AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ-ಧಾರವಾಡ ಅವಳಿ ನಗರವನ್ನ ಸ್ವಚ್ಛ ಮಹಾನಗರವಾಗಿಸಲು ಬಂದಿದ್ದ ಸ್ಮಾರ್ಟ್‌ ಸಿಟಿ ಯೋಜನೆ ಯಾವ ಕಸದ ಬುಟ್ಟಿ ಸೇರಿತೋ ಬಲ್ಲವರು ಯಾರು?

garbage: ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು, ಅದುಬಿಟ್ಟು ಹೊಸ ವ್ಯವಸ್ಥೆ ಬಗ್ಗೆ ಚಿಂತನೆ ನಡೆಸುವುದು ಅವೈಜ್ಞಾನಿಕ ಹಾಗೂ ತರಾತುರಿಯ ನಿರ್ಧಾರವಾದೀತು. ಸಣ್ಣ ಕಾರಣದ ನೆಪ ಇಟ್ಟುಕೊಂಡು ದೊಡ್ಡ ಮೊತ್ತದ ಹೊಸ ಯೋಜನೆಯ ಚಿಂತನೆಯ ಹಿಂದೆ ಏನಡಗಿದೆ? ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಮಂದಿ ಕೇಳುತ್ತಿದ್ದಾರೆ

ಹುಬ್ಬಳ್ಳಿ-ಧಾರವಾಡ ಅವಳಿ ನಗರವನ್ನ ಸ್ವಚ್ಛ ಮಹಾನಗರವಾಗಿಸಲು ಬಂದಿದ್ದ ಸ್ಮಾರ್ಟ್‌ ಸಿಟಿ ಯೋಜನೆ ಯಾವ ಕಸದ ಬುಟ್ಟಿ ಸೇರಿತೋ ಬಲ್ಲವರು ಯಾರು?
ಹುಬ್ಬಳ್ಳಿ-ಧಾರವಾಡ ಅವಳಿ ನಗರವನ್ನ ಸ್ವಚ್ಛ ಮಹಾನಗರವಾಗಿಸಲು ಬಂದಿದ್ದ ಸ್ಮಾರ್ಟ್‌ ಸಿಟಿ ಯೋಜನೆ ಯಾವ ಕಸದ ಬುಟ್ಟಿ ಸೇರಿತೋ ಬಲ್ಲವರು ಯಾರು?
TV9 Web
| Updated By: ಡಾ. ಭಾಸ್ಕರ ಹೆಗಡೆ|

Updated on:Dec 01, 2022 | 1:22 PM

Share

ಹುಬ್ಬಳ್ಳಿ-ಧಾರವಾಡ ಅವಳಿ ನಗರವನ್ನು ಮತ್ತಷ್ಟು ಸ್ಮಾರ್ಟ್ ಮಾಡಲು ಇಂದಿನ ಮಾಹಿತಿ ತಂತ್ರಜ್ಞಾನ ಯುಗಕ್ಕೆ ತಕ್ಕಂತೆ ಕಸ ಸಂಗ್ರಹಣ ಕಾರ್ಯಕ್ಕೂ ವಿಶೇಷ ಯೋಜನೆ ಸಿದ್ಧಪಡಿಸಲಾಗಿತ್ತು. ಕಸ ಸಂಗ್ರಹಣ ಕಾರ್ಯ ಅನುಷ್ಠಾನಕ್ಕೆ ಆ ಪ್ರೊಜೆಕ್ಟ್ ಪರಿಣಾಮಕಾರಿಯಾಗಿತ್ತು. ಮನೆಗಳಿಗೆ ಆ ಡಿವೈಸ್ ಅಳವಡಿಸಿದರೆ ಸಾಕು. ಕ್ಲೀನಿಂಗ್ ಕೆಲ್ಸ ಅಷ್ಟೊಂದು ಸಲೀಸಾ ಅನ್ನುವಷ್ಟು ಆ ಯೋಜನೆಯಿತ್ತು. ಆದರೆ ಅಂತಹ ಕನಸಿನ ಯೋಜನೆ ಏನಾಯ್ತು? ಅದಕ್ಕಾಗಿ ರೊಕ್ಕ ಎಷ್ಟು ಖರ್ಚಾಯಿತು? ಎಂಬುದು ಆ ದೇವರೆ ಬಲ್ಲ ಎಂಬಂತಾಗಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರವನ್ನು (Hubballi-Dharwad Municipal Corporation) ಸ್ವಚ್ಛ ಮಹಾನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ (Smart City project) ಮಹಾನಗರ ವ್ಯಾಪ್ತಿಯಲ್ಲಿ ಈಗಾಗಲೇ 2.12 ಲಕ್ಷ ಮನೆಗಳಿಗೆ ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್ ಟ್ಯಾಗ್ (ಆರ್‌ಎಫ್‌ಐಡಿ) (Radio Frequency Identification Tag plan -RFID) ಅಳವಡಿಸಲಾಗಿದೆ. ಇನ್ನೂ 30 ಸಾವಿರ ಮನೆಗಳಿಗೆ ಟ್ಯಾಗ್ ಅಳವಡಿಸುವುದು ಬಾಕಿಯಿದ್ದು, ಈ ಮಧ್ಯೆ, ಸ್ವಚ್ಛತೆಯ ದೃಷ್ಟಿಯಿಂದ ಬಹುಮುಖ್ಯವೆನಿಸುವ 50 ಸಾವಿರ ಖಾಲಿ ನಿವೇಶನಗಳೂ ಇವೆ. ಏಕೆಂದರೆ ಊರಿನ ಬೇಡದ ಎಲ್ಲಾ ಕಸ ತುಂಬುವುದು (garbage) ಈ ಖಾಲಿ ನಿವೇಶನಗಳಲ್ಲಿಯೇ! ಕಸ ಸಂಗ್ರಹಿಸಲು ಆಗಮಿಸುವ ಪೌರ ಕಾರ್ಮಿಕರು ಕಸ ತೆಗದುಕೊಂಡ ನಂತರ ಮನೆ ಮುಂಭಾಗದ ಟ್ಯಾಗ್ ರೀಡ್ ಮಾಡುವುದು ನಿಯಮವಾಗಿತ್ತು. ಆದ್ರೆ ಕೆಲವಡೆ ಪೌರ ಕಾರ್ಮಿಕರು ಟ್ಯಾಗ್ ರೀಡ್ ಮಾಡುತ್ತಿದ್ದಾರೆಯೇ ಹೊರತು ಕಸ ಸಂಗ್ರಹಿಸುತ್ತಿಲ್ಲ! ಎನ್ನುವ ದೂರುಗಳು ಈ ಬಕೆಟ್ ಯೋಜನೆ ಕಸದಬುಟ್ಟಿ ಸೇರಲು ಕಾರಣವಾಗಿದೆ.

ಆದರೆ ಹೀಗೆ ಕಸ ಪಡೆಯದೆ ಕೇವಲ ರೀಡ್ ಮಾಡುವ ಪ್ರಕರಣಗಳು ಕೇವಲ ಶೇ.1 ಕ್ಕಿಂತ ಕಡಿಮೆಯಿದೆ. ಅವುಗಳನ್ನು ಪತ್ತೆ ಹಚ್ಚುವ ಕೆಲಸ ಆರೋಗ್ಯ ನಿರೀಕ್ಷಕರಿಗೆ ಹೊರಿಸಲಾಗಿದೆ. ಇಂತಹ ಘಟನೆಗಳು ನಡೆದರೆ ಪಾಲಿಕೆ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ. ಕೇವಲ ರೀಡ್ ಮಾಡಿದರೆ ಮನೆ ಮಾಲೀಕರು ಸುಮ್ಮನಿರಲು ಸಾಧ್ಯವಿಲ್ಲ. ಅಲ್ಲದೆ 190 ಆಟೋ ಟ್ರಿಪ್ಪರ್‌ಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು (GPS device), ಸೂಚಿಸಿದ ಮಾರ್ಗ ಬಿಟ್ಟು ಬೇರೆಡೆ ಹೋಗುವಂತಿಲ್ಲ, ಎಲ್ಲಿಯೂ ನಿಲ್ಲುವಂತೆಯೂ ಇಲ್ಲ. ಈ ನಿಮಯಗಳ ಮೀರಿದರೆ ಚಾಲಕರು ಕಾರಣ ನೀಡಬೇಕು.

ಕಸ ಪಡೆಯದೆ ರೀಡ್ ಮಾಡಿದ ಕಾರ್ಮಿಕರಿಗೆ ಎಚ್ಚರಿಕೆ ನೀಡುವ ಹಾಗೂ ಕ್ರಮ ಕೈಗೊಳ್ಳುವ ಕಾರ್ಯವೂ ನಡೆದಿದೆ. ಸಣ್ಣ ನ್ಯೂನ್ಯತೆಗೆ ಹೊಸ ಯೋಜನೆ ಎಷ್ಟು ಸರಿ ಎನ್ನುವುದು ಪಾಲಿಕೆ ಅಧಿಕಾರಿಗಳ ಅಭಿಪ್ರಾಯ. ಪ್ರತಿಯೊಂದು ಆಟೋ ಟ್ರಿಪ್ಪರ್‌ಗೆ ಒಂದು ರೀಡಿಂಗ್ ಮಷಿನ್ ನೀಡಲಾಗಿದೆ. ಪ್ರತಿಯೊಂದು ಆಟೋ ಟ್ರಿಪ್ಪರ್‌ಗಳಿಗೆ ಮಾರ್ಗ ನೀಡಿ ಜಿಪಿಎಸ್ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಜಮಾದಾರ್‌ನಿಂದ ಹಿಡಿದು ಪಾಲಿಕೆ ಆಯುಕ್ತರು ಸೇರಿದಂತೆ ಸಂಬಂಧಸಿದ ಅಧಿಕಾರಿಗಳಿಗೆ ಆಪ್ ನೀಡಲಾಗಿದೆ.

ಇದೆಲ್ಲದರ ಉಸ್ತುವಾರಿಗೆ ಇಂಟಿಗ್ರೇಟೆಡ್ ಕಮಾಂಡಿಂಗ್ ಕಂಟ್ರೂಲ್ ರೂಂ ನಿರ್ಮಿಸಲಾಗಿದೆ. ಇಲ್ಲಿ ಪ್ರತಿಯೊಂದು ಆಟೋ ಟ್ರಿಪ್ಪರ್‌ಗಳ ಸಂಚಾರದ ಮೇಲೆ ನಿಗಾ ಇಡಲಾಗುತ್ತದೆ. ನಿತ್ಯ ಎಷ್ಟು ಮನೆಗಳ ಟ್ಯಾಗ್ ರೀಡ್ ಆಗುತ್ತಿದೆ ಎಂಬಂತಹ ಎಲ್ಲ ಕಾರ್ಯಗಳ ಮೇಲ್ವಿಚಾರಣೆ ಮಾಡಬಹುದಾದ ಈ ಯೋಜನೆಯ ಒಟ್ಟು ವೆಚ್ಚ 43 ಕೋಟಿ ರೂಪಾಯಿ. ಇಷ್ಟೆಲ್ಲಾ ತಂತ್ರಜ್ಞಾನ ಇದ್ದಾಗಲೂ ಕೇವಲ ರೀಡ್ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡುತ್ತದೆ.. ಕೇವಲ ಟ್ಯಾಗ್ ರೀಡ್ ಮಾಡುತ್ತಾರೆ, ಕಸ ತೆಗೆದುಕೊಂಡು ಹೋಗುವುದಿಲ್ಲ. ಇದರ ಬದಲಾಗಿ ಆರ್‌ಎಫ್‌ಐಡಿ ಟ್ಯಾಗ್ ಇರುವ ಬಕೆಟ್‌ಗಳನ್ನು ನೀಡಿದರೆ ಇದನ್ನು ತಪ್ಪಿಸಬಹುದು ಎನ್ನುವ ಚಿಂತನೆ ಕೆಲವರದ್ದಾಗಿದೆ. ಎಕ್ಸ್‌ಪೋವೊಂದರಲ್ಲಿ ಆರ್‌ಎಫ್‌ಐಡಿ ಟ್ಯಾಗ್ ಬಕೆಟ್‌ವೊಂದಕ್ಕೆ 200 ರೂ. ದರವಿತ್ತು. ಪ್ರತಿ ಮನೆಗೆ ಒಣ ಹಾಗೂ ಹಸಿ ಕಸಕ್ಕಾಗಿ ಎರಡು ಬಕೆಟ್‌ಗಳನ್ನು 2.12 ಲಕ್ಷ ಮನೆಗಳಿಗೆ ನೀಡಿದರೆ ಸರಿ ಸುಮಾರು 85 ಕೋಟಿ ರೂ. ಬೇಕಾಗುತ್ತದೆ ಎನ್ನುತ್ತಾರೆ ಈರೇಶ ಅಂಚಟಗೇರಿ, ಮೇಯರ್ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ.

ರೀಡ್ ಮಾಡುವ ಮಷಿನ್ ಹೊಸ ಅಪ್ಲಿಕೇಶನ್ ಸೇರಿ ಎಷ್ಟು ಕೋಟಿ ರೂಪಾಯಿ ದಾಟಲಿದೆ ಗೊತ್ತಿಲ್ಲ. ದೊಡ್ಡ ಮೊತ್ತದ ಯೋಜನೆಗೆ ಪಾಲಿಕೆ ಆರ್ಥಿಕವಾಗಿ ಸದೃಢವಾಗಿದೆಯಾ ಎಂಬುದನ್ನು ಕೂಡ ಯೋಚಿಸಬೇಕಾಗಿದೆ. ದೇಶದ ಮೊದಲ ಸ್ವಚ್ಛ ನಗರ ಎನ್ನಿಸಿಕೊಂಡಿರುವ ಇಂದೋರ್‌ನಲ್ಲಿ ಕೂಡ ಈ ಬಕೆಟ್ ಯೋಜನೆಯಿಲ್ಲ! 2.12 ಲಕ್ಷ ಮನೆಗಳಿಗೆ ಟ್ಯಾಗ್ ಕೂಡಿಸಿದರೂ ಇಲ್ಲಿಯವರೆಗೆ 1 ಲಕ್ಷ ಮನೆಗಳ ರೀಡ್ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಇತ್ತೀಚೆಗೆ ವಾಲ್‌ಮೆನ್‌ಗಳ ಪ್ರತಿಭಟನೆ, ನೀರು ಪೂರೈಕೆಗೆ ಕೆಲ ಕಾರ್ಮಿಕರನ್ನು ಬಳಸಿಕೊಂಡ ಪರಿಣಾಮ ಅದು 30 ಸಾವಿರ ಮನೆಗಳಿಗೆ ಕುಸಿದಿದೆ. ಹೀಗಿರುವಾಗ ಮತ್ತೊಂದು ಹೊಸ ಯೋಜನೆಗೆ ಚಿಂತನೆ ನಡೆಸಿರುವವರಿಗೆ ಸಾರ್ವಜನಿಕರ ತೆರಿಗೆ ಹಣದ ಬಗ್ಗೆ ಕಾಳಜಿಯಿಲ್ಲದಿರುವುದು ಸ್ಪಷ್ಟವಾಗಿದೆ. ರೀಡಿಂಗ್​ ಬಗೆಗಿನ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಸಣ್ಣ ಪುಟ್ಟ ಕ್ರಮಗಳನ್ನು ಕೈಗೊಂಡರೆ ಸಾಕಾದೀತು. ಅದುಬಿಟ್ಟು ಮತ್ತೆ ನೂರಾರು ಕೋಟಿ ರೂಪಾಯಿ ಸುರಿಯುವ ಅಗತ್ಯವಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು, ಅದುಬಿಟ್ಟು ಹೊಸ ವ್ಯವಸ್ಥೆ ಬಗ್ಗೆ ಚಿಂತನೆ ನಡೆಸುವುದು ಅವೈಜ್ಞಾನಿಕ ಹಾಗೂ ತರಾತುರಿಯ ನಿರ್ಧಾರವಾದೀತು. ಸಣ್ಣ ಕಾರಣದ ನೆಪ ಇಟ್ಟುಕೊಂಡು ದೊಡ್ಡ ಮೊತ್ತದ ಹೊಸ ಯೋಜನೆಯ ಚಿಂತನೆಯ ಹಿಂದೆ ಏನಡಗಿದೆ? ಸಾರ್ವಜನಿಕ ತೆರಿಗೆ ಹಣ ಬಳಕೆ ಮಾಡುವಾಗ ಪ್ರತಿಯೊಬ್ಬರಿಗೂ ಹೊಣೆಗಾರಿಕೆ ಇರಬೇಕು. ಸಮಗ್ರ ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದರೆ ಈ ಸಮಸ್ಯೆಗಳು ಇರುವುದಿಲ್ಲ. ಕೋಟಿ ಕೋಟಿ ಹಣ ಸುರಿದು ಹೊಸ ಯೋಜನೆ ಜಾರಿಗೆ ತರುವ ಬದಲು ಹಳೆಯದನ್ನೇ ಸರಿಯಾಗಿ ನಿರ್ವಹಣೆ ಮಾಡಿ ಜನರ ತೆರಿಗೆ ಹಣವನ್ನ ಉಳಿಸಬೇಕಾದ ಮಹತ್ತರ ಹೊಣೆಗಾರಿಕೆ ಪಾಲಿಕೆಯ ಮೇಲಿದೆ. (ರಹಮತ್ ಕಂಚಗಾರ್, ಟಿವಿ 9, ಹುಬ್ಬಳ್ಳಿ)

Also Read:

ಮುಸ್ಲಿಂ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಕಾಲೇಜು ಆರಂಭಿಸಿದರೆ ಸ್ವಾಗತ: ಎಚ್​ಡಿ ಕುಮಾರಸ್ವಾಮಿ

Also Read: ಚಿತ್ರದುರ್ಗ: ಮುರುಘಾ ಮಠದಲ್ಲಿದ್ದ 22 ಮಕ್ಕಳು ನಾಪತ್ತೆ, ಈ ಮಕ್ಕಳು ಮಠದ ಪಾಲಾಗಿದ್ದು ಹೇಗೆಂಬುದೇ ಪ್ರಶ್ನೆ

Published On - 12:34 pm, Thu, 1 December 22

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ