ಆನೇಕಲ್, ಫೆ.19: ಬೆಂಗಳೂರಿನ ಆನೇಕಲ್ (Anekal) ತಾಲೂಕಿನಲ್ಲಿ ಮನೆ ಲೀಸ್ಗೆ ಪಡೆಯುವ ಮುನ್ನ ಜನರು ಎಚ್ಚರದಿಂದ ಇರಬೇಕು. ನೀವು ಲೀಸ್ಗೆ ಪಡೆಯುತ್ತಿರುವ ಮನೆ ಮೇಲೆ ಸಾಲ ಇದೆಯಾ ಎಂಬುದನ್ನು ಮೊದಲ ತಿಳಿದುಕೊಳ್ಳಿ. ಇಲ್ಲವಾದರೆ ಬೀದಿಗೆ ಬರಬೇಕಾದಿತು. ಲೀಜ್ ನೀಡುವ ಮನೆ ಮೇಲೆ ಮನೆ ಮಾಲೀಕರು ಸಾಲ ಪಡೆದು ಗ್ರಾಹಕರಿಗೆ ವಂಚಿಸುತ್ತಿರುವ ಪ್ರಕರಣ ಆನೇಕಲ್ನಲ್ಲಿ ಬೆಳಕಿಗೆ ಬಂದಿದೆ.
ಆನೇಕಲ್-ಚಂದಾಪುರ ಮುಖ್ಯರಸ್ತೆಯಲ್ಲಿರುವ ವಿಬಿಹೆಚ್ಸಿ ಅಪಾರ್ಟ್ಮೆಂಟ್ನಲ್ಲಿ ಅಜಿತ್-ಸುಜಾತಾ ದಂಪತಿ ಫ್ಲಾಟ್ ಹೊಂದಿದ್ದರು. ಫ್ಯಾಟ್ಗಳನ್ನ ಲೀಸ್ಗೆ ನೀಡುವುದಾಗಿ ದಂಪತಿ ಜಾಹೀರಾತು ನೀಡುತ್ತಿದ್ದರು. ಲಕ್ಷಾಂತರ ರೂಪಾಯಿ ಹಣ ನೀಡಿ ಪ್ಲಾಟ್ ಅನ್ನು ಲೀಸ್ಗಾಗಿ ಗ್ರಾಹಕರು ಪಡೆಯುತ್ತಿದ್ದರು.
ಇದನ್ನೂ ಓದಿ: ಮನೆ ಕಟ್ಟಿಸಿಕೊಡುವೆ ಎಂದು ಬೆಂಗಳೂರು ಟೆಕ್ಕಿಗೆ ವಂಚನೆ: ಕೋರ್ಟ್ ಆದೇಶಕ್ಕೂ ಡೋಂಟ್ ಕೇರ್ ಎಂದ ಉದ್ಯಮಿ ಸಂಚಿತ್! ಮುಂದೇನು?
ಆದರೆ, ಲೀಸ್ಗೆ ನೀಡುವ ಮುನ್ನ ದಂಪತಿ ಆ ಮನೆ ಮೇಲೆ ಬ್ಯಾಂಕ್ನಿಂದ ಲೋನ್ ಪಡೆದಿರುತ್ತಿದ್ದರು. ಗ್ರಾಹಕರು ಫ್ಯಾಟ್ಗೆ ಬಂದ ಎರಡು ಮೂರು ತಿಂಗಳಿಗೆ ಬ್ಯಾಂಕ್ನಿಂದ ನೋಟಿಸ್ ಬರುತ್ತಿತ್ತು. ನೋಟಿಸ್ ಬಂದರೂ ದಂಪತಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಮಾಲೀಕರು ಲೋನ್ ಕಟ್ಟದೆ ಇದ್ದಾಗ ಬ್ಯಾಂಕ್ ಸಿಬ್ಬಂದಿ ಬಂದ ಮನೆಯ ಸಾಮಾನುಗಳನ್ನು ಜೊತೆಗೆ ಬೀಗ ಜಡಿದು ಹೋಗುತ್ತಾರೆ.
ಲಕ್ಷಾಂತರ ಹಣ ನೀಡಿ ಅತ್ತ ಹಣವೂ ಇಲ್ಲದೆ ಇತ್ತ ಫ್ಲ್ಯಾಟ್ ಇಲ್ಲದೆ ಗ್ರಾಹಕರು ಬೀದಿಗೆ ಬೀಳುತ್ತಿದ್ದರು. ಇದೇ ರೀತಿ ಹತ್ತಾರು ಮಂದಿ ವಂಚನೆಗೆ ಬಿದ್ದು ಬೀದಿಗೆ ಬಿದ್ದಿದ್ದಾರೆ. ಸದ್ಯ, ದಂಪತಿ ಅಜಿತ್ ಮತ್ತು ಸುಜಾತಾ ವಿರುದ್ಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:22 pm, Mon, 19 February 24