AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಅಧಿಕಾರಿ​ ಎಂದು ಹೇಳಿಕೊಂಡು, ಕೆಲಸ ಕೊಡಿಸುವುದಾಗಿ ನಂಬಿಸಿ ಕರೆದೊಯ್ದು ಮಾಡೆಲ್ ಮೇಲೆ ಅತ್ಯಾಚಾರ

ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡು, ಕೆಲಸ ಕೊಡಿಸುವುದಾಗಿ ನಂಬಿಸಿ ಕರೆದೊಯ್ದು ಮಾಡೆಲ್ ಒಬ್ಬರ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸರ್ಕಾರಿ ಅಧಿಕಾರಿ​ ಎಂದು ಹೇಳಿಕೊಂಡು, ಕೆಲಸ ಕೊಡಿಸುವುದಾಗಿ ನಂಬಿಸಿ ಕರೆದೊಯ್ದು ಮಾಡೆಲ್ ಮೇಲೆ ಅತ್ಯಾಚಾರ
ಗುಜರಾತ್ ಪೊಲೀಸ್( ಸಾಂದರ್ಭಿಕ ಚಿತ್ರ)Image Credit source: India Today
ನಯನಾ ರಾಜೀವ್
|

Updated on: May 01, 2023 | 8:08 AM

Share

ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡು, ಕೆಲಸ ಕೊಡಿಸುವುದಾಗಿ ನಂಬಿಸಿ ಕರೆದೊಯ್ದು ಮಾಡೆಲ್ ಒಬ್ಬರ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ವಿರಾಜ್ ಪಟೇಲ್ ಎಂದು ಗುರುತಿಸಿದ್ದು ಬಂಧಿಸಲಾಗಿದೆ, ಯಾರೊಂದಿಗೋ ಜಗಳವಾಡಿದ್ದ ಕಾರಣ ಆತನನ್ನು ಪೊಲೀಸ್​ ಠಾಣೆಗೆ ಕರೆದೊಯ್ಯಲಾಗಿತ್ತು, ಅಲ್ಲಿ ವಿಚಾರಣೆ ವೇಳೆ ಹಲವು ವಿಚಾರಗಳು ಬೆಳಕಿಗೆ ಬಂದಿವೆ.

ಮಲ್ಪಿಪ್ಲೆಕ್ಸ್​ನಲ್ಲಿ ಯಾರೊಂದಿಗೂ ಜಗಳವಾಡಿದ್ದರು, ಮಾಡಲ್​ ಜತೆಗೆ ಅವರನ್ನು ವಡೋದರಾದ ಪೊಲೀಸ್​ ಠಾಣೆಗೆ ಕರೆದೊಯ್ಯಲಾಯಿತು, ಆರೋಪಿಯು ಮೊದಲು ಥಾನು ಸಿನಿಮಾ ವೀಕ್ಷಿಸಲು ಬಂದಿದ್ದಾಗಿ ಹೇಳಿದ್ದರು.

ಬಳಿಕ ಪೊಲೀಸರು ಅವರ ಗುರುತನ್ನು ಪರಿಶೀಲಿಸಿದಾಗ ಪ್ಯಾನ್​ ಕಾರ್ಡ್​ನಲ್ಲಿ ಬೇರೆ ಉಪನಾಮವಿತ್ತು, ಆಧಾರ್​ ಕಾರ್ಡ್​ನಲ್ಲಿ ಯಾವುದೇ ಉಪನಾಮವಿರಲಿಲ್ಲ.

ಮತ್ತಷ್ಟು ಓದಿ: ಸ್ಮಾರ್ಟ್ ಕ್ಲಾಸ್‍ನಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ತೋರಿಸಿದ ಶಿಕ್ಷಕ, ಮುಂದೇನಾಯ್ತು ಗೊತ್ತಾ?

ಪಟೇಲ್ ಅವರು ಸಿಎಂಒದಲ್ಲಿ ಕೆಲಸ ಮಾಡುತ್ತಿಲ್ಲ ಅಥವಾ ಗಿಫ್ಟ್ ಸಿಟಿಯ ಅಧ್ಯಕ್ಷರೂ ಅಲ್ಲ ಎಂಬುದು ತಿಳಿದುಬಂದಿದೆ. ಆತನ ನಿಜವಾದ ಚಹರೆ ಬೆಳಕಿಗೆ ಬಂದ ನಂತರ ಆತನೊಂದಿಗೆ ಬಂದಿದ್ದ ಮುಂಬೈನ ಮಾಡೆಲ್, ಗಿಫ್ಟ್ ಸಿಟಿಯ ಬ್ರಾಂಡ್ ಅಂಬಾಸಿಡರ್ ಆಗಿ ಕೆಲಸ ಕೊಡಿಸುವ ನೆಪದಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಮತ್ತು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಎಂದು ದೂರು ನೀಡಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಈತ ಗಾಂಧಿನಗರದ ನಿವಾಸಿ ಎಂಬುದು ತಿಳಿದುಬಂದಿದ್ದು, ಪ್ರಕರಣದ ಮುಂದಿನ ತನಿಖೆಯನ್ನು ನಗರ ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ ಎಂದು ಎಸಿಪಿ ತಿಳಿಸಿದ್ದಾರೆ. ಆತನ ವಿರುದ್ಧ ಸೆಕ್ಸನ್ 417 (ವಂಚನೆ), 467 (ನಕಲಿ), ಮತ್ತು 376 (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ