ನಾಗೋಲ್: ತೆಲಂಗಾಣದ ನಾಗೋಲ್‌ನಲ್ಲಿ ದಾರುಣ ಘಟನೆಯೊಂದು ನಡೆದಿದೆ. ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರು ರಾತ್ರಿ ನಿದ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಅವರ ಪೋಷಕರು ಅಂಧರಾಗಿದ್ದರಿಂದ ಅವರಿಗೆ ತಮ್ಮ ಮಗನ ಸಾವಿನ ಬಗ್ಗೆ ತಿಳಿದಿರಲಿಲ್ಲ. ನಾಲ್ಕು ದಿನಗಳ ನಂತರ ನೆರೆಹೊರೆಯವರು ದುರ್ವಾಸನೆ ಅನುಭವಿಸಿದ ನಂತರ ಈ ಘಟನೆ ಪತ್ತೆಯಾಗಿದೆ.
ಅಂಧ ದಂಪತಿಗಳಾದ ಕೆ. ರಮಣ ಮತ್ತು ಕೆ. ಶಾಂತಾ ಕುಮಾರಿ ಅವರಿಗೆ 4 ದಿನಗಳ ಹಿಂದೆ ಅವರ ಮಗ ಪ್ರಮೋದ್ ರಾತ್ರಿ ಊಟ ಬಡಿಸಿದ್ದರು. ನಂತರ ಮಗ ಮಲಗಿದ್ದನು. ದುರದೃಷ್ಟವಶಾತ್, ಆತ ನಿದ್ರೆ ಮಾಡುತ್ತಿದ್ದಾಗಲೇ ಸಾವನ್ನಪ್ಪಿದ್ದನು. ಆದರೆ, ಅವರ ಕುರುಡುತನದಿಂದಾಗಿ ಅವರಿಗೆ ತಮ್ಮ ಮಗ ತೀರಿಕೊಂಡಿದ್ದಾನೆ ಎಂದು ಅವನ ಹೆತ್ತವರಿಗೆ ತಿಳಿಯಲೇ ಇಲ್ಲ.
ಇದನ್ನೂ ಓದಿ: ತೆಲಂಗಾಣ: ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ, ತಾನೂ ಆತ್ಮಹತ್ಯೆಗೆ ಶರಣಾದ ತಂದೆ
ಪ್ರಮೋದ್ ನಿದ್ರೆಯಲ್ಲಿದ್ದಾಗಲೇ ಸಾವನ್ನಪ್ಪಿರುವ ಶಂಕೆ ಇದೆ. ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ. ನೆರೆಹೊರೆಯವರು ದಂಪತಿಯ ಮನೆಗೆ 4 ದಿನಗಳ ನಂತರ ಪ್ರವೇಶಿಸಿದರು. ಪೋಲೀಸ್ ಅಧಿಕಾರಿಯ ಪ್ರಕಾರ, ತಮ್ಮ ಮಗನ ಸಾವಿನ ಬಗ್ಗೆ ತಿಳಿದ ನಂತರ, ಪೋಷಕರು ಆಘಾತಕ್ಕೊಳಗಾದರು. ಅಲ್ಲದೆ ಮಗ ಊಟ ಬಡಿಸಿದ ಬಳಿಕ 4 ದಿನಗಳ ಕಾಲ ಅವರು ಆಹಾರ ಅಥವಾ ನೀರು ಏನೂ ಸೇವಿಸದೆ ರೂಂನಲ್ಲೇ ಇದ್ದರು. ಅವರ ಸ್ಥಿತಿ ಕೈಕಾಲು ಕೂಡ ಚಲಿಸಲಾರದಂತಾಗಿತ್ತು.
ನಾಲ್ಕು ದಿನಗಳ ನಂತರ, ಮನೆಯಿಂದ ದುರ್ವಾಸನೆ ಬರುತ್ತಿದ್ದು, ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿ ಒಳಪ್ರವೇಶಿಸಿದಾಗ ದಂಪತಿಗಳ ಬಾಯಿಯಿಂದ ನೊರೆ ಬರುತ್ತಿದ್ದುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಆ ಮನೆಯಲ್ಲಿ ಮಗನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ: Shocking News: ಗಂಡ ಬೆಳ್ಳಗಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಹೆಂಡತಿ!
ನಂತರ ಪೊಲೀಸ್ ಅಧಿಕಾರಿಗಳು ದುಃಖಿತ ದಂಪತಿಗಳಿಗೆ ಸ್ನಾನ ಮಾಡಿಸಿ, ಆಹಾರ ಮತ್ತು ನೀರನ್ನು ತಿನ್ನಿಸಿದ್ದಾರೆ. ಸರೂರ್ನಗರದಲ್ಲಿ ವಾಸಿಸುವ ಅವರ ಹಿರಿಯ ಮಗನಿಗೂ ಮಾಹಿತಿ ನೀಡಿದ್ದಾರೆ. ಮೃತನ ಶವವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ