ಬೆಳೆದು ನಿಂತ ಕರುವನ್ನು ಮನೆಯ ಮಗಳಂತೆ ಕಾಣುತ್ತಿರುವ ಮಹಿಳೆ, ನೋಡಲು ಕ್ಯೂ ನಿಲ್ಲುತ್ತಿರುವ ಜನ!

Punganur cross Breed calf: ಜಯಲಕ್ಷ್ಮೀಪುರಂ ಗ್ರಾಮದಲ್ಲಿ ಅಪರೂಪದ ಜಾತಿಯ ಕರುವನ್ನು ಮನೆ ಮಾಲಿಕರು ಮನೆಯ ಮಗುವಿಗಿಂತಲೂ ಹೆಚ್ಚು ಪ್ರೀತಿಸುತ್ತಾರೆ. ಈ ಅಪರೂಪದ ತಳಿಯನ್ನು ನೋಡಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ವಿಶೇಷವಾಗಿದೆ.

ಬೆಳೆದು ನಿಂತ ಕರುವನ್ನು ಮನೆಯ ಮಗಳಂತೆ ಕಾಣುತ್ತಿರುವ ಮಹಿಳೆ, ನೋಡಲು ಕ್ಯೂ ನಿಲ್ಲುತ್ತಿರುವ ಜನ!
ಬೆಳೆದು ನಿಂತ ಕರುವನ್ನು ಮನೆಯ ಮಗಳಂತೆ ಕಾಣುತ್ತಿರುವ ಮಹಿಳೆ, ನೋಡಲು ಕ್ಯೂ
Follow us
ಸಾಧು ಶ್ರೀನಾಥ್​
|

Updated on: Feb 16, 2024 | 1:03 PM

ಪುಂಗನೂರು ಹಸುಗಳು ಅಂದರೆ ಯಾರು ತಾನೆ ಪ್ರೀತಿಸದೆ ಇರುತ್ತಾರೆ ಹೇಳಿ? ಪುಂಗನೂರು ಜಾತಿಯ ಹಸುಗಳು ಬಹಳ ಅಪರೂಪವಾಗಿ ಕಾಣಸಿಗುತ್ತವೆ. ಈ ಜಾತಿಯ ಹಸುಗಳೂ ನಶಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ದೂರದ ಹಳ್ಳಿಯ ಮಹಿಳಾ ಅರ್ಚಕರೊಬ್ಬರು ತಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ಜನಿಸಿದ್ದಾಳೆಂದು ಪರಿಭಾವಿಸಿ, ಕರುವನ್ನು (Punganur cross Breed calf) ಹೆಣ್ಣು ಮಗುವಿನಂತೆ (Daughter) ಸಾಕುತ್ತಿದ್ದಾರೆ. ಖಮ್ಮಂ (Khammam) ಜಿಲ್ಲೆಯ ವೆಂಸೂರು ಮಂಡಲದ ಜಯಲಕ್ಷ್ಮೀಪುರಂ ಗ್ರಾಮದಲ್ಲಿ ಅಪರೂಪದ ಜಾತಿಯ ಕರುವನ್ನು ತುಂಬು ಆಪ್ಯಾಯತೆಯಿಂದ ಸಾಕಲಾಗುತ್ತಿದೆ.

ಗುಂಟ್ರು ವೆಂಕಟ ಸ್ವಾಮಿ -ತಿರುಪತಮ್ಮ ದಂಪತಿಗೆ ಒಬ್ಬ ಮಗನಿದ್ದಾನೆ. ಇವರಿಗೆ ಹೆಣ್ಣು ಮಗುವೆಂದರೆ ತುಂಬಾ ಇಷ್ಟ. ತಮಗೆ ಮಗಳು ಇಲ್ಲದಿದ್ದರೂ ಒಂದು ಹಸುವನ್ನು ತಂದು ಸಾಕುತ್ತಿದ್ದಾರೆ. ಅದೇ ಹಸುವಿಗೆ ಪಕ್ಕದ ಗ್ರಾಮದ ಪಶುವೈದ್ಯರ ನೆರವಿನಿಂದ ಚುಚ್ಚುಮದ್ದಿನ ಮೂಲಕ ಕ್ರಾಸಿಂಗ್​ ಮಾಡಿಸಿದ್ದು, ಪುಂಗನೂರು ತಳಿಯ ಹೆಣ್ಣು ಕರು ಹುಟ್ಟಿದೆ. ಇದರಿಂದ ಮನೆಯ ಯಜಮಾನಿ ತಿರುಪತಮ್ಮ ಹೇಳತೀರದ ಸಂತಸ ಅನುಭವಿಸಿದ್ದಾರೆ. ಸಾಕ್ಷಾತ್​​​ ಲಕ್ಷ್ಮೀದೇವಿ ಮನೆಗೆ ಬಂದಿದ್ದಾಳೆ. ಅದೃಷ್ಟ ಲಕ್ಷ್ಮಿ ಮನೆಗೆ ಬಂದಿದ್ದಾಳೆ ಎಂದು ನಿತ್ಯವೂ ಪೂಜಿಸುತ್ತಿದ್ದಾರೆ.

ಕರುವಿನ ಕುತ್ತಿಗೆ, ಕಾಲುಗಳು ಮತ್ತು ಹೊಟ್ಟೆ ಭಾಗಕ್ಕೆ ಮುತ್ತುಗಳನ್ನು ಕಟ್ಟಿ ಅಲಂಕರಿಸಿದ್ದಾರೆ. ಅದರ ಬಾಲ ಕೂದಲನ್ನು ಸುಂದರವಾಗಿ ಅಲಂಕರಿಸುತ್ತಾರೆ. ಅವರು ಅದನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಅದು ಅಪರೂಪದ ಪಂಗನೂರು ತಳಿಯ ಹಸುವಾಗಿದ್ದು, ನೋಡಲು ತುಂಬಾ ಮುದ್ದಾಗಿದೆ. ಕೇವಲ 2 ಅಡಿ ಎತ್ತರವಿದ್ದು, ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ತಿರುಗಾಡುತ್ತದೆ.

Also Read: ಆಂಧ್ರಪ್ರದೇಶ -ಸಿಂಹದ ಜತೆ ಸೆಲ್ಫಿ ತೆಗೆಯಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ವ್ಯಕ್ತಿ

ಈ ಅಪರೂಪದ ಜಾತಿಯ ಕರುವನ್ನು ನೋಡಲು ಸಾಕಷ್ಟು ಮಂದಿ ಇವರ ಮನೆಗೆ ಬರುತ್ತಿದ್ದಾರೆ. ಮನೆ ಮಾಲಿಕರು ಹೇಳುವಂತೆ ಅವರು ಕರುವನ್ನು ಮನೆಯ ಮಗುವಿಗಿಂತಲೂ ಹೆಚ್ಚು ಪ್ರೀತಿಸುತ್ತಾರೆ. ಏನೇ ಆಗಲಿ ಈ ಅಪರೂಪದ ತಳಿಯನ್ನು ನೋಡಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ವಿಶೇಷವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ