ಪಕ್ಕದ ಅಂಗಡಿ ಕಿಟಕಿ ಸರಳು ಕತ್ತರಿಸಿ ಚಿನ್ನದಂಗಡಿ ಕಳ್ಳತನ: ಬೆಳ್ಳಿ ಆಭರಣ ಕಳವು

[lazy-load-videos-and-sticky-control id=”ch0weaZjIOY”] ಬೆಂಗಳೂರು: ನಗರದಲ್ಲಿ ಚಿನ್ನದಂಗಡಿ ಕಳ್ಳತನವಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಲಕ್ಷಾಂತರ ಮೌಲ್ಯದ ಆಭರಣವನ್ನ ಖದೀಮರು ಕದ್ದು ಎಸ್ಕೇಪ್ ಆಗಿರುವ ಘಟನೆ ಆಗಸ್ಟ್ 5ರ ಬೆಳಗಿನ ಜಾವ ನಡೆದಿದೆ. ವೈಟ್​ಫೀಲ್ಡ್​ನ ಇಮ್ಮಡಿಹಳ್ಳಿ ಮೇನ್ ರೋಡ್​ನಲ್ಲಿರುವ ಮಾತಾ ಜ್ಯುವೆಲ್ಲರಿಗೆ ಕನ್ನ ಹಾಕಿರುವ ಖದೀಮರು 35 ಲಕ್ಷ ಮೌಲ್ಯದ 50 ಕೆ.ಜಿ ಬೆಳ್ಳಿ ಆಭರಣವನ್ನ ದೋಚಿ ಪರಾರಿಯಾಗಿದ್ದಾರೆ. ಪಕ್ಕದ ಅಂಗಡಿಯಿಂದ ಕಿಟಕಿ ಸರಳು ಕತ್ತರಿಸಿ ಕಳ್ಳರು ಒಳನುಗ್ಗಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ ಚಿನ್ನಾಭರಣದ ಲಾಕರ್ ಒಡೆಯಲಾಗದೇ ಖತರ್ನಾಕ್ […]

ಪಕ್ಕದ ಅಂಗಡಿ ಕಿಟಕಿ ಸರಳು ಕತ್ತರಿಸಿ ಚಿನ್ನದಂಗಡಿ ಕಳ್ಳತನ: ಬೆಳ್ಳಿ ಆಭರಣ ಕಳವು
Edited By:

Updated on: Aug 08, 2020 | 1:19 PM

[lazy-load-videos-and-sticky-control id=”ch0weaZjIOY”]

ಬೆಂಗಳೂರು: ನಗರದಲ್ಲಿ ಚಿನ್ನದಂಗಡಿ ಕಳ್ಳತನವಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಲಕ್ಷಾಂತರ ಮೌಲ್ಯದ ಆಭರಣವನ್ನ ಖದೀಮರು ಕದ್ದು ಎಸ್ಕೇಪ್ ಆಗಿರುವ ಘಟನೆ ಆಗಸ್ಟ್ 5ರ ಬೆಳಗಿನ ಜಾವ ನಡೆದಿದೆ.

ವೈಟ್​ಫೀಲ್ಡ್​ನ ಇಮ್ಮಡಿಹಳ್ಳಿ ಮೇನ್ ರೋಡ್​ನಲ್ಲಿರುವ ಮಾತಾ ಜ್ಯುವೆಲ್ಲರಿಗೆ ಕನ್ನ ಹಾಕಿರುವ ಖದೀಮರು 35 ಲಕ್ಷ ಮೌಲ್ಯದ 50 ಕೆ.ಜಿ ಬೆಳ್ಳಿ ಆಭರಣವನ್ನ ದೋಚಿ ಪರಾರಿಯಾಗಿದ್ದಾರೆ. ಪಕ್ಕದ ಅಂಗಡಿಯಿಂದ ಕಿಟಕಿ ಸರಳು ಕತ್ತರಿಸಿ ಕಳ್ಳರು ಒಳನುಗ್ಗಿದ್ದಾರೆ ಎಂದು ತಿಳಿದುಬಂದಿದೆ.

ಆದ್ರೆ ಚಿನ್ನಾಭರಣದ ಲಾಕರ್ ಒಡೆಯಲಾಗದೇ ಖತರ್ನಾಕ್ ಕಳ್ಳರು ಬೆಳ್ಳಿ ಆಭರಣಗಳನ್ನು ಮಾತ್ರ ಕದ್ದೊಯ್ದಿದ್ದಾರೆ. ಇನ್ನು ಕಳ್ಳರ ಚಲನವಲನ, ಕಳ್ಳತನ ಮಾಡ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ತನಿಖೆ ಮುಂದುವರೆದಿದೆ.


Published On - 8:53 am, Sat, 8 August 20