖುಷಿಪಟ್ಟಿದ್ದರು. ಅವರಿಗೆ ಸಿನಿಮಾ ಮುಖ್ಯ. ನನ್ನ ಸಿನಿಮಾ, ನಿನ್ನ ಸಿನಿಮಾ ಎಂಬುದು ಮುಖ್ಯವಲ್ಲ. ಇತ್ತೀಚೆಗೆ ಆಚೆ ಬರಲು ಆಗದಿದ್ದರೂ ಮನೆಯಲ್ಲೇ ಕುಳಿತು ಸಿನಿಮಾ ನೋಡುತ್ತಿದ್ದರು. ‘ಒಂದು ಸರಳ ಪ್ರೇಮಕತೆ’ ನೋಡಿ ಸುನಿ ಬಳಿ ಮಾತನಾಡಿದರು. ಸಿನಿಮಾದಿಂದ ಸಿನಿಮಾಗೆ ವಿನಯ್​ ಇಂಪ್ರೂ ಆಗುತ್ತಿದ್ದಾನೆ ಅಂತ ಹೇಳಿದ್ದರು’ ಎಂದು ದ್ವಾರಕೀಶ್ ಪುತ್ರ ಯೋಗಿ ಹೇಳಿದ್ದಾರೆ. ‘ಹೆಚ್ಚಿನ ಆರೋಗ್ಯ ಸಮಸ್ಯೆ ಇರಲಿಲ್ಲ. 15 ದಿನಗಳಿಂದ ಶೀತ ಮತ್ತು ಕೆಮ್ಮು ಆಗಿತ್ತು. ಅದು ಧೂಳಿನಿಂದ ಅಷ್ಟೇ. ನಿನ್ನೆ ರಾತ್ರಿ ಸ್ವಲ್ಪ ಹೊಟ್ಟೆನೋವು ಬಂತು. ಯಾವಾಗಲೂ ಅವರು ಉತ್ಸಾಹದಿಂದ ಇರುತ್ತಿದ್ದರು’ ಎಂದು ತಂದೆಯ ಬಗ್ಗೆ ಯೋಗಿ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.