Dwarakish Death: ‘ದ್ವಾರಕೀಶ್ ಅವರನ್ನು ನೋಡಿ ನಾವು ಕಲಿತಿದ್ದೇವೆ’; ಟೆನ್ನಿಸ್​ ಕೃಷ್ಣ

Dwarakish Death: ‘ದ್ವಾರಕೀಶ್ ಅವರನ್ನು ನೋಡಿ ನಾವು ಕಲಿತಿದ್ದೇವೆ’; ಟೆನ್ನಿಸ್​ ಕೃಷ್ಣ

TV9 Web
| Updated By: ಮದನ್​ ಕುಮಾರ್​

Updated on: Apr 16, 2024 | 9:07 PM

‘ದ್ವಾರಕೀಶ್​ ಅವರ ಬ್ಯಾನರ್​ನಲ್ಲಿ ನಟಿಸುತ್ತೇನೆ ಅಂತ ನಾನು ಕನಸಿಲ್ಲೂ ಊಹಿಸಿರಲಿಲ್ಲ. ನನಗೆ ಅವರು ಅವಕಾಶ ಕೊಟ್ಟರು. ಚೆನ್ನಾಗಿ ಅಭಿನಯ ಮಾಡ್ತೀಯ ಕಣಯ್ಯ ಎಂದು ನನ್ನ ಬೆನ್ನು ತಟ್ಟಿದ್ದರು. ಚಿತ್ರೀಕರಣದ ಸೆಟ್​ನಲ್ಲಿ ತಮಾಷೆಯಾಗಿ ಇರುತ್ತಿದ್ದರು. ಅವರಿಂದ ನಾನು ಕಲಿತಿದ್ದೇನೆ. ದ್ವಾರಕೀಶ್​ ಅವರ ಮಕ್ಕಳ ಸಿನಿಮಾದಲ್ಲೂ ನಾನು ನಟಿಸಿದ್ದೇನೆ’ ಎಂದು ಕನ್ನಡದ ಖ್ಯಾತ ಹಾಸ್ಯ ನಟ ಟೆನ್ನಿಸ್​ ಕೃಷ್ಣ ಹೇಳಿದ್ದಾರೆ.

ನಿರ್ಮಾಪಕನಾಗಿ ದ್ವಾರಕೀಶ್​ (Dwarakish) ಅವರು ಅನೇಕರಿಗೆ ಅವಕಾಶ ನೀಡಿದ್ದರು. ಇಂದು ದ್ವಾರಕೀಶ್​ ನಮ್ಮೊಂದಿಗಿಲ್ಲ. 81ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ದ್ವಾರಕೀಶ್​ ನಿಧನರಾಗಿದ್ದು, ಅವರ ಜೊತೆಗಿನ ಒಡನಾಟವನ್ನು ಸೆಲೆಬ್ರಿಟಿಗಳು ಸ್ಮರಿಸಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಟೆನ್ನಿಸ್​ ಕೃಷ್ಣ (Tennis Krishna) ಕೂಡ ದ್ವಾರಕೀಶ್​ ಬಗ್ಗೆ ಮಾತನಾಡಿದ್ದಾರೆ. ‘ಚಿಕ್ಕ ವಯಸ್ಸಿನಿಂದಲೂ ನಾನು ಅವರ ಅಭಿಮಾನಿ. ಮೊದಲ ಬಾರಿಗೆ ಕನ್ನಡ ಸಿನಿಮಾದ ಚಿತ್ರೀಕರಣವನ್ನು ಹೊರ ದೇಶದಲ್ಲಿ ಅವರು ಮಾಡಿದರು. ಅವರ ಬ್ಯಾನರ್​ನಲ್ಲಿ ನಾನು ನಟಿಸುತ್ತೇನೆ ಅಂತ ಕನಸಿಲ್ಲೂ ಅಂದುಕೊಂಡಿರಲಿಲ್ಲ. ಅವರು ನನಗೆ ಅವಕಾಶ ನೀಡಿದರು. ಚೆನ್ನಾಗಿ ಮಾಡುತ್ತೀಯ ಕಣಯ್ಯ ಅಂತ ಬೆನ್ನು ತಟ್ಟಿದ್ದರು. ಸೆಟ್​ನಲ್ಲಿ ಅವರು ತಮಾಷೆಯಾಗಿ ಇರುತ್ತಿದ್ದರು. ಅವರ ಮಕ್ಕಳ ಸಿನಿಮಾದಲ್ಲೂ ನಾನು ನಟಿಸಿದ್ದೇನೆ. ಇಷ್ಟು ಬೇಗ ದ್ವಾರಕೀಶ್​ ಅವರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ಆದಂತಹ ನಷ್ಟ. ಮಕ್ಕಳ ರೂಪದಲ್ಲಿ ಅವರು ಈಗಲೂ ಇದ್ದಾರೆ. ಕಲಾವಿದರಿಗೆ ಸಾವಿಲ್ಲ. ಮೊದಲು ಮದ್ರಾಸ್​ನಲ್ಲಿ ಮನೆ ಕಟ್ಟಿದ ಕನ್ನಡದ ನಟ ದ್ವಾರಕೀಶ್​. ಮೊದಲು ಐಷಾರಾಮಿ ಕಾರು ಖರೀದಿಸಿದ್ದು ಅವರೇ. ಹಲವು ಕಡೆ ಅವರು ಆಸ್ತಿ ಹೊಂದಿದ್ದರು. ಸದಾಶಿವ ನಗರದಲ್ಲಿ ಅವರ ಪ್ರಾಪರ್ಟಿ ಇತ್ತು. ಬಹಳಷ್ಟು ಗಳಿಸಿದ್ದರು. ಆದರೆ ಎಲ್ಲವನ್ನೂ ಕಳೆದುಕೊಂಡರು. ಡಾ. ರಾಜ್​ಕುಮಾರ್​, ವಿಷ್ಣುವರ್ಧನ್​ ಜೊತೆ ಹೊಸಬರೊಂದಿಗೂ ಕೆಲಸ ಮಾಡಿದ್ದರು. ಅವರನ್ನು ಮರೆಯಲು ಸಾಧ್ಯವಿಲ್ಲ. ಅವರನ್ನು ನೋಡಿ ನಾವೆಲ್ಲ ಕಲಿತಿದ್ದೇವೆ. ಅವರಿಗೆ ಹಾಸ್ಯ ಪ್ರಜ್ಞೆ ಇತ್ತು. ಅವರ ಜೊತೆ ಒಂದೆರಡು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಇನ್ನೂ ಏನಾದರೂ ಮಾಡಬೇಕು ಎಂಬ ಆಸೆ ಅವರಿಗೆ ಇತ್ತು. ಇತ್ತೀಚೆಗೆ ಹೆಚ್ಚು ಓಡಾಡಲು ಅವರಿಗೆ ಆಗುತ್ತಿರಲಿಲ್ಲ. ಅವರ ಮಕ್ಕಳು ಮುಂದುವರಿಸಿಕೊಂಡು ಹೋಗುತ್ತಾರೆ’ ಎಂದು ದ್ವಾರಕೀಶ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.