ಬೆಂಗಳೂರು: ನಕಲಿ ಚಿನ್ನಾಭರಣ ಅಡವಿಟ್ಟು ಹಣ ಪಡೆದು ಬ್ಯಾಂಕ್ಗೆ ವಂಚಿಸಿರುವ ಘಟನೆ ಬೆಂಗಳೂರಿನ ಬಸವನಗುಡಿ ಶಾಖೆಯ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ನಲ್ಲಿ ನಡೆದಿದೆ.
ರಾಜೀವ್ ಎಂಬಾತ ಇದೇ ಬ್ಯಾಂಕ್ ನಲ್ಲಿ ಅಪ್ರೈಸರ್ ಆಗಿ ಕೆಲಸ ಮಾಡ್ತಿದ್ದ. ಈತ ವೆಂಕಟೇಶ್ ಎಂಬಾತನ ಜೊತೆ ಸೇರಿ ಬ್ಯಾಂಕ್ಗೆ ಲಕ್ಷಾಂತರ ರೂ. ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಸಿಲ್ವರ್ ಮೇಲೆ ಚಿನ್ನದ ಲೇಪವನ್ನ ಮಾಡಿ 409 ತೂಕದ ಚಿನ್ನಾಭರಣವನ್ನ ಬ್ಯಾಂಕ್ನಲ್ಲಿ ಅಡಮಾನ ಇಟ್ಟಿದ್ದ ವೆಂಕಟೇಶ್ ಬ್ಯಾಂಕ್ನಿಂದ 6 ಲಕ್ಷ ರೂ. ಸಾಲ ಪಡೆದಿದ್ದ.
343 ಗ್ರಾಂ ತೂಕದ ವಿವಿಧ ನಕಲಿ ಚಿನ್ನಾಭರಣಗಳನ್ನ ಇಟ್ಟು 6 ಲಕ್ಷದ 10 ಸಾವಿರ ಪಡೆದಿದ್ದ ಆರೋಪಿ ರಾಜೀವ್ ಬಳಿಕ ತನ್ನ ತಮ್ಮನ ರಾಘವೇಂದ್ರನ ಹೆಸ್ರಲ್ಲೂ 10 ಲಕ್ಷ ರೂ. ಪಡೆದಿದ್ದ. ಅದು ಸಾಲದೆಂಬಂತೆ ಆರೋಪಿ ರಾಘವೇಂದ್ರ ಪತ್ನಿ ಲಾವಣ್ಯ ಹೆಸ್ರಲ್ಲಿ 4 ಲಕ್ಷದ 80 ಸಾವಿರ ಹಣ ಪಡೆದಿದ್ದ.
ಅನುಮಾನ ಬರದಂತೆ ಅಲ್ವ ಸ್ಪಲ್ವ ಹಣವನ್ನ ಪಾವತಿ ಮಾಡ್ತಿದ್ದ ಆರೋಪಿಗಳು ಬಳಿಕ 8 ಲಕ್ಷ ಹಣವನ್ನ ಬಾಕಿ ಉಳಿಸಿಕೊಂಡು ಬ್ಯಾಂಕ್ಗೆ ವಂಚನೆ ಮಾಡಿದ್ದಾರೆ. ನಂಬಿಕೆ ಮೇರೆಗೆ ಬ್ಯಾಂಕ್ ಸಿಬ್ಬಂದಿಗಳು ಚಿನ್ನಾಭರಣಗಳನ್ನ ಸರಿಯಾಗಿ ಚೆಕ್ ಮಾಡಿಲ್ಲ. ಕೊನೆಗೆ ಇವರ ವಂಚನೆ ತಿಳಿದ ಬ್ಯಾಂಕ್ ಸಿಬ್ಬಂದಿ ಶಿವಶಂಕರ್ ಎಂಬುವವರು ದೂರು ದಾಖಲಿಸಿದ್ದಾರೆ. ಸದ್ಯ ಬಸವನಗುಡಿ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಚಿನ್ನವನ್ನು ಕದ್ದು ಸಾಗಿಸಲು ಈ ಬುದ್ಧಿವಂತರು ಬಳಸಿದ ತಂತ್ರವೇನು ಗೊತ್ತಾ?
Published On - 1:27 pm, Mon, 30 November 20