Theft in ATM : ಬ್ಯಾಂಕ್​​​ ಎಟಿಎಂ ಕೇಂದ್ರಗಳಲ್ಲಿ ಈ ರೀತಿಯೂ ಮೋಸ ನಡೆಯುತ್ತದಾ?

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕೆಲವರು ಪ್ಲಾಸ್ಟರ್ ಅಂಟಿಸಿರುವುದು ಕಂಡುಬಂದಿದೆ. ಎಟಿಎಂ ಮಷೀನ್​​ನಿಂದ ನಗದು ಬಂದಿಲ್ಲವೆಂದು ಸತೀಶ ದೇಶಪಾಂಡೆ ಎಟಿಎಂ ಕೇಂದ್ರದಿಂದ ಹೊರ ಬಂದಿದ್ದರು. ಸರಿಯಾಗಿ ಅದೇ ವೇಳೆ ಆರೋಪಿಗಳು ಪ್ಲಾಸ್ಟರ್ ತೆಗೆದು ನಗದನ್ನು ತೆಗೆದುಕೊಂಡು ಹೋಗಿದ್ದಾರೆ.

Theft in ATM : ಬ್ಯಾಂಕ್​​​ ಎಟಿಎಂ ಕೇಂದ್ರಗಳಲ್ಲಿ ಈ ರೀತಿಯೂ ಮೋಸ ನಡೆಯುತ್ತದಾ?
ಬ್ಯಾಂಕ್​​​ ಎಟಿಎಂ ಕೇಂದ್ರದಲ್ಲಿ ಈ ರೀತಿಯ ವಂಚನೆಯೂ ನಡೆಯುತ್ತದಾ?
Follow us
ಸಾಧು ಶ್ರೀನಾಥ್​
|

Updated on: Feb 16, 2024 | 2:56 PM

ಕಳ್ಳರು (Thieves) ದಿನೇ ದಿನೆ ತಮ್ಮ ಬುದ್ಧಿಮತ್ತೆಯನ್ನು ಚುರುಕುಗೊಳಿಸಿಕೊಳ್ಳುತ್ತಿದ್ದಾರೆ. ತಮ್ಮ ಕುತಂತ್ರದಿಂದ ಅಮಾಯಕರಿಂದ ಹಣ ಕೀಳುತ್ತಿದ್ದಾರೆ. ಕಲ್ಪನೆಗೂ ಮೀರಿದ ರೀತಿಯಲ್ಲಿ ಹಣವನ್ನು ಎಗರಿಸುತ್ತಿದ್ದಾರೆ. ಇಲ್ಲಿಯವರೆಗೆ ಎಟಿಎಂಗಳಲ್ಲಿ (ATM) ನಾನಾ ರೀತಿಯ ವಂಚನೆಗಳನ್ನು ನೋಡಿದ್ದೇವೆ. ಎಟಿಎಂ ಯಂತ್ರವನ್ನೇ ಕದ್ದ ನಿಧಿ ಚೋರರು ಇದ್ದಾರೆ. ಇನ್ನು ಕೆಲವರು ಕ್ಲೋನಿಂಗ್‌ನಂತಹ ತಂತ್ರಜ್ಞಾನಗಳಿಂದ ವಂಚನೆಗಳನ್ನು ಎಸಗುವುದು ಕೂಡ ನಡೆದಿದೆ.

ಆದರೆ ಇತ್ತೀಚೆಗೆ ಆದಿಲಾಬಾದ್ ಜಿಲ್ಲೆಯಲ್ಲಿ (Adilabad) ಕೆಲವು ವಂಚಕರು ಹೊಸ ತಂತ್ರಜ್ಞಾನದ ಸಹಾಯದಿಂದ ಹಣ ಸಂಪಾದಿಸಿದ್ದಾರೆ. ಈ ನಿಟ್ಟಿನಲ್ಲಿ ಎಟಿಎಂನಲ್ಲಿ ನಡೆದ ವಂಚನೆ ಘಟನೆಯ ಬಗ್ಗೆ ತಿಳಿದರೆ ಶಾಕ್ ಆಗುತ್ತೀರಿ. ಎಟಿಎಂನಿಂದ ಪ್ಲಾಸ್ಟರ್ ಬಳಸಿ ಹಣ ತೆಗೆದಿರುವ ಘಟನೆ ಮಾವಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿವರಗಳಿಗೆ ಹೋದರೆ… ಮಾವಲ್ ಪೊಲೀಸ್ ಠಾಣೆ ವ್ಯಾಪ್ತಿಯ ದಸ್ನಾಪುರದ ಎಟಿಎಂ ಯಂತ್ರದಿಂದ ಹಣ ಹೊರಬರುವ ಜಾಗದಲ್ಲಿ ಮೂವರು ದುಷ್ಕರ್ಮಿಗಳು ಪ್ಲಾಸ್ಟರ್ ಅಂಟಿಸಿದ್ದರು. ಆದರೆ ಈ ಮರಾಮೋಸವನ್ನು ಅರಿಯದ ಸತೀಶ್ ದೇಶಪಾಂಡೆ ಎಂಬವರು ಮಂಗಳವಾರ ಎಟಿಎಂ ಕೇಂದ್ರದಿಂದ 5 ಸಾವಿರ ರೂಪಾಯಿ ಡ್ರಾ ಮಾಡಿದ್ದಾರೆ.

ಇದನ್ನೂ ಓದಿ:  Srisailam Shiva Temple: ಶ್ರೀಶೈಲಂ ಈಶ್ವರನಿಗೆ ಚೆಂದದ ಚಿನ್ನದ ರಥ.. ನೋಡಲೆರಡು ಕಣ್ಣು ಸಾಲದು

ಆದರೆ ಸತೀಶ್ ದೇಶಪಾಂಡೆ ಅವರಿಗೆ ಖಾತೆಯಿಂದ ಹಣ ಕಡಿತವಾಗಿದೆ ಎಂಬ ಸಂದೇಶ ಬಂದಿದ್ದು, ಹಣ ಮಾತ್ರ ಬಂದಿಲ್ಲ. ಎಷ್ಟು ಹೊತ್ತಾದರೂ ಹಣ ಸಿಗದ ಹಿನ್ನೆಲೆಯಲ್ಲಿ ಎಟಿಎಂನಿಂದ ಹೊರಬಂದಿದ್ದಾರೆ ಸತೀಶ್. ಬಳಿಕ ಸಂಬಂಧಪಟ್ಟ ಬ್ಯಾಂಕ್ ಮತ್ತು ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಎಟಿಎಂನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಅಸಲಿ ಸಂಗತಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಳೆದು ನಿಂತ ಕರುವನ್ನು ಮನೆಯ ಮಗಳಂತೆ ಕಾಣುತ್ತಿರುವ ಮಹಿಳೆ, ನೋಡಲು ಕ್ಯೂ ನಿಲ್ಲುತ್ತಿರುವ ಜನ!

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕೆಲವರು ಪ್ಲಾಸ್ಟರ್ ಅಂಟಿಸಿರುವುದು ಕಂಡುಬಂದಿದೆ. ಎಟಿಎಂ ಮಷೀನ್​​ನಿಂದ ನಗದು ಬಂದಿಲ್ಲವೆಂದು ಸತೀಶ ದೇಶಪಾಂಡೆ ಎಟಿಎಂ ಕೇಂದ್ರದಿಂದ ಹೊರ ಬಂದಿದ್ದರು. ಸರಿಯಅಗಿ ಅದೇ ವೇಳೆ ಆರೋಪಿಗಳು ಪ್ಲಾಸ್ಟರ್ ತೆಗೆದು ನಗದನ್ನು ತೆಗೆದುಕೊಂಡು ಹೋಗಿದ್ದಾರೆ. ಮೂವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಾವಲ ಎಸ್‌ಐ ವಂಗ ವಿಷ್ಣುವರ್ಧನ್ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ