ಕಾನ್ಪುರ: ಶಿಕ್ಷಕಿಯ ಪ್ರಿಯಕರನಿಂದ ವಿದ್ಯಾರ್ಥಿಯ ಹತ್ಯೆ

|

Updated on: Oct 31, 2023 | 3:34 PM

ಶಿಕ್ಷಕಿಯ ಪ್ರಿಯಕರನೊಬ್ಬ ವಿದ್ಯಾರ್ಥಿಯನ್ನು ಹತ್ಯೆ ಮಾಡಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ. ಇದು ಅಪಹರಣವೆಂದು ತೋರಿಸಲು ಮನೆಗೆ ಪತ್ರವೊಂದನ್ನು ಕಳುಹಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 10ನೇ ತರಗತಿ ವಿದ್ಯಾರ್ಥಿಯನ್ನು ಟ್ಯೂಷನ್ ಶಿಕ್ಷಕಿ ರಚಿತಾ ಅವರ ಪ್ರಿಯಕರ ಪ್ರಭಾತ್ ಶುಕ್ಲಾ ಸ್ಟೋರ್ ರೂಮ್‌ಗೆ ಕರೆದೊಯ್ದಿದ್ದರು.

ಕಾನ್ಪುರ: ಶಿಕ್ಷಕಿಯ ಪ್ರಿಯಕರನಿಂದ ವಿದ್ಯಾರ್ಥಿಯ ಹತ್ಯೆ
ಪೊಲೀಸ್
Image Credit source: NDTV
Follow us on

ಶಿಕ್ಷಕಿಯ ಪ್ರಿಯಕರನೊಬ್ಬ ವಿದ್ಯಾರ್ಥಿಯನ್ನು ಹತ್ಯೆ ಮಾಡಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ. ಇದು ಅಪಹರಣವೆಂದು ತೋರಿಸಲು ಮನೆಗೆ ಪತ್ರವೊಂದನ್ನು ಕಳುಹಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 10ನೇ ತರಗತಿ ವಿದ್ಯಾರ್ಥಿಯನ್ನು ಟ್ಯೂಷನ್ ಶಿಕ್ಷಕಿ ರಚಿತಾ ಅವರ ಪ್ರಿಯಕರ ಪ್ರಭಾತ್ ಶುಕ್ಲಾ ಸ್ಟೋರ್ ರೂಮ್‌ಗೆ ಕರೆದೊಯ್ದಿದ್ದರು.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ರಚಿತಾ ನಿನ್ನನ್ನು ಕರೆಯುತ್ತಿದ್ದಾರೆ ಎಂದು ನಂಬಿಸಿ ಪ್ರಭಾತ್ ಸ್ಟೋರ್​ ರೂಮ್​ಗೆ ಕರೆದೊಯ್ದಿದ್ದ.

ವಿದ್ಯಾರ್ಥಿ ಮತ್ತು ಪ್ರಭಾತ್ ಒಟ್ಟಿಗೆ ಕೋಣೆಯನ್ನು ಪ್ರವೇಶಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 20 ನಿಮಿಷಗಳ ನಂತರ ಪ್ರಭಾತ್ ಹೊರಬರುತ್ತಾನೆ, ಆದರೆ ವಿದ್ಯಾರ್ಥಿ ಹೊರಬರಲಿಲ್ಲ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ನಂತರ ಯಾರೂ ಕೊಠಡಿಗೆ ಪ್ರವೇಶಿಸಿಲ್ಲ.

ಮತ್ತಷ್ಟು ಓದಿ: ದೆಹಲಿ: ಬಾಡಿಗೆ ಮನೆ ತೋರಿಸುವ ನೆಪದಲ್ಲಿ ಕರೆದೊಯ್ದು ಮಹಿಳೆ ಮೇಲೆ ಪ್ರಾಪರ್ಟಿ ಡೀಲರ್ ಮತ್ತವನ ಸ್ನೇಹಿತನಿಂದ ಸಾಮೂಹಿಕ ಅತ್ಯಾಚಾರ

ನಂತರ ಆರೋಪಿ ಬಟ್ಟೆ ಬದಲಾಯಿಸಿಸ್ಕೂಟರ್‌ನಲ್ಲಿ ಹೋಗುತ್ತಿರುವುದು ಕಂಡು ಬಂದಿದೆ. ಪ್ರಕರಣದಲ್ಲಿ ಪ್ರಭಾತ್, ರಚಿತಾ ಮತ್ತು ಅವರ ಪ್ರಿಯಕರ ಆರ್ಯನ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಬೆದರಿಕೆ ಪತ್ರವು ಕುಟುಂಬದವರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರವಾಗಿತ್ತು. ಕುಟುಂಬಕ್ಕೆ ವಿದ್ಯಾರ್ಥಿಯನ್ನು ಅಪಹರಿಸಿರುವ ರೀತಿಯ ಪತ್ರವೊಂದನ್ನು ಕಳುಹಿಸಲಾಗಿತ್ತು, ಆದರೆ ಪತ್ರ ಅವರ ಮನೆಯನ್ನು ತಲುಪುವಷ್ಟರಲ್ಲಿ ವಿದ್ಯಾರ್ಥಿಯ ಪ್ರಾಣಪಕ್ಷಿ ಹಾರಿಹೋಗಿತ್ತು.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ