ಪಂಜಾಬ್​​: ಮಗಳು-ಅಳಿಯನ ಕೊಲೆಗೆ ಸುಪಾರಿ ನೀಡಿದ ವ್ಯಕ್ತಿಯನ್ನೇ ಹತ್ಯೆ ಮಾಡಿದ ಹಂತಕರು

ಮಗಳು ಮತ್ತು ಅಳಿಯನ್ನು ಕೊಲೆ ಮಾಡಲು ರೌಡಿಗಳಿಗೆ ಸುಪಾರಿ ನೀಡಿದ ವ್ಯಕ್ತಿಯನ್ನೇ ರೌಡಿಗಳು ಹತ್ಯೆ ಮಾಡಿರುವ ಘಟನೆ ಪಂಜಾಬ್‌ನ ಬಟಾಲಾದಲ್ಲಿ ನಡೆದಿದೆ. ಆ.10ರಂದು ಮೈಕ್ ಹಳ್ಳಿಯ ಇಬ್ಬರು ದಂಪತಿಗಳು ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿದೆ.

ಪಂಜಾಬ್​​: ಮಗಳು-ಅಳಿಯನ ಕೊಲೆಗೆ ಸುಪಾರಿ ನೀಡಿದ ವ್ಯಕ್ತಿಯನ್ನೇ ಹತ್ಯೆ ಮಾಡಿದ ಹಂತಕರು
ಆರೋಪಿಗಳು ಮತ್ತು ಪಂಜಾಬ್​​ ಪೊಲೀಸರು
Follow us
ಅಕ್ಷಯ್​ ಪಲ್ಲಮಜಲು​​
|

Updated on:Aug 17, 2023 | 5:11 PM

ಬಟಾಲಾ, ಆ.17: ಮಗಳು ಮತ್ತು ಅಳಿಯನ್ನು ಕೊಲೆ ಮಾಡಲು ರೌಡಿಗಳಿಗೆ ಸುಪಾರಿ ನೀಡಿದ ವ್ಯಕ್ತಿಯನ್ನೇ ರೌಡಿಗಳು ಹತ್ಯೆ ಮಾಡಿರುವ ಘಟನೆ ಪಂಜಾಬ್‌ನ ಬಟಾಲಾದಲ್ಲಿ ನಡೆದಿದೆ. ಆ.10ರಂದು ಮೈಕ್ ಹಳ್ಳಿಯ ಇಬ್ಬರು ದಂಪತಿಗಳು ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನೊಬ್ಬ ಹಂತಕನ ಪತ್ತೆಗಾಗಿ ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಈ ಹಂತಕರನ್ನು ಮಾಂಡ್ ಗ್ರಾಮದ ಸರ್ವಾನ್ ಸಿಂಗ್, ಡಕೋಹಾ ಗ್ರಾಮದ ಬಲರಾಜ್ ಸಿಂಗ್ ಮತ್ತು ಮಾಡ್ಯಾಲ ಉಪ ಪೊಲೀಸ್ ಠಾಣೆಯ ಗುರ್ವಿಂದರ್ ಸಿಂಗ್ ಅಲಿಯಾಸ್ ಗಿಂಡಾ ನಿವಾಸಿ ಘುಮಾನ್ ಎಂದು ಗುರುತಿಸಲಾಗಿದೆ. ಈ ಮೂವರಲ್ಲಿ ಸರ್ವಾನ್ ಸಿಂಗ್ ಮತ್ತು ಬಲರಾಜ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದು, ಗುರ್ವಿಂದರ್ ಸಿಂಗ್ ಅಲಿಯಾಸ್ ಗಿಂಡಾ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಇನ್ನು ಸಾವನ್ನಪ್ಪಿರುವ ವ್ಯಕ್ತಿಯನ್ನು ಲಷ್ಕರ್ ಸಿಂಗ್‌ ಎಂದು ಹೇಳಲಾಗಿದೆ. ಇತನಿಗೆ ಒಂದು ಗಂಡು ಮತ್ತು ಹೆಣ್ಣು ಮಕ್ಕಳಿದ್ದು, ಮಗ ದುಬೈಯಲ್ಲಿ ಕೆಲಸದಲ್ಲಿದ್ದು. ಇನ್ನು ಮಗಳು ತನಗೆ ಇಷ್ಟವಿಲ್ಲ ವ್ಯಕ್ತಿಯ ಜತೆಗೆ ಪ್ರೀತಿಸಿ ಮದುವೆಯಾಗಿದ್ದಾಳೆ ಎಂಬ ಕೋಪಕ್ಕೆ ಆಕೆಯನ್ನು ಕೊಲೆ ಮಾಡಲು ಹಂತಕರಿಗೆ ಸುಪಾರಿ ನೀಡಿದ್ದ ಎಂದು ಹೇಳಲಾಗಿದೆ. ಈ ರೌಡಿಗಳಿಗೆ ಮಗಳು ಮತ್ತು ಅಳಿಯನನ್ನು ಹತ್ಯೆ ಮಾಡಲು 2 ಲಕ್ಷ 70 ಸಾವಿರ ರೂಪಾಯಿ ನೀಡಿದ್ದ ಎಂದು ಆರೋಪಿಗಳು ಪೊಲೀಸ್​​ ತನಿಖೆ ವೇಳೆ ಬಾಯಿಟ್ಟಿದ್ದಾರೆ.

ಇದನ್ನೂ ಓದಿ: ಮಕ್ಕಳ ವಿದೇಶದ ಕನಸು; ಡಾಲರ್ ಆಸೆಗೆ ಸಾಲದ ಸುಳಿಗೆ ಸಿಲುಕಿದ ಪಂಜಾಬ್​ ರೈತರು

ಲಷ್ಕರ್ ಸಿಂಗ್​​ನಿಂದ ಹಣ ತೆಗೆದುಕೊಂಡು ಮಗಳು ಮತ್ತು ಅಳಿಯನನ್ನು ಕೊಂದಿಲ್ಲ. ಇದರಿಂದ ಕೋಪಗೊಂಡ ಲಷ್ಕರ್ ಸಿಂಗ್ ತನ್ನ ಹಣವನ್ನು ಹಿಂದಿರುಗಿಸುವಂತೆ ಈ ಹಂತಕರ ಜತೆಗೆ ಜಗಳ ಮಾಡಿಕೊಂಡಿದ್ದಾನೆ. ಇದರಿಂದ ಕೋಪಗೊಂಡ ರೌಡಿಗಳು ಲಷ್ಕರ್ ಸಿಂಗ್ ಮತ್ತು ಆತನ ಪತ್ನಿ ಅಮರಿಕ್ ಕೌರ್ ಅವರನ್ನು ಕೊಲೆ ಮಾಡಿದ್ದಾರೆ. ಆದರೆ ಲಷ್ಕರ್ ಸಿಂಗ್ ಮತ್ತು ಆತನ ಪತ್ನಿಯ ಮೃತದೇಹವು ಆ.10ರಂದು ಮನೆಯಲ್ಲಿ ತಡವಾಗಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:01 pm, Thu, 17 August 23

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ