ಯುಕೆ: ಮರ್ಸಿಸೈಡ್ ಪೊಲೀಸ್ ಅಧಿಕಾರಿಯೊಬ್ಬ ಕರ್ತವ್ಯನಿರತನಾಗಿದ್ದಾಗಲೇ ಮಹಿಳೆಯರೊಂದಿಗೆ ರತಿಕ್ರೀಡೆಯಲ್ಲಿ ತೊಡಗಿ ವಿಚಾರಣೆ ಎದುರಿಸುತ್ತಿದ್ದಾನೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 01, 2022 | 7:57 AM

ಅವನು ಎದುರಿಸುತ್ತಿರುವ ಮೊದಲೆರಡು ಚಾರ್ಜ್ ಗಳು ಒಬ್ಬ ಮಹಿಳೆಯೊಂದಿಗ ಅನುಚಿತ ಸ್ನೇಹ ಬೆಳೆಸಿ ಡ್ಯೂಟಿಯಲ್ಲಿದ್ದಾಗಲೇ ಆಕೆಯೊಂದಿಗೆ ಹಲವಾರು ಬಾರಿ ರತಿಕ್ರೀಡೆಯಲ್ಲಿ ತೊಡಗಿದ ಪ್ರಕರಣಕ್ಕೆ ಸಂಬಂಧಿಸಿದೆ.

ಯುಕೆ: ಮರ್ಸಿಸೈಡ್ ಪೊಲೀಸ್ ಅಧಿಕಾರಿಯೊಬ್ಬ ಕರ್ತವ್ಯನಿರತನಾಗಿದ್ದಾಗಲೇ ಮಹಿಳೆಯರೊಂದಿಗೆ ರತಿಕ್ರೀಡೆಯಲ್ಲಿ ತೊಡಗಿ ವಿಚಾರಣೆ ಎದುರಿಸುತ್ತಿದ್ದಾನೆ!
ಕೋರ್ಟ್​​ ಮುಂದೆ ಆ್ಯಡಮ್ ಹೊಯ್ಲೆ
Follow us on

ಪೊಲೀಸರಿಂದ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುವ ಘಟನೆಗಳು ಎಲ್ಲ ದೇಶಗಳಲ್ಲಿ ಜರುಗುತ್ತವೆ. ಆದರೆ ಕರ್ತವ್ಯನಿರತನಾಗಿದ್ದಾಗಲೇ ಮಹಿಳೆಯರ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದನ್ನೇ ಅಭ್ಯಾಸ ಮಾಡಿಕೊಂಡಿದ್ದ ಇಂಗ್ಲೆಂಡ್​ನ ಪೊಲೀಸ್ ಅಧಿಕಾರಿಯೊಬ್ಬನನ್ನು (police officer) ನ್ಯಾಯಾಲಯದ (court) ಮುಂದೆ ಹಾಜರುಪಡಿಸಲಾಗಿದೆ. ದುರ್ವರ್ತನೆಯ ನಾಲ್ಕು ಆರೋಪಗಳನ್ನು ಎದುರಿಸುತ್ತಿರುವ ಪೊಲೀಸ್ ಅಧಿಕಾರಿ ಪಿಸಿ ಆ್ಯಡಮ್ ಹೊಯ್ಲೆಯ (PC Adam Hoyle) ವಿಚಾರಣೆ ಲಿವರ್ ಪೂಲ್ ಕ್ರೌನ್ ಕೋರ್ಟ್ ನಲ್ಲಿ ಮುಂದಿನ ವರ್ಷ ನಡೆಯಲಿದೆ.

ಅವನು ಎದುರಿಸುತ್ತಿರುವ ಮೊದಲೆರಡು ಚಾರ್ಜ್ ಗಳು ಒಬ್ಬ ಮಹಿಳೆಯೊಂದಿಗ ಅನುಚಿತ ಸ್ನೇಹ ಬೆಳೆಸಿ ಡ್ಯೂಟಿಯಲ್ಲಿದ್ದಾಗಲೇ ಆಕೆಯೊಂದಿಗೆ ಹಲವಾರು ಬಾರಿ ರತಿಕ್ರೀಡೆಯಲ್ಲಿ ತೊಡಗಿದ ಪ್ರಕರಣಕ್ಕೆ ಸಂಬಂಧಿಸಿದೆ.

ಆ್ಯಡಮ್ ಹೊಯ್ಲೆ ಎದುರಿಸುತ್ತಿರುವ ಮೂರನೇ ಆರೋಪ ಕೂಡ ತೆರನಾಗಿದ್ದು ಅವನು ಬಳಸಿಕೊಂಡಿದ್ದು ಮಾತ್ರ ಇನ್ನೊಬ್ಬ ಮಹಿಳೆಯನ್ನು. ನಾಲ್ಕನೇ ಪ್ರಕರಣ ಮೂರನೇ ಮಹಿಳೆಯನ್ನು ಮುತ್ತಿಕ್ಕಿದ್ದು ಮತ್ತು ಡ್ಯೂಟಿಯಲ್ಲಿರುವಾಗಲೇ ಲೈಂಗಿಕ ಕ್ರಿಯೆ ನಡೆಸಲು ಮುಂದಾಗಿದ್ದಕ್ಕೆ ಸಂಬಂಧಿಸಿದೆ.

ಇವು ಸದ್ಯಕ್ಕೆ ಬೆಳಕಿಗೆ ಬಂದಿರುವ ಮಹಿಳೆಯರನ್ನೊಳಗೊಂಡ ಪ್ರಕರಣಗಳಾದರೆ 39-ವರ್ಷ-ವಯಸ್ಸಿನ ಹೊಯ್ಲೆ, ಅನಧಿಕೃತವಾಗಿ ಕಂಪ್ಯೂಟರ್ ಬಳಸಿ ಡಾಟಾ ಬಳಸಿಕೊಂಡ ಅರೋಪ ಕೂಡ ಎದುರಿಸುತ್ತಿದ್ದಾನೆ.
ಮರ್ಸಿಸೈಡ್ ನ ಠಾಣೆಯೊಂದರಲ್ಲಿ ಪೊಲೀಸ್ ಅಧಿಕಾರಿಯಾಗಿರುವ ಹೊಯ್ಲೆ ನಗರದ ಲೋಯರ್ ಲೇನ್ ಪೊಲೀಸ್ ಠಾಣೆಯಲ್ಲಿ ಕೆಲಸಮಾಡುತ್ತಾನೆ. ಮೇ 26, 2012 ಮತ್ತು ಮೇ 31, 2019 ರ ನಡುವಿನ 7 ವರ್ಷಗಳ ಅವಧಿಯಲ್ಲಿ ಅವನು ಎಸಗಿರುವನೆಂದು ಆರೋಪಿಸಲಾಗಿರುವ ಅಪರಾಧಗಳಿಗೆ ಸಂಬಂಧಿಸಿದಂತೆ ಮಂಗಳವಾರದಂದು ಲಿವರ್ ಪೂಲ್ ನ ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ಹಾಜರಾಗಿದ್ದ.

ಲಿವರ್​ಪೂಲ್ ಕ್ರೌನ್ ಕೋರ್ಟ್​​​

ಕಂಪ್ಯೂಟರ್ ಡಾಟಾ ಕಳುವಿಗೆ ಸಂಬಂಧಿಸಿದ ಅಪರಾಧಗಳನ್ನು ಅವನು ಜೂನ್ 20, 2019 ಮತ್ತು ನವೆಂಬರ್ 18, 2019 ನಡುವೆ ಎಸಗಿದನೆಂದು ಆರೋಪಿಸಲಾಗಿದೆ.

ಮಂಗಳವಾರ ನಡೆದ ಅಲ್ಪಾವಧಿಯ ವಿಚಾರಣೆಗೆ ತಿಳಿನೀಲಿ ವರ್ಣದ ಅಂಗಿ ಮತ್ತು ನೇವಿ ಬ್ಲ್ಯೂ ಬಣ್ಣದ ಪ್ಯಾಂಟ್ ಧರಿಸಿ ಆಗಮಿಸಿದ್ದ ಹೊಯ್ಲೆಗೆ ಅರ್ಜಿ ಫಾರ್ಮ್ ತುಂಬಿಸಲು ಹೇಳದೆ ಕೇವಲ ತನ್ನ ಹೆಸರು, ಜನ್ಮದಿನಾಂಕ ಮತ್ತು ವಿಳಾಸ ಮಾತ್ರ ಖಚಿತಪಡಿಸುವಂತೆ ತಿಳಿಸಲಾಯಿತು.

ಹೊಯ್ಲೆಗೆ ಬೇಷರತ್ ಜಾಮೀನು ನೀಡಿರುವ ಜಿಲ್ಲಾ ನ್ಯಾಯಾಧೀಶ ಜೇಮ್ಸ್ ಹ್ಯಾಟನ್ ಅವರು ಜನೆವರಿ 4 ರಂದು ಕ್ರೌನ್ ಕೋರ್ಟ್ ಮುಂದೆ ಹಾಜರಾಗುವಂತೆ ಆದೇಶಿಸಿದ್ದಾರೆ.

ಗಡ್ಡಧಾರಿಯಾಗಿರುವ ಹೊಯ್ಲೆ ಬೂದು ಮತ್ತು ಕಪ್ಪುಬಣ್ಣದ ಜಾಕೆಟ್ ಧರಿಸಿ ಕೋರ್ಟ್ ಹೊರಗಡೆ ಜಾಕೆಟ್ ನಿಂದಲೇ ಮುಖಮುಚ್ಚಿಕೊಳ್ಳಲು ಪ್ರಯತ್ನಿಸಿರುವುದನ್ನು ಮಾಧ್ಯಮದ ಕೆಮೆರಾಗಳು ಸೆರೆಹಿಡಿದಿವೆ.
ಹೊಯ್ಲೆಯನ್ನು ಸಸ್ಪೆಂಡ್ ಮಾಡಿರುವ ಸಂಗತಿಯನ್ನು ಖಚಿತಪಡಿಸಿರುವ ಮರ್ಸಿಸೈಡ್ ಪೊಲೀಸ್, ಪ್ರಕರಣ ಈಗ ನ್ಯಾಯಾಲಯದ ಮೆಟ್ಟಿಲು ಅದರ ಬಗ್ಗೆ ಮಾತಾಡಲು ನಿರಾಕರಿಸಿದೆ.

ಮತ್ತಷ್ಟು ಕ್ರೈಮ್ ಕತೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ