Video: ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ

Video: ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ

ನಯನಾ ರಾಜೀವ್
|

Updated on:Nov 24, 2024 | 10:07 AM

ನ್ಯಾಯಾಲಯದ ಆದೇಶದ ಮೇರೆಗೆ ಸಮೀಕ್ಷಾ ತಂಡ ಭಾನುವಾರ ಬೆಳಗ್ಗೆ ಉತ್ತರ ಪ್ರದೇಶದ ಸಂಭಾಲ್ ತಲುಪಿದೆ. ಒಳಗಡೆ ಸಮೀಕ್ಷೆ ನಡೆಯುತ್ತಿದ್ದಾಗ ಹೊರಗಡೆ ರಸ್ತೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಘೋಷಣೆಗಳ ನಡುವೆ ಜನರು ಕಲ್ಲು ತೂರಾಟ ಆರಂಭಿಸಿದರು. ಸ್ಥಳದಲ್ಲಿದ್ದ ಪೊಲೀಸರು ಗುಂಪು ಚದುರಿಸಲು ಲಾಠಿ ಚಾರ್ಜ್ ಮಾಡಿ ಅಶ್ರುವಾಯು ಪ್ರಯೋಗಿಸಿದರು. ಪರಿಸ್ಥಿತಿ ಉದ್ವಿಗ್ನವಾಗಿದೆ.

ಉತ್ತರ ಪ್ರದೇಶದ ಸಂಭಾಲ್​ನಲ್ಲಿರುವ ಜಾಮಾ ಮಸೀದಿ ಸಮೀಕ್ಷೆಗೆ  ನ್ಯಾಯಾಲಯದ ಆದೇಶದ ಮೇರೆಗೆ ಸಮೀಕ್ಷಾ ತಂಡ ಭಾನುವಾರ ಬೆಳಗ್ಗೆ ಉತ್ತರ ಪ್ರದೇಶದ ಸಂಭಾಲ್ ತಲುಪಿದೆ. ಒಳಗಡೆ ಸಮೀಕ್ಷೆ ನಡೆಯುತ್ತಿದ್ದಾಗ ಹೊರಗಡೆ ರಸ್ತೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಘೋಷಣೆಗಳ ನಡುವೆ ಜನರು ಕಲ್ಲು ತೂರಾಟ ಆರಂಭಿಸಿದರು. ಸ್ಥಳದಲ್ಲಿದ್ದ ಪೊಲೀಸರು ಗುಂಪು ಚದುರಿಸಲು ಲಾಠಿ ಚಾರ್ಜ್ ಮಾಡಿ ಅಶ್ರುವಾಯು ಪ್ರಯೋಗಿಸಿದರು. ಪರಿಸ್ಥಿತಿ ಉದ್ವಿಗ್ನವಾಗಿದೆ.

ಈ ಹಿಂದೆಯೂ ನವೆಂಬರ್ 19 ರಂದು ಸಮೀಕ್ಷೆ ನಡೆಸಲಾಗಿತ್ತು. ನಂತರ ಸಮೀಕ್ಷಾ ತಂಡವು ರಾತ್ರಿ ಆಗಮಿಸಿದ್ದು, ಮಸೀದಿಯ ಒಳಭಾಗವನ್ನು ಸಮೀಕ್ಷೆ ನಡೆಸಲಾಯಿತು. ಇದಾದ ಬಳಿಕ ಹೊರ ಭಾಗದ ಸಮೀಕ್ಷೆಗೆ ನ.24ರಂದು ನಿಗದಿ ಪಡಿಸಲಾಗಿತ್ತು.
ಭಾನುವಾರ ಎರಡೂ ಕಡೆಯವರ ಒಪ್ಪಿಗೆ ಮೇರೆಗೆ ತಂಡ ಮಸೀದಿ ತಲುಪಿತು.

ನಮಾಜಿಗೆ ಯಾವುದೇ ತೊಂದರೆಯಾಗದಂತೆ ಮುಂಜಾನೆ ಪ್ರಾರ್ಥನೆ ಮುಗಿಸಿ 7.30ರ ಸಮಯ ಆಯ್ಕೆ ಮಾಡಿಕೊಂಡರೂ ಸಮೀಕ್ಷೆ ವೇಳೆ ಕೆಲವರು ಗಲಾಟೆ ಸೃಷ್ಟಿಸಿದರು.

ಪೊಲೀಸರು ಕೆಲ ಯುವಕರನ್ನು ಬಂಧಿಸಿದ್ದಾರೆ. ಸದ್ಯ ಸಮೀಕ್ಷೆ ಸ್ಥಗಿತಗೊಂಡಿದೆ. ಪರಿಸ್ಥಿತಿ ಸಹಜವಾದ ನಂತರವೇ ಸಮೀಕ್ಷೆ ಆರಂಭಿಸಲಾಗುವುದು ಎಂದು ಆಡಳಿತ ಹೇಳಿದೆ. ನವೆಂಬರ್ 29ರೊಳಗೆ ಸಮೀಕ್ಷಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published on: Nov 24, 2024 10:07 AM