ಬೆಂಗಳೂರು: ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ನೀಲಸಂದ್ರದಲ್ಲಿ ಮಾರಿಯಮ್ಮ ದೇವಾಲಯದ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ತಡರಾತ್ರಿ ನಡೆದಿದೆ.
ಕಳೆದ 5 ವರ್ಷಗಳಿಂದ ದೇಗುಲದ ಹುಂಡಿ ಹಣ ತೆಗೆದಿರಲಿಲ್ಲ. ಲಕ್ಷಾಂತರ ಮೌಲ್ಯದ ಹುಂಡಿ ಹಣ ಹಾಗು ದೇವರ ಚಿನ್ನಾಭರಣ ಎಗರಿಸಿ ಖದೀಮರು ಎಸ್ಕೇಪ್ ಆಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಏರಿಯಾದ ಸಿಸಿಟಿವಿ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.
Published On - 12:53 pm, Sat, 30 November 19