ದೆಹಲಿ: ಸಿಗರೇಟ್ಗಾಗಿ ಹಣಕೊಡಲು ನಿರಾಕರಣೆ, ನಡುರಸ್ತೆಯಲ್ಲೇ ಚೂರಿ ಇರಿದು ಅಪ್ರಾಪ್ತನ ಹತ್ಯೆ
ಸಿಗರೇಟ್ಗಾಗಿ 10 ರೂ. ಕೊಡಲು ನಿರಾಕರಿಸಿದ್ದಕ್ಕಾಗಿ ಅಪ್ರಾಪ್ತನನ್ನು ಹತ್ಯೆ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ದೆಹಲಿ: ಸಿಗರೇಟ್ಗಾಗಿ 10 ರೂ. ಕೊಡಲು ನಿರಾಕರಿಸಿದ್ದಕ್ಕಾಗಿ ಅಪ್ರಾಪ್ತನನ್ನು ಹತ್ಯೆ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ದೆಹಲಿಯ ಆನಂದ್ ಪರ್ಬಾತ್ ಪ್ರದೇಶದಲ್ಲಿ ಘಟನೆ ನಡೆದಿದೆ, ಆರೋಪಿಗಳಾದ ಪ್ರವೀಣ್(20), ಅಜಯ್ (23), ಜತಿನ್(24) ಬಾಬಾ ಫರೀದ್ಪುರಿ ನಿವಾಸಿಗಳಾಗಿದ್ದಾರೆ. ಸೋನು ಕುಮಾರ್ (20) ಆನಂದ್ ಪರ್ಬಾತ್ ನಿವಾಸಿಯಾಗಿದ್ದಾನೆ.
ಸೋಮವಾರ ಆನಂದ್ ಪರ್ಬಾತ್ನ ರಾಮ್ಜಸ್ ಶಾಲೆಯ ಸಮೀಪ ಅಪ್ರಾಪ್ತೆಯೊಬ್ಬಳು, ರಸ್ತೆಬದಿಯಲ್ಲಿ ರಕ್ತಸಿಕ್ತವಾಗಿ ಮಲಗಿದ್ದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಕೆಯ ಹೊಟ್ಟೆಯ ಭಾಗದಲ್ಲಿ ಚೂರಿಯಿಂದ ತಿವಿದ ಗುರುತುಗಳಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊಲೆಯಾದ ಅಪ್ರಾಪ್ತನನ್ನು ವಿಜಯ್ ಎಂದು ಗುರುತಿಸಲಾಗಿದ್ದು, ಆತ ಆನಂದ್ ಪರ್ಬಾತ್ನ ನಿವಾಸಿಯಾಗಿದ್ದಾನೆ. ಸಿಸಿಟಿವಿ ಫೂಟೇಜ್ ಹಾಗೂ ಇತರೆ ಮೂಲಗಳಿಂದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡೆಪ್ಯೂಟಿ ಪೊಲೀಸ್ ಕಮಿಷನರ್ ಶ್ವೇತಾ ಚೌಹಾಣ್ ತಿಳಿಸಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ, ಸಿಗರೇಟ್ ವಿಚಾರವಾಗಿ ನಡೆದ ಜಗಳದಲ್ಲಿ ಅಪ್ರಾಪ್ತನನ್ನು ಕೊಲೆ ಮಾಡಲಾಗಿದೆ ಎಂಬುದನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಆರೋಪಿ ಸೋನು, ಅದೇ ಪ್ರದೇಶದಲ್ಲಿ ವಾಸಮಾಡುತ್ತಿದ್ದ ವ್ಯಕ್ತಿಯು ಅಪ್ರಾಪ್ತನ ಬಳಿ ಸಿಗರೇಟ್ ಕೊಳ್ಳಲು 10 ರೂಪಾಯಿ ಕೇಳಿದ್ದಾನೆ, ಆತ ನಿರಾಕರಿಸಿದ್ದಕ್ಕಾಗಿ, ವೃತ್ತಿಯಲ್ಲಿ ಟೈಲರ್ ಆಗಿರುವ ಸೋನು ಹಾಗೂ ಆತನ ಸ್ನೇಹಿತರು ಅಪ್ರಾಪ್ತ ಬಾಲಕನ ಹೊಟ್ಟೆಗೆ ಚೂರಿ ಇರಿದಿದ್ದಾರೆ.
ಪ್ರವೀಣ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಅಜಯ್ ಬಾಡಿಗೆ ವಾಹನವನ್ನಿಟ್ಟುಕೊಂಡಿದ್ದಾನೆ, ಜತಿನ್ ಚಪ್ಪಲಿ ಅಂಗಡಿಯೊಂದರಲ್ಲಿ ಸೇಲ್ಸ್ಮೆನ್ ಆಗಿ ಕೆಲಸ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:41 am, Wed, 8 June 22