ಮಂಡ್ಯ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರ ಶವ ಪತ್ತೆ; ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ವಾಟ್ಸಾಪ್​ ಮೆಸೇಜ್​

| Updated By: ವಿವೇಕ ಬಿರಾದಾರ

Updated on: Jun 08, 2022 | 5:46 PM

ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಭೇದಿಸಲು ಪೊಲೀಸರು 7 ಪ್ರತ್ಯೇಕ ತಂಡಗಳ ರಚನೆ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರ ಶವ ಪತ್ತೆ; ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ವಾಟ್ಸಾಪ್​ ಮೆಸೇಜ್​
ಸಾಂದರ್ಭಿಕ ಚಿತ್ರ
Follow us on

ಮಂಡ್ಯ: ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಭೇದಿಸಲು ಪೊಲೀಸರು 7 ಪ್ರತ್ಯೇಕ ತಂಡಗಳ ರಚನೆ ಮಾಡಿದ್ದಾರೆ. ಎಎಸ್​ಪಿ ವೇಣುಗೋಪಾಲ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಎರಡೂ ಮೃತದೇಹಗಳ ಅರ್ಧಭಾಗ ಮಾತ್ರ ಪತ್ತೆಯಾದ ಹಿನ್ನೆಲೆಯಲ್ಲಿ ದೇಹದ ಉಳಿದ ಭಾಗದ ಪತ್ತೆಗೆ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ. ಮಂಡ್ಯ ಹೆಚ್ಚುವರಿ ಎಸ್​ಪಿ ವೇಣುಗೋಪಾಲ್ ತಿಳಿಸಿದ್ದಾರೆ.

ಜಿಲ್ಲೆಯ ಪಾಂಡವಪುರ (Pandavpur) ತಾಲ್ಲೂಕಿನ ಬೇಬಿಗ್ರಾಮ ಹಾಗೂ ಶ್ರೀರಂಗಪಟ್ಟಣ (Shrirangapattana) ತಾಲ್ಲೂಕಿನ ಅರಕೆರೆ ಗ್ರಾಮದ ನಾಲೆಯಲ್ಲಿ ಇಬ್ಬರು ಮಹಿಳೆಯರ ಶವ ಪತ್ತೆಯಾಗಿತ್ತು. ಎರಡೂ ಶವಗಳು ಸೋಂಟದ ಕೆಳಭಾಗ ಮಾತ್ರ ಪತ್ತೆಯಾಗಿತ್ತು. ಈ ಸಂಬಂಧ ಪೊಲೀಸರು ಒಂದೇ ಮಾದರಿಯಲ್ಲಿ ಕೊಲೆಗೈದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಸಿಗರೇಟ್​ಗಾಗಿ ಹಣಕೊಡಲು ನಿರಾಕರಣೆ, ನಡುರಸ್ತೆಯಲ್ಲೇ ಚೂರಿ ಇರಿದು ಅಪ್ರಾಪ್ತನ ಹತ್ಯೆ

ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ವಾಟ್ಸಾಪ್​ ಮೆಸೇಜ್​

ಯಾದಗಿರಿ: ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಅವರ​ ಹೆಸರಲ್ಲಿ ನಕಲಿ ವಾಟ್ಸಾಪ್​ ಮೆಸೇಜ್​ ರವಾನೆಯಾಗಿದೆ. ಈ ಸಂಬಂಧ ಯಾದಗಿರಿ ಸೈಬರ್ ಕ್ರೈಂ ಠಾಣೆಯಲ್ಲಿ ವಂಚನೆ ಪ್ರಕರ ದಾಖಲಾಗಿದೆ. ತಮಿಳುನಾಡಿನ ಆದಿತ್ಯ ಗೌತಮ್ ಎಂಬಾತನಿಂದ ಕೃತ್ಯ ಎಸಗಲಾಗಿದೆ. ಅಧಿಕಾರಿಗಳ ಹೆಸರಲ್ಲಿ ವಂಚಿಸುವವರ ಬಗ್ಗೆ ಎಚ್ಚರವಹಿಸಬೇಕು. ಡಿಸಿ ಹೆಸರಲ್ಲಿ ಮೆಸೇಜ್ ಬಂದರೆ ಪೊಲೀಸರ ಗಮನಕ್ಕೆ ತನ್ನಿ. ಇಂತಹ ಮೆಸೇಜ್​​ಗಳನ್ನ ನಂಬಿ ಹಣ ಹಾಕದಂತೆ ಯಾದಗಿರಿ ಎಸ್​​ಪಿ ಡಾ.ಸಿ.ಬಿ.ವೇದಮೂರ್ತಿಮನವಿ ಮಾಡಿದ್ದಾರೆ

ಹಾವು ಕಚ್ಚಿ 10 ವರ್ಷದ ಬಾಲಕ ಸಾವು

ಯಾದಗಿರಿ:  ಯಾದಗಿರಿಯ ದುರ್ಗಾನಗರದಲ್ಲಿ ಮನೆಯಲ್ಲಿ ಮಲಗಿದ್ದಾಗ ಹಾವು ಕಚ್ಚಿ 10 ವರ್ಷದ ಬಾಲಕ ದರ್ಶನ್ ಸಾವನ್ನಪ್ಪಿದ್ದಾನೆ. ಯಾದಗಿರಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ: ನಿರ್ಭಯಾ ಮಾದರಿ ಕೇಸ್​: ಬಿಹಾರದಲ್ಲಿ ಚಲಿಸುತ್ತಿದ್ದ ಬಸ್​ನಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ

ಅಣ್ಣನಿಂದ ತಮ್ಮನ ಕೊಲೆ ಆರೋಪ ಕೇಸ್

ಬೆಂಗಳೂರು: ಅಣ್ಣನಿಂದ ತಮ್ಮನ ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶವವನ್ನು ಅಂಬೇಡ್ಕರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ನಂತರ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ. ಪತ್ನಿ ಪುಷ್ಪರಾಣಿ ಆಕ್ರಂದನ ಮುಗಿಲು ಮುಟ್ಟಿದೆ. ಈ ವೇಳೆ ಪತ್ನಿ ಪುಷ್ಪರಾಣಿ ಪ್ರಜ್ಙೆ ತಪ್ಪಿ ಬಿದ್ದಿದ್ದಾರೆ. ಸಂಬಂಧಿಕರಿಂದ ಆರೈಕೆ ಮಾಡಿದ್ದಾರೆ.

ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ