‘ಸ್ಪೈಡರ್ ಮ್ಯಾನ್’ ಎಂದೇ ಹೆಸರಾಗಿದ್ದ ಕಳ್ಳ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ?

|

Updated on: Dec 31, 2024 | 5:29 PM

ದೆಹಲಿಯ ಪೊಲೀಸರನ್ನು ಕಾಡುತ್ತಿದ್ದ ಸ್ಪೈಡರ್​ ಮ್ಯಾನ್ ಕಳ್ಳ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ದೆಹಲಿ ಪೊಲೀಸರು 50ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಅಪರಾಧ ನಡೆದ ಸ್ಥಳದ ಬಳಿ ಓಡಾಡಿದ ವ್ಯಕ್ತಿಗಳ ಚಲನವಲನಗಳನ್ನು ಗಮನಿಸಿ ಆರೋಪಿಯನ್ನು ಗುರುತಿಸಿದ್ದಾರೆ. ಆ ಕಳ್ಳನ ಬಂಧನದೊಂದಿಗೆ ರೂಪ್ ನಗರ್, ಮೌರ್ಯ ಎನ್‌ಕ್ಲೇವ್, ಖ್ಯಾಲಾ ಮತ್ತು ಜಹಾಂಗೀರ್ ಪುರಿಯಲ್ಲಿ ಆತನ ವಿರುದ್ಧ ದಾಖಲಾಗಿದ್ದ 5 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.

ಸ್ಪೈಡರ್ ಮ್ಯಾನ್ ಎಂದೇ ಹೆಸರಾಗಿದ್ದ ಕಳ್ಳ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ?
Thief
Follow us on

ನವದೆಹಲಿ: ದೆಹಲಿ ವಾಯವ್ಯ ಜಿಲ್ಲೆಯ ಕಬೀರ್ ನಗರ ಪ್ರದೇಶದಲ್ಲಿ ಕಳ್ಳನೊಬ್ಬ ಗೋಡೆಗಳ ಮೇಲೆ ತೆವಳುತ್ತಾ ಹೋಗಿ ಮನೆಗಳಿಗೆ ನುಸುಳುತ್ತಿದ್ದ. ಹೀಗಾಗಿ, ಆತನಿಗೆ ‘ಸ್ಪೈಡರ್ ಮ್ಯಾನ್’ ಎಂಬ ಅಡ್ಡಹೆಸರನ್ನು ಇಡಲಾಗಿತ್ತು. ಆ ಕಳ್ಳನನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿ, ಬಂಧಿಸಿದ್ದಾರೆ. ಡಿಸೆಂಬರ್ 27ರಂದು ದೆಹಲಿಯ ಭಾರತ್ ನಗರದ ನಿವಾಸಿಯೊಬ್ಬರು ತಮ್ಮ ಮನೆಗೆ ರಾತ್ರಿಯಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು. ಎರಡು ಮೊಬೈಲ್ ಫೋನ್‌ಗಳು, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಇತರ ದಾಖಲೆಗಳು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

“ಸಂಗಮ್ ಪಾರ್ಕ್‌ನಿಂದ ನಮ್ಮ ತಂಡವು ಕುಖ್ಯಾತ ಕಳ್ಳ ಯೋಗೇಶ್ ಎಂಬಾತನನ್ನು ಬಂಧಿಸಿದೆ. ಅವರು ಮನೆಗಳಿಗೆ ನುಸುಳುವ ವಿಶಿಷ್ಟ ವಿಧಾನಗಳಿಗಾಗಿ ‘ಸ್ಪೈಡರ್ ಮ್ಯಾನ್’ ಎಂಬ ಅಡ್ಡಹೆಸರನ್ನು ನೀಡಲಾಗಿತ್ತು” ಎಂದು ಉಪ ಪೊಲೀಸ್ ಆಯುಕ್ತ (ವಾಯುವ್ಯ) ಭೀಷಮ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಕದ್ದ ಕಳ್ಳನಿಗೆ ಶಾಕ್; ದಾರಿಯಲ್ಲಿ ಆಗಿದ್ದೇನು?

50ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ಪೊಲೀಸರು ಅಪರಾಧ ನಡೆದ ಸ್ಥಳದ ಬಳಿ ಆತನ ಚಲನವಲನಗಳ ಮೂಲಕ ಆರೋಪಿಯನ್ನು ಗುರುತಿಸಿದ್ದಾರೆ. ಕೊನೆಗೂ ಕಬೀರ್ ನಗರದಲ್ಲಿನ ಅವರ ನಿವಾಸದಿಂದ ಯೋಗೇಶ್ ಅವರನ್ನು ಬಂಧಿಸಲಾಯಿತು. ವಿಚಾರಣೆ ವೇಳೆ ಯೋಗೇಶ್ ಕಳ್ಳತನ ಹಾಗೂ ಇತರೆ ಕಳ್ಳತನದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾನೆ. ಕದ್ದ ವಸ್ತುಗಳನ್ನು ಸಹ ಆತನ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ಆ ಕಳ್ಳನ ಬಂಧನದೊಂದಿಗೆ ರೂಪ್ ನಗರ್, ಮೌರ್ಯ ಎನ್‌ಕ್ಲೇವ್, ಖ್ಯಾಲಾ ಮತ್ತು ಜಹಾಂಗೀರ್ ಪುರಿಯಲ್ಲಿ ಆತನ ವಿರುದ್ಧ ದಾಖಲಾಗಿದ್ದ 5 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.

ಇದನ್ನೂ ಓದಿ: ನ್ಯೂ ಇಯರ್​​ ಪಾರ್ಟಿಗೆ ಬಾರ್​​ಗೆ ಕಳ್ಳತನ ಮಾಡಲು ಹೋಗಿ ಕಂಠಪೂರ್ತಿ ಕುಡಿದು ಅಲ್ಲೇ ಮಲಗಿದ ಕಳ್ಳ

ಕಳ್ಳತನ ಮಾಡುವಾಗ ಗೋಡೆಗಳನ್ನು ಸ್ಕೇಲಿಂಗ್ ಮಾಡುವಲ್ಲಿ ನಿಪುಣತೆ ಹೊಂದಿದ್ದ ‘ಸ್ಪೈಡರ್ ಮ್ಯಾನ್’ ಎಂಬ ಅಡ್ಡಹೆಸರಿನ ಕುಖ್ಯಾತ ಕಳ್ಳನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಸಂಗಮ್ ಪಾರ್ಕ್‌ನ ಪೊಲೀಸ್ ತಂಡವು ತನ್ನ ವಿಶಿಷ್ಟ ವಿಧಾನದ ಮೂಲಕ ಹಲವಾರು ಕಳ್ಳತನಗಳಿಗೆ ಸಂಬಂಧ ಹೊಂದಿರುವ ಕಳ್ಳ ಯೋಗೇಶ್‌ನನ್ನು ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಹಿಡಿಯುವ ಮೂಲಕ 5 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ