ಟ್ರಾಫಿಕ್ ಪೊಲೀಸರಿಗೆ ವರ್ಷಾಂತ್ಯ ಸುಗ್ಗಿ! ಆದ್ರೆ 6.5 ಕೋಟಿ ದಂಡ ಹಾಕಿದ್ದರೂ ಹುಬ್ಬಳ್ಳಿ ವಾಹನ ಸವಾರರು ಟ್ರಾಫಿಕ್ ರೂಲ್ಸ್ಗೆ ಡೋಂಟ್ ಕೇರ್ ಅನ್ತಿದಾರೆ!
Hubballi Dharwad Traffic Police: ಅದ್ಯಾಕೋ ವಾಣಿಜ್ಯನಗರಿ ಜನಕ್ಕೆ ಹೆಲ್ಮೆಟ್ ಅಂದ್ರೇನೇ ಅಲರ್ಜಿ ಆದಂತಿದೆ. ತಲೆ ಉಳಿಸಿಕೊಳ್ಳಿ ಅಂದ್ರೇ ಅದೇ ತಲೆನೋವು ಅಂತಾರೆ. ಈ ಬಗ್ಗೆ ಅವಳಿನಗರದ ದ್ವಿಚಕ್ರ ವಾಹನ ಸವಾರರಿಗೆ ಜಾಗೃತಿ ಮೂಡಿಸುವುದು ಒಳಿತು. 6.5 ಕೋಟಿ ರೂ ದಂಡ ತೆತ್ತರೂ ಬುದ್ಧಿ ಬಂದಿಲ್ಲ!
ಹುಬ್ಬಳ್ಳಿ: ಇನ್ನೇನು ವರ್ಷದ ಕೊನೆ ತಿಂಗಳು.. ಟ್ರಾಫಿಕ್ ಪೊಲೀಸರಿಗೆ ಸುಗ್ಗಿಕಾಲ ಅಂತಾ ತಮಾಷೆಯಾಗಿ ಹೇಳೋದುಂಟು.. ಅದರೆ ವಾಣಿಜ್ಯನಗರದ ಮಂದಿಯಂತೂ ಅದ್ಯಾಕೋ ಏನೋ ಡೋಂಟ್ ಕೇರ್ ಲೆಕ್ಕದಲ್ಲಿ ಸಂಚಾರ ಮಾಡುತ್ತಿದ್ದಾರೆ.. ಅವರ ನಿರ್ಲಕ್ಷ್ಯತೆಗೆ ತಕ್ಕ ಶಾಸ್ತಿಯಾಗಿರೋದಂತೂ ಸುಳ್ಳಲ್ಲಾ.. ಈ ವರ್ಷದಲ್ಲಿ ಪುಡಾರಿ ಸವಾರರಿಗೆ ನಮ್ಮ ಪೊಲೀಸರು ಹಾಕಿರುವ ದಂಡದ ಮೊತ್ತ (fine) ಎಷ್ಟು ಗೋತ್ತಾ? ಕೇಳಿದ್ರೇ, ನೀವೂ ಶಾಕ್ ಆಗೋದು ಗ್ಯಾರಂಟಿ… ಓದಿ ಈ ಸ್ಟೋರಿ.
ಹುಬ್ಬಳ್ಳಿ-ಧಾರವಾಡದಲ್ಲಿ ದ್ವಿಚಕ್ರ ವಾಹನ ಸವಾರರು ಎಲ್ಲೆ ಮೀರುತ್ತಿದ್ದಾರೆ.. ಕೊಂಚವೂ ಕಾನೂನು ಅಂದರೆ ಭಯ ಭಕ್ತಿಯಿಲ್ಲದೇ ಸಂಚಾರ ನಡೆಸುತ್ತಿದ್ದಾರೆ.. ಪೊಲೀಸರಿಗೂ ಕ್ಯಾರೇ ಅನ್ನದೇ ಸವಾರಿ ಮಾಡುತ್ತಿದ್ದಾರೆ.. ದಂಡದ ಪ್ರಮಾಣ ಎರಡು ಮೂರು ಪಟ್ಟು ಹೆಚ್ಚಾಗಿದ್ದರೂ ಕಾನೂನು ಪಾಲನೆ ಮಾಡಲು (traffic rules) ನಿರ್ಲಕ್ಷ್ಯ ತೋರುತ್ತಿರುವುದು ಸಾಮಾನ್ಯ ಸಂಗತಿಯಂತಾಗಿದೆ.. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಯಲದ ವ್ಯಾಪ್ತಿಯಲ್ಲಿ (Hubballi Dharwad Traffic Police) ಹಾಕಿರುವ ದಂಡದ ಪ್ರಮಾಣ ಕೇಳಿದ್ರೇ ನೀವೂ ಬೆಚ್ಚಿಬೀಳ್ತೀರಿ…(Traffic violation).
ಹೌದು, ಅದು ಲಕ್ಷದಲ್ಲಿದ್ದಲ್ಲಿಲ್ಲಾ.. ಬರೋಬ್ಬರಿ ಆರೋವರೆ ಕೋಟಿ ರೂಪಾಯಿ ದಂಡವನ್ನು ಪೊಲೀಸರು ದ್ವಿಚಕ್ರ ವಾಹನ ಸವಾರರಿಂದ ವಸೂಲಿ ಮಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.. ಜನವರಿ 2022ಯಿಂದ ನವಂಬರ್ ಅಂತ್ಯದವರೆಗೆ ಟ್ರಾಫಿಕ್ ಪೊಲೀಸರು 6 ಕೋಟಿ 50 ಲಕ್ಷ ರೂಪಾಯಿ ದಂದದ ಮೊತ್ತವನ್ನು ಸಂಗ್ರಹ ಮಾಡಿ ಸೈ ಅನಿಸಿಕೊಂಡಿದ್ದಾರೆ.. ಸಂಚಾರ ನಿಯಮಗಳನ್ನು ಗಾಳಿಗೆ ತೂರಿದ ಸವಾರಶೂರರಿಗೆ ತಕ್ಕ ಶಾಸ್ತಿಯಾಗಿರುವುದಂತೂ ಸತ್ಯ ಸತ್ಯ…
ಎಲ್ಲೆಂದರಲ್ಲಿ ಯದ್ವಾತದ್ವಾ ವಾಹನ ಸವಾರಿ ಮಾಡಿದ್ದ ಪುಡಾರಿ ಸವಾರರ ವಿರುದ್ದ ಕ್ರಮ ಕೈಗೊಳ್ಳಲಾಗಿದೆ.. ಫುಟ್‌ಪಾತ್ ಮೇಲೆ ಬೈಕ್ ಓಡಿಸಿದವರನ್ನು ಹುಬ್ಬಳ್ಳಿ ಟ್ರಾಫಿಕ್ ಪೊಲೀಸರು ಸುಮ್ನೆ ಬಿಟ್ಟಿಲ್ಲಾ.. ಒಟ್ಟು 1 ಲಕ್ಷ 11 ಸಾವಿರದ 470 ಪ್ರಕರಣಗಳನ್ನು ನಿಯಮ ಪಾಲನೆ ಮಾಡದವರ ವಿರುದ್ದ ಕೇಸ್ ಜಡಿದಿದ್ದಾರೆ. ಒಟ್ಟು 11 ತಿಂಗಳಲ್ಲಿ ಆರು ಕೋಟಿ ಐವತ್ತು ಲಕ್ಷದ ಮೂವತ್ತೆರಡು ಸಾವಿರದ ನೂರು ರೂಪಾಯಿ ದಂಡ ವಸೂಲಿ ಮಾಡಿ, ಬೇರೆ ಸಾವರರಿಗೆ ಎಚ್ಚರಿಕೆ ರವಾನೆ ಮಾಡಿದ್ದಾರೆ.
ಇದನ್ನೂ ಓದಿ: Investor’s Conclave: ಡಿಸೆಂಬರ್ 3ರಂದು ಬೆಂಗಳೂರಿನಲ್ಲಿ ಗಣಿಗಾರಿಕೆ ವಲಯದ ಹೂಡಿಕೆದಾರರ ಸಮಾವೇಶ
ಅದ್ಯಾಕೋ ವಾಣಿಜ್ಯನಗರಿ ಜನಕ್ಕೆ ಹೆಲ್ಮೆಟ್ ಹಾಕಿಕೊಳ್ಳೋದು ಅಂದ್ರೇನೇ ಅಲರ್ಜಿ ಆದಂತಿದೆ. ತಲೆ ಉಳಿಸಿಕೊಳ್ಳಿ ಅಂದ್ರೇ ಅದೇ ತಲೆನೋವು ಅಂತಾ ಭಾವಿಸುತ್ತಿದ್ದಾರೇನೋ ಅಂತಾ ಸಾರ್ವಜನಿಕರಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಈ ಬಗ್ಗೆ ಅವಳಿನಗರದ ದ್ವಿಚಕ್ರ ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ಆರೂವರೆ ಕೋಟಿ ರೂಪಾಯಿ ದಂಡ ತೆತ್ತ ಅವಳಿನಗರದ ಸವಾರರಿಗೆ ಸಂಚಾರ ನಿಯಮದ ಅರಿವಿಲ್ಲವೋ, ಇಲ್ಲಾ ಉದ್ದೇಶಪೂರ್ವಕವಾಗಿಯೇ ನಿಯಮ ಗಾಳಿಗೆ ತೂರಲಾಗುತ್ತಿದೆಯೋ? ಸವಾರಿಗೆ ಮಾನದಂಡಗಳನ್ನು ಉಡಾಫೆಯೋ ಅನ್ನೋದು ಗೊತ್ತಾಗುತ್ತಿಲ್ಲಾ.. ಏನೇ ಆಗಲಿ, ಸಂಚಾರಿ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. (ವರದಿ: ರಹಮತ್ ಕಂಚಗಾರ್, ಟಿವಿ 9, ಹುಬ್ಬಳ್ಳಿ)