ಸ್ಮಾರ್ಟ್ ಕ್ಲಾಸ್‍ನಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ತೋರಿಸಿದ ಶಿಕ್ಷಕ, ಮುಂದೇನಾಯ್ತು ಗೊತ್ತಾ?

ಶಾಲೆಯ ಶಿಕ್ಷಕನೋರ್ವ ಸ್ಮಾರ್ಟ್ ಕ್ಲಾಸ್‍ನ ಎಲ್‍ಸಿಡಿ ಪರದೆ ಮೇಲೆ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋವನ್ನು ತೋರಿಸಿರುವ ಪ್ರಕರಣ ಬೆಳಕೆಗೆ ಬಂದಿದೆ.

ಸ್ಮಾರ್ಟ್ ಕ್ಲಾಸ್‍ನಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ತೋರಿಸಿದ ಶಿಕ್ಷಕ, ಮುಂದೇನಾಯ್ತು ಗೊತ್ತಾ?
ಸಾಂದರ್ಭಿಕ ಚಿತ್ರ
Follow us
|

Updated on: Apr 30, 2023 | 5:51 PM

ಚಂಡೀಗಢ: ಕೊರೊನಾ ಕಾರಣದಿಂದಾಗಿ ದೇಶದಲ್ಲಿ ಕಳೆದ ಹಲವು ದಿನಗಳಿಂದ ಆನ್​ಲೈನ್ ಕ್ಲಾಸ್ ಪರಿಯಿಸಿದ್ದು, ಇದೀಗ ಆನ್​ಲೈನ್​ ನಲ್ಲಿ (Online Class) ಒಂದಲ್ಲ ಒಂದು ಯಡವಟ್ಟುಗಳು ನಡೆಯುತ್ತಲೇ ಇವೆ. ಅಶ್ಲೀಲ ವಿಡಿಯೋಗಳು ಪ್ಲೇ ಆಗಿದ್ದು, ವಿದ್ಯಾರ್ಥಿಗಳು(Students) ಹಾಗೂ ಪೋಷಕರು ಮುಜುಗರಕ್ಕೀಡಾದ ಪ್ರಕರಣಗಳು ನಡೆದಿವೆ. ಆದ್ರೆ, ಇಲ್ಲೋರ್ವ ಶಿಕ್ಷಕನೊಬ್ಬ  ಸ್ಮಾರ್ಟ್ ಕ್ಲಾಸ್‍ನ ಎಲ್‍ಸಿಡಿ ಪರದೆ ಮೇಲೆ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋವನ್ನು ತೋರಿಸಿ ಪೊಲೀಸರ ಅತಿಥಿಯಾಗಿದ್ದಾನೆ.

ಇದನ್ನೂ ಓದಿ: ಶಾಲಾ ವಿದ್ಯಾರ್ಥಿಗಳನ್ನು ಲೈಂಗಿಕ ತೃಷೆಗೆ ಬಳಸಿಕೊಂಡ ಆರೋಪ, 6 ಶಿಕ್ಷಕಿಯರ ಬಂಧನ

ಹೌದು..ಶಾಲೆಯೊಂದರ ಸ್ಮಾರ್ಟ್ ಕ್ಲಾಸ್‍ನ ಎಲ್‍ಸಿಡಿ ಪರದೆ ಮೇಲೆ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋವನ್ನು (Obscene Video) ತೋರಿಸಿದ ಶಿಕ್ಷಕನನ್ನು ಪಂಜಾಬ್ (Punjab) ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ರಾಜೀವ್ ಶರ್ಮಾ ಎಂದು ಗುರುತಿಸಲಾಗಿದೆ. ಆರೋಪಿ ಗೋಬಿಂದಪುರ ಮೊಹಲ್ಲಾದ (Gobindpura Mohalla) ಸರ್ಕಾರಿ ಮಿಡಲ್ ಸ್ಮಾರ್ಟ್ ಶಾಲೆಯ ಶಿಕ್ಷಕ.

ರಾಜೀವ್ ಶರ್ಮಾ ಆರನೇ ತರಗತಿಯ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ತೋರಿಸಿದ್ದ. ಅಲ್ಲದೆ ಅಸಭ್ಯವಾಗಿ ಸನ್ನೆ ಮಾಡುತ್ತಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಶಾಲಾ ಬಾಲಕಿಯೊಬ್ಬಳ ತಂದೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ಮೇಲೆ ಪೋಕ್ಸೊ (POCSO) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸತ್ನಾಂಪುರನ (Satnampura) ಠಾಣಾಧಿಕಾರಿ ಗುರಿಂದರ್ಜಿತ್ ಸಿಂಗ್ ತಿಳಿಸಿದ್ದಾರೆ.

ಇನ್ನಷ್ಟು ಕ್ರೈ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ