IPL Auction 2025: ಕಡಿಮೆ ಮೊತ್ತಕ್ಕೆ ಆರು ಆಟಗಾರರನ್ನು ಖರೀದಿಸಿದ ಆರ್​ಸಿಬಿ

RCB IPL Auction 2025: ಐಪಿಎಲ್ ಮೆಗಾ ಹರಾಜಿನ ಮೊದಲ ದಿನ ಆರ್​ಸಿಬಿ ಒಟ್ಟು 6 ಆಟಗಾರರನ್ನು ಖರೀದಿಸಿತು. ಇದರಲ್ಲಿ ಮೂವರು ಆಟಗಾರರು ವಿದೇಶಿಗರಾದರೆ... ಉಳಿದ ಮೂವರು ಭಾರತೀಯ ಆಟಗಾರರಾಗಿದ್ದಾರೆ. ಬೇರೆ ತಂಡಗಳಿಗೆ ಹೊಲಿಸಿದರೆ, ಆರ್​ಸಿಬಿ ಯಾವುದೇ ಆಟಗಾರನಿಗೂ ದುಬಾರಿ ಬೆಲೆ ನೀಡಲಿಲ್ಲ.

ಪೃಥ್ವಿಶಂಕರ
|

Updated on: Nov 24, 2024 | 11:25 PM

ಐಪಿಎಲ್ ಮೆಗಾ ಹರಾಜಿನ ಮೊದಲ ದಿನ ಆರ್​ಸಿಬಿ ಒಟ್ಟು 6 ಆಟಗಾರರನ್ನು ಖರೀದಿಸಿತು. ಇದರಲ್ಲಿ ಮೂವರು ಆಟಗಾರರು ವಿದೇಶಿಗರಾದರೆ... ಉಳಿದ ಮೂವರು ಭಾರತೀಯ ಆಟಗಾರರಾಗಿದ್ದಾರೆ. ಬೇರೆ ತಂಡಗಳಿಗೆ ಹೊಲಿಸಿದರೆ, ಆರ್​ಸಿಬಿ ಯಾವುದೇ ಆಟಗಾರನಿಗೂ ದುಬಾರಿ ಬೆಲೆ ನೀಡಲಿಲ್ಲ.

1 / 7
ಆರ್​ಸಿಬಿಯ ಮೊದಲ ಖರೀದಿಯಾಗಿ ಇಂಗ್ಲೆಂಡ್‌ನ ಸ್ಫೋಟಕ ಆಲ್‌ರೌಂಡರ್ ಲಿಯಾಮ್ ಲಿವಿಂಗ್​ಸ್ಟೋನ್ ತಂಡವನ್ನು ಸೇರಿಕೊಂಡರು. ಅವರನ್ನು ಆರ್​ಸಿಬಿ 8.75 ಕೋಟಿ ನೀಡಿ ಖರೀದಿ ಮಾಡಿದೆ.

2 / 7
ಎರಡನೇ ಆಯ್ಕೆಯಾಗಿ ಮತ್ತೊಬ್ಬ ಇಂಗ್ಲೆಂಡ್‌ ಪ್ಲೇಯರ್​ ಅನ್ನು ಖರೀದಿಸಿದ ಆರ್​ಸಿಬಿ, ಈ ಬಾರಿ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಿಲ್ ಸಾಲ್ಟ್ ಅವರನ್ನು 11.50 ಕೋಟಿ ನೀಡಿ ತನ್ನ ಖಾತೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಯಿತು.

3 / 7
ಮೂರನೇ ಆಯ್ಕೆಯಾಗಿ ಭಾರತದ ವಿಕೆಟ್​ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಅವರನ್ನು ಆರ್​ಸಿಬಿ ಖರೀದಿಸಿತು. ಮೆಗಾ ಹರಾಜಿನಲ್ಲಿ ಜಿತೇಶ್ ಶರ್ಮಾ ಅವರನ್ನು ಖರೀದಿಸಲು ಲಕ್ನೋ, ಸಿಎಸ್​ಕೆ, ಡೆಲ್ಲಿ ಕ್ಯಾಪಿಟಲ್ಸ್ ಸೇರಿದಂತೆ ಇತರ ಫ್ರಾಂಚೈಸಿಗಳು ಮುಗಿಬಿದ್ದಿದ್ದವು. ಆದರೆ ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಿತೇಶ್ ಶರ್ಮಾ ಅವರನ್ನು 11 ಕೋಟಿಗೆ ಖರೀದಿಸಿತು.

4 / 7
ನಾಲ್ಕನೇ ಆಟಗಾರನಾಗಿ ಆಸ್ಟ್ರೇಲಿಯಾದ ಸ್ಟಾರ್ ಬೌಲರ್ ಜೋಶ್ ಹೇಜಲ್‌ವುಡ್ ಮತ್ತೊಮ್ಮೆ ಆರ್​ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. 2023 ರ ಆವೃತ್ತಿಯಲ್ಲಿ ಆರ್​ಸಿಬಿ ಪರ ಆಡಿದ್ದ ಹೇಜಲ್‌ವುಡ್ 2 ಕೋಟಿ ಮೂಲ ಬೆಲೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಅಂತಿಮವಾಗಿ ಅವರನ್ನು ಆರ್​ಸಿಬಿ 12.50 ಕೋಟಿಗೆ ಖರೀದಿಸಿದೆ.

5 / 7
ಐದನೇ ಆಯ್ಕೆಯಾಗಿ ಭಾರತದ ಬೌಲರ್​ ಕಡೆ ಮುಖ ಮಾಡಿದ ಆರ್​ಸಿಬಿ ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ರಾಸಿಕ್ ದರ್ ಅವರನ್ನು 6 ಕೋಟಿ ನೋಡಿ ಖರೀದಿಸಿತು. ಇದರೊಂದಿಗೆ ಆರ್​ಸಿಬಿ ಪಾಳಯದ ವೇಗಿಗಳ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

6 / 7
ದಿನದ ಕೊನೆಯ ಖರೀದಿಯಾಗಿ ಕಳೆದ ಬಾರಿ ಕೆಕೆಆರ್ ತಂಡದ ಪ್ರಮುಖ ಸ್ಪಿನ್ನರ್​ಗಳಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದ ಭಾರತದ ಸ್ಪಿನ್ನರ್ ಸುಯೇಶ್ ಶರ್ಮಾ ಅವರನ್ನು ಆರ್​ಸಿಬಿ 2.2 ಕೋಟಿ ರೂ. ನೀಡಿ ತನ್ನ ಬತ್ತಳಿಕೆಗೆ ಹಾಕಿಕೊಂಡಿದೆ.

7 / 7
Follow us