ಮಗನ ಜೀವಕ್ಕೇ ಸಂಚಕಾರ ತಂದಿತು ಮನೆಯಲ್ಲಿದ್ದ ಚಿನ್ನ; ಆಸ್ಪತ್ರೆ ಸೇರಿರುವ ತಾಯಿ

ಬೆಂಗಳೂರಿನ ಗಂಗಾನಗರದಲ್ಲಿ ವಾಸವಾಗಿದ್ದ ಮಹಿಳೆ ಹನುಮಂತಮ್ಮ ಮತ್ತು ಆಕೆಯ 12 ವರ್ಷದ ಪುತ್ರನ ಮೇಲೆ ಆರೋಪಿ ಲಿಂಗಪ್ಪ ಹಲ್ಲೆ ಮಾಡಿದ್ದು, ಮನೆಯಲ್ಲಿದ್ದ 30ಗ್ರಾಂ ಬಂಗಾರವನ್ನು ದೋಚಲು ಪ್ರಯತ್ನಿಸಿದ್ದಾನೆ.

ಮಗನ ಜೀವಕ್ಕೇ ಸಂಚಕಾರ ತಂದಿತು ಮನೆಯಲ್ಲಿದ್ದ ಚಿನ್ನ; ಆಸ್ಪತ್ರೆ ಸೇರಿರುವ ತಾಯಿ
ಆರೋಪಿ ಲಿಂಗಪ್ಪ ಮತ್ತು ಕೊಲೆಯಾದ ಬಾಲಕ ರಾಜ
preethi shettigar

| Edited By: Lakshmi Hegde

Dec 19, 2020 | 11:45 AM

ಬೆಂಗಳೂರು: ಚಿನ್ನಕ್ಕಾಗಿ ಮಹಿಳೆಯ ಮೇಲೆ ಹಲ್ಲೆ ಮಾಡಿ, ಆಕೆಯ ಮಗುವನ್ನು ಹತ್ಯೆ ಮಾಡಿದ ಘಟನೆ ಗಂಗಾನಗರದಲ್ಲಿ ನಡೆದಿದೆ. ಹನುಮಂತಮ್ಮ ತೀವ್ರವಾಗಿ ಗಾಯಗೊಂಡಿದ್ದು, ಪುತ್ರ ರಾಜ (12) ಮೃತಪಟ್ಟಿದ್ದಾನೆ.

ಲಿಂಗಪ್ಪ ಎಂಬಾತ  ಕೃತ್ಯ ಎಸಗಿದ್ದು, ಆತನನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.  ಈತ  ಡಿ.16ರಂದು ಹನುಮಂತಮ್ಮನವರ ಮನೆಯಲ್ಲಿದ್ದ 30 ಗ್ರಾಂ. ಚಿನ್ನ ಕಳವು ಮಾಡಲು ಯತ್ನಿಸಿದ್ದಾನೆ. ನಂತರ ಅಲ್ಲಿಂದ ತಪ್ಪಿಸಿಕೊಳ್ಳುವಾಗ ತಾಯಿ ಮತ್ತು ಮಗನ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ.

ಸ್ಥಳದ ಪರಿಶೀಲನೆ ನಡೆಸುತ್ತಿರುವ ಪೊಲೀಸರು

ಮಗ ರಾಜ ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿ ಹನುಮಂತಮ್ಮ ತೀವ್ರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರನ್ನು  ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಗಾದಿ ಲಿಂಗಪ್ಪ ಹತ್ಯೆ ಮಾಡಿದ ಬಳಿಕ ತೆರಳುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯವನ್ನು ಆಧರಿಸಿ ಪೊಲೀಸರು ಲಿಂಗಪ್ಪನನ್ನು ಬಂಧಿಸಿದ್ದಾರೆ ಮತ್ತು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಆರೋಪಿ ಲಿಂಗಪ್ಪ ಮನೆಯಿಂದ ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಆಸ್ತಿ ವಿವಾದ: ತಾಯಿ ಮತ್ತು ಮಗನ ಬರ್ಬರ ಹತ್ಯೆ..

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada