AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುತ್ರನ ಬರ್ತಡೇ ಸಂಭ್ರಮದಲ್ಲಿದ್ದ ತಂದೆಯ ಹತ್ಯೆ! ಆರೋಪಿಗಳು ಅರೆಸ್ಟ್​; ಕೊಲೆಗೆ ಕಾರಣ ಬಾಯ್ಬಿಟ್ಟ ಹಂತಕರು

ಆ ತಂದೆ ಮಗನ ಬರ್ತಡೇ ಸಂಭ್ರಮದಲ್ಲಿದ್ದ. ಪುತ್ರನಿಗಾಗಿ ಹೊಸ ಬಟ್ಟೆ, ಕೇಕ್ ಸಹ ತಂದಿದ್ದ. ಆದ್ರೆ, ಪುತ್ರನ ಹುಟ್ಟುಹಬ್ಬದ ದಿನವೇ ಆ ತಂದೆಗೆ ಸೆಚ್ಕ್ ರೆಡಿಯಾಗಿತ್ತು. ಇನ್ನೇನೂ ಮಗನ ಬರ್ತಡೇ ಕೇಕ್ ಕಟ್ ಮಾಡಬೇಕು ಎನ್ನುವಷ್ಟರಲ್ಲಿ ಹಂತಕರು ಮನೆ ಬಾಗಿಲ ಬಳಿಗೆ ಬಂದು, ಕೊಲೆ ಮಾಡಿದ್ದರು. ಇದೀಗ ಆ ಹಂತಕರು ಸಿಕ್ಕಿಬಿದ್ದಿದ್ದು, ಹತ್ಯೆಗೆ ಕಾರಣವೇನು? ಎಂಬುದನ್ನು ಬಾಯ್ಬಿಟಿದ್ದಾರೆ.

ಪುತ್ರನ ಬರ್ತಡೇ ಸಂಭ್ರಮದಲ್ಲಿದ್ದ ತಂದೆಯ ಹತ್ಯೆ! ಆರೋಪಿಗಳು ಅರೆಸ್ಟ್​; ಕೊಲೆಗೆ ಕಾರಣ ಬಾಯ್ಬಿಟ್ಟ ಹಂತಕರು
ಆರೋಪಿಗಳು, ಮೃತ ವ್ಯಕ್ತಿ
Follow us
ವೀರೇಶ್ ದಾನಿ, ಬಳ್ಳಾರಿ-ವಿಜಯನಗರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 23, 2023 | 10:36 AM

ಬಳ್ಳಾರಿ, ಜು.23: ಜುಲೈ 19 ರ ಸಂಜೆ ಬಳ್ಳಾರಿ(Ballari) ಯ ಗುಗ್ಗರಹಟ್ಟಿಯ ಕೃಷ್ಣಾ ಕಾಲೋನಿಯ ನಿವಾಸಿ ಮಹೆಬೂಬಬಾಷಾ 5 ವರ್ಷದ ಪುತ್ರ ಸಾನಿಯಾ ನಿಜಾಮ್​ನ ಬರ್ತಡೇ ಸಂಭ್ರಮದಲ್ಲಿದ್ದರು. ಅದಕ್ಕಾಗಿಯೇ ಪತ್ನಿ ಫಜೀಯಾಬೇಗಂಳನ್ನ ಕರೆದುಕೊಂಡು ಮಾರ್ಕೆಟ್ ಹೋಗಿ ಮಗನಿಗೆ ಹೊಸ ಬಟ್ಟೆ. ವಿಶೇಷವಾದ ಕೇಕ್ ತಂದಿದ್ದರು. ರಿಯಲ್ ಎಸ್ಟೇಟ್ ವ್ಯಾಪಾರ ಮಾಡುತ್ತಾ ಸ್ವಲ್ಪ ದುಡ್ಡು ಮಾಡಿದ್ದ ಮೆಹಬೂಬ್ ಬಾಷಾ ಇನ್ನೇನೂ ಪುತ್ರನ ಬರ್ತಡೇ ಕೇಕ್ ಕಟ್ ಮಾಡಬೇಕು ಎನ್ನುವಷ್ಟರಲ್ಲಿ ಹೆಣವಾಗಿ ಹೋಗಿದ್ದ. ಗುಗ್ಗರಹಟ್ಟಿಯ ಕೃಷ್ಣಾ ಕಾಲೋನಿಯ ಬಳಿಯೇ ಮೆಹಬೂಬ್ ಬಾಷಾನನ್ನ ಬೈಕ್​ನಲ್ಲಿ ಬಂದವರು ಚಾಕು, ಮಚ್ಚಿನಿಂದ ಇರಿದು ಹತ್ಯೆ ಮಾಡಿದ್ದರು. ಇದೀಗ ಇಬ್ಬರು ಆರೋಪಿಗಳು ಅರೆಸ್ಟ್​ ಮಾಡಲಾಗಿದೆ.

ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ವೈಷಮ್ಯ; ಸ್ನೇಹಿತರಿಂದಲೇ ಹತ್ಯೆ

ಮೆಹಬೂಬ್ ಬಾಷಾ ರಿಯಲ್ ಎಸ್ಟೇಟ್ ವ್ಯಾಪಾರ ಮಾಡುತ್ತಾ ಸಾಕಷ್ಟು ದುಡ್ಡು ಮಾಡಿದ್ದ. ಬಳ್ಳಾರಿ ಹೊರವಲಯದ ಗುಗ್ಗರಹಟ್ಟಿಯ ಬಳಿಯ ಸೈಟ್​ಗಳನ್ನ ಕಡಿಮೆ ಬೆಲೆಗೆ ತಗೆದುಕೊಂಡು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ. ಇದರಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಎತ್ತರಕ್ಕೆ ಬೆಳೆಯುತ್ತಿದ್ದ. ಇದರ ಜೊತೆಗೆ ಗುಗ್ಗರಹಟ್ಟಿಯಲ್ಲಿ ಕೋಳಿ ಅನ್ವರ್ ಸಹ ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ಹೆಸರು ಮಾಡಿದ್ದ. ಮೊದ ಮೊದಲು ಕೋಳಿ ವ್ಯಾಪಾರ ಮಾಡುತ್ತಿದ್ದ ಅನ್ವರ್​ , ಬಳಿಕ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕೈ ಇಟ್ಟಿದ್ದ. ಆದ್ರೆ, ಯಾವುದೇ ಸೈಟ್​ಗೆ ಕೈ ಹಾಕಿದ್ರು, ಅಲ್ಲಿ ಮೆಹಬೂಬ್ ಬಾಷಾ ಹೆಸರು ಕೇಳಿ ಬರುತ್ತಿತ್ತು. ಇದೇ ವಿಚಾರ ಕೋಳಿ ಅನ್ವರ್ ಹಾಗೂ ಮೆಹಬೂಬ್ ಬಾಷಾ ಮಧ್ಯೆ ವೈಷಮ್ಯಕ್ಕೆ ಕಾರಣವಾಗಿತ್ತು. ಇದರಿಂದ ಕೋಳಿ ಅನ್ವರ್ ಮೆಹಬೂಬ್ ಬಾಷಾನ ಹೆಣ ಉರುಳಿಸಿಬಿಟ್ಟಿದ್ದಾನೆ.

ಇದನ್ನೂ ಓದಿ:Kolar News: ಮೇಲಾಧಿಕಾರಿಗಳಿಂದ ಕಿರುಕುಳ ಆರೋಪ; ಕೆಎಸ್​ಆರ್​ಟಿಸಿ ಬಸ್ ಕಂಡಕ್ಟರ್ ಆತ್ಮಹತ್ಯೆಗೆ ಶರಣು

ಹತ್ಯೆಯ ಮೂರ್ನಾಲ್ಕು ತಿಂಗಳ ಮುಂಚೆ ಇಬ್ಬರ ಮಧ್ಯೆ ಜಗಳ

ಕೋಳಿ ಅನ್ವರ್ ಮತ್ತು ಮೆಹಬೂಬಬಾಷಾ ಮಧ್ಯೆ ಮೊದಲಿನಿಂದಲೂ ವೈಷಮ್ಯ ಇತ್ತು. ಅದರಲ್ಲೂ ಮೆಹಬೂಬ್ ಬಾಷಾ ರಿಯಲ್ ಎಸ್ಟೇಟ್ ವ್ಯಾಪಾರ ಹಾಗೂ ಮುಸ್ಲಿಂ ಸಮುದಾಯದಲ್ಲಿ ಒಳ್ಳೆಯ ಹೆಸರು ಮಾಡಿದ್ದ. ಎಲ್ಲರನ್ನ ವಿಶ್ವಾಸಕ್ಕೆ ತಗೆದುಕೊಂಡು ರಿಯಲ್ ಎಸ್ಟೇಟ್ ವ್ಯಾಪಾರ ಕುದುರಿಸುತ್ತಿದ್ದ. ಈ ವಿಚಾರವಾಗಿಯೇ ಕೋಳಿ ಅನ್ವರ್ ಹಾಗೂ ಮೆಹಬೂಬ್ ಬಾಷಾ ಮಧ್ಯೆ ವೈಷಮ್ಯಕ್ಕೆ ಕಾರಣವಾಗಿತ್ತು. ಮೂರ್ನಾಲ್ಕು ತಿಂಗಳ ಮುಂಚೆ ಇಬ್ಬರ ಮಧ್ಯೆ ಜಗಳವೂ ಸಹ ನಡೆದಿತ್ತು. ಆದ್ರೆ, ಕೆಲ ಮುಖಂಡರು ಇಬ್ಬರನ್ನ ಸಮಧಾನಪಡಿಸಿ ರಾಜಿ ಪಂಚಾಯತಿ ಮಾಡೋದಾಗಿ ಹೇಳಿ ಸರಿಪಡಿಸಿದ್ರು. ಆದರೆ, ಕೋಳಿ ಅನ್ವರ್ ಮಾತ್ರ ಮೆಹಬೂಬ್ ಬಾಷಾನನ್ನ ಮುಗಿಸಲೇಬೇಕೆಂದು ಸೆಚ್ಕ್ ರೆಡಿ ಮಾಡಿದ್ದ.

ಸಹಚರರಾದ ಅಲ್ತಾಫ್ ಹಾಗೂ ಸಿರಾಜ್ ಜೊತೆಗೂಡಿ ಹತ್ಯೆ

ತನ್ನ ಸಹಚರರಾದ ಅಲ್ತಾಫ್ ಹಾಗೂ ಸಿರಾಜ್ ಜೊತೆಗೂಡಿ ಅಂದುಕೊಂಡತೇ ಮೆಹಬೂಬ್ ಬಾಷಾನ ಹೆಣನ ಕೆಡವಿದ್ದಾರೆ. ಜುಲೈ 19ರಂದು ಪತ್ನಿ ಜೊತೆ ಮಾರುಕಟ್ಟೆಗೆ ತೆರಳಿದ್ದ ಮೆಹಬೂಬ್ ಬಾಷಾನನ್ನ ಹಂತಕರು ಹಿಂದೆ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಇದನ್ನ ಮೆಹಬೂಬ್ ಪತ್ನಿ ಪ್ರಶ್ನೆ ಸಹ ಮಾಡಿದ್ದಾರೆ. ಬಳಿಕ ಪತ್ನಿ ಜೊತೆಗೆ ಕೇಕ್ ತಗೆದುಕೊಂಡು ಮನೆಗೆ ಬಂದಿದ್ದ ಮೆಹಬೂಬ್ ಬಾಷಾನನ್ನ ಮನೆವರೆಗೂ ಹಿಂಬಾಲಿಸಿಕೊಂಡು ಬಂದಿದ್ದರು. ಅವರನ್ನ ಹೆದರಿಸೋಕೆ ಮನೆಯಿಂದ ಆಚೆ ಬಂದಿದ್ದ. ಆದ್ರೆ, ಚಾಕು ಮಚ್ಚಿನೊಂದಿಗೆ ಬಂದಿದ್ದ ಕೋಳಿ ಅನ್ವರ್, ಅಲ್ತಾಪ್, ಸಿರಾಜ್​ ಮಾತನಾಡುವ ಮುನ್ನವೇ ಮೆಹಬೂಬ್ ಬಾಷಾ ಎದೆ ಬೆನ್ನಿಗೆ ಚಾಕು ಇರಿದು ಹಲ್ಲೆ ಮಾಡಿದ್ದರು. ಕೂಡಲೇ ಆತನನ್ನ ಆಸ್ಪತ್ರೆಗೆ ಸಾಗಿಸಿದ್ರು. ಆದ್ರೆ, ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಮೆಹಬೂಬ್ ಬಾಷಾ ಹೆಣವಾಗಿ ಹೋಗಿದ್ದ.

ಇದನ್ನೂ ಓದಿ:Ramanagara Crime: ತಂದೆಯ ಬರ್ಬರ ಹತ್ಯೆ, ಅಪ್ಪನಿಗೂ ಗೊತ್ತಿತ್ತು ಪುತ್ರಿಯೇ ತನ್ನನ್ನು ಸಾಯಿಸಬಹುದು ಅಂತಾ, ಹತ್ಯೆ ಮಾಡಿದ ಮಗಳು ಎಲ್ಲಿ ಹೋದಳು?

ಹತ್ಯೆಗೆ ರಾಜಕೀಯ ಬಣ್ಣ

ಮೆಹಬೂಬ್ ಬಾಷಾ ರಿಯಲ್ ಎಸ್ಟೇಟ್ ವ್ಯಾಪಾರ ವಿಚಾರವಾಗಿಯೇ ಕೋಳಿ ಅನ್ವರ್ ಜೊತೆ ವೈಷಮ್ಯ ಸಹ ಕಟ್ಟಿಕೊಂಡಿದ್ದ. ಆದ್ರೆ, ಕಾಕತಾಳಿಯವೆನ್ನುವಂತೆ ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮೆಹಬೂಬ್ ಬಾಷಾ ಕೆಆರ್​ಪಿಪಿ ಪರವಾಗಿ ಪ್ರಚಾರ ಮಾಡಿದ್ದ. ಇನ್ನೂ ಹತ್ಯೆ ಮಾಡಿ ಅರೆಸ್ಟ್ ಆಗಿರುವ ಕೋಳಿ ಅನ್ವರ್ ಸಹ ಕಾಂಗ್ರೆಸ್​ ಪರವಾಗಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದ. ಇದಕ್ಕೊಸ್ಕರವೇ ಕೆಆರ್​ಪಿಪಿ ನಾಯಕ ಜನಾರ್ದನರೆಡ್ಡಿ ಹಾಗೂ ಪತ್ನಿ ಲಕ್ಷ್ಮೀ ಅರುಣಾ ಅವರು ಇದೊಂದು ರಾಜಕೀಯ ಹತ್ಯೆ ಎಂದು ಆರೋಪ ಮಾಡಿದ್ದರು. ಆದ್ರೆ, ಆರೋಪಿಗಳು ರಿಯಲ್ ಎಸ್ಟೇಟ್ ವ್ಯಾಪಾರ ಹಾಗೂ ಹಳೇ ವೈಷಮ್ಯದ ವಿಚಾರವಾಗಿ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಸಧ್ಯ ಆರೋಪಿಗಳನ್ನ ವಶಕ್ಕೆ ಪಡೆದಿರುವ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ