ಜೈಲರ್ ನಿರ್ಲಕ್ಷ್ಯದಿಂದ ವಿಚಾರಣಾಧೀನ ಕೈದಿ ಪರಾರಿ: ಶಿರಸಿ ಪೊಲೀಸರಿಂದ ಕೈದಿಗಾಗಿ ಶೋಧ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 04, 2023 | 9:10 PM

ಜೈಲರ್ ನಿರ್ಲಕ್ಷ್ಯದಿಂದ ವಿಚಾರಣಾಧೀನ ಕೈದಿ ಪರಾರಿಯಾಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಾರಾಗೃಹದಲ್ಲಿ ನಡೆದಿದೆ.

ಜೈಲರ್ ನಿರ್ಲಕ್ಷ್ಯದಿಂದ ವಿಚಾರಣಾಧೀನ ಕೈದಿ ಪರಾರಿ: ಶಿರಸಿ ಪೊಲೀಸರಿಂದ ಕೈದಿಗಾಗಿ ಶೋಧ
ವಿಚಾರಣಾಧೀನ ಕೈದಿ
Follow us on

ಕಾರವಾರ: ಜೈಲರ್ ನಿರ್ಲಕ್ಷ್ಯದಿಂದ ವಿಚಾರಣಾಧೀನ ಕೈದಿ (Prisoner) ಪರಾರಿಯಾಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಾರಾಗೃಹದಲ್ಲಿ ನಡೆದಿದೆ. ಯಲ್ಲಾಪುರದ ಪ್ರಕಾಶ್ ಸಿದ್ದಿ ಕಾರಾಗೃಹದಿಂದ ಪರಾರಿಯಾಗಿರುವ ವಿಚಾರಣಾಧೀನ ಕೈದಿ. ದರೋಡೆ ಪ್ರಕರಣದಲ್ಲಿ ಪ್ರಕಾಶ್‌ ಸಿದ್ದಿ ಜೈಲುಪಾಲಾಗಿದ್ದ. ವಿಚಾರಣೆ ನಡೆಯುತ್ತಿದ್ರೂ ಜೈಲರ್ ಮಂಜು ಜೈಲಿನಿಂದ ಹೊರಕ್ಕೆ ಕಳಿಸಿದ್ದರು. ಜೈಲರ್ ಮಂಜು ನಿರ್ಲಕ್ಷ್ಯದಿಂದ ಕೈದಿ ಪರಾರಿಯಾಗಿದ್ದಾನೆ. ನಾಪತ್ತೆಯಾಗಿರುವ ಕೈದಿಗಾಗಿ ಶಿರಸಿ ಪೊಲೀಸರಿಂದ ಶೋಧ ನಡೆಯುತ್ತಿದ್ದು, ಶಿರಸಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಪೆರೋಲ್ ಮೇಲೆ ಜೈಲಿನಿಂದ ಆಚೆ ಬಂದಿದ್ದ ಕೈದಿ ನಾಪತ್ತೆ

ಮೈಸೂರು: ಪೆರೋಲ್ ಮೇಲೆ ಹೋಗಿದ್ದ ಕೈದಿ ತಲೆ ಮರೆಸಿಕೊಂಡಿರುವ ಹಿನ್ನೆಲೆ ಅಪರಾಧಿ ಪತ್ತೆಗೆ ಅಥವಾ ಈತನ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ನಗದು ಬಹುಮಾನ ನೀಡುವುದಾಗಿ ಮೈಸೂರು ಪೊಲೀಸ್ ಕಮಿಷನರ್​​ ರಮೇಶ್ ಬಾನೋತ್​ ಘೋಷಣೆ ಮಾಡಿದ್ದಾರೆ. ಸೋಮ ಅಲಿಯಾಸ್ ಕೋತಿ ಸೋಮ ಪರಾರಿಯಾದ ಅಪರಾಧಿ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಮಂಡ್ಯ 3ನೇ ಎಫ್.ಟಿ.ಸಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಇದನ್ನೂ ಓದಿ: Bengaluru News: ರೀಲ್ಸ್​​​ನಲ್ಲಿ ಪರಿಚಯವಾದವನ ಜೊತೆ ಪತ್ನಿ ಹೋಗಿದ್ದಾಳೆಂದು ಪತಿ ದೂರು

ಮೈಸೂರು ಕೇಂದ್ರ ಕಾರಾಗೃಹದಲ್ಲಿ ಸಜಾಬಂಧಿಯಾಗಿದ್ದ ಸೋಮ, 30 ದಿನಗಳ ಫೆರೋಲ್ ರಜೆ ಮೇಲೆ ತೆರಳಿದ್ದು, 2009ರ ನ.1ರಂದು ವಾಪಸ್ ಕೇಂದ್ರ​ ಕಾರಾಗೃಹಕ್ಕೆ ಶರಣಾಗಬೇಕಿತ್ತು. ಆದರೆ ಪರಾರಿಯಾದ ದಿನದಿಂದ ಇಲ್ಲಿಯವರೆಗೂ ಕಾರಾಗೃಹಕ್ಕೆ ಶರಣಾಗಿಲ್ಲ. ಹಾಗಾಗಿ ಈತನ ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಲಾಗಿದೆ. ಈ ಸಂಬಂಧ ಮೈಸೂರು ನಗರ ನಬರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಪರಾಧಿಯ ಮಾಹಿತಿ ನೀಡಿದವರಿಗೆ 1 ಲಕ್ಷ ಬಹುಮಾನ

ಬಳ್ಳಾರಿ: ಪೆರೋಲ್​ ರಜೆ ಮೇಲೆ ಹೋಗಿದ್ದ ಅಪರಾಧಿ ಕಾರಾಗೃಹಕ್ಕೆ ಮರಳ ಕಾರಣ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕರಾದ ಲೋಕೇಶ್ ಕುಮಾರ್​ ತಿಳಿಸಿದ್ದಾರೆ. ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ಎಪಿಎಂಸಿ ಹಿಂಭಾಗ 11ನೇ ವಾರ್ಡ್‍ನ ನಿವಾಸಿ ಕೊರಚರ ನಾಗೇಶ ಅಲಿಯಾಸ್ ನಾಗಪ್ಪ (45) ಪರಾರಿಯಾದ ಅಪರಾಧಿ. ಈ ವ್ಯಕ್ತಿ 2020 ಜ. 20ರಂದು 15ದಿನಗಳ ಮೇಲೆ ಪೆರೋಲ್ ರಜೆ ಮೇಲೆ ಹೋಗಿದ್ದು, ಇನ್ನು ಕೇಂದ್ರ ಕಾರಾಗೃಹಕ್ಕೆ ಮರಳಿ ಹಾಜರಾಗಿರುವುದಿಲ್ಲ.

ಇದನ್ನೂ ಓದಿ: ಬೆಂಗಳೂರು: ವಾಂತಿ ಭೇದಿಯಿಂದ ಆಸ್ಪತ್ರೆ ಸೇರಿದ್ದ ಜ್ಯೂನಿಯರ್​ ಡ್ಯಾನ್ಸರ್, ಸಹಕಲಾವಿದೆ ಸಾವು; ವೈದ್ಯರ ವಿರುದ್ಧ ಕುಟುಂಬಸ್ಥರ ಗಂಭೀರ ಆರೋಪ

ನಾಗೇಶ ಅಲಿಯಾಸ್ ನಾಗಪ್ಪನ ಚಹರೆ ಗುರುತು: 5.6ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಕೋಲುಮುಖ ಹಾಗೂ ಕಪ್ಪು-ಬಿಳಿ ಮಿಶ್ರಿತ ಗುಂಗುರು ಕೂದಲು ಹೊಂದಿರುತ್ತಾನೆ. ಪರಾರಿಯಲ್ಲಿರುವ ವ್ಯಕ್ತಿಯ ಮಾಹಿತಿ ದೊರೆತಲ್ಲಿ ಬಳ್ಳಾರಿ ಪೊಲೀಸ್ ಅಧೀಕ್ಷಕರ ದೂ. 08392-258400, ಮೊ.9480803001, ನಗರ-ಉಪವಿಭಾಗ ಪೊಲೀಸ್ ಉಪಾಧೀಕ್ಷಕರ ಮೊ. 9480803020, 9480803000. ಅಥವಾ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100, ಸಿರುಗುಪ್ಪ ಉಪವಿಭಾಗ ಪೊಲೀಸ್ ಉಪಾಧೀಕ್ಷಕರ ಮೊ.9480803021ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಕಾಡು ಔಡಲ ಬೀಜ ತಿಂದು 9 ಶಾಲಾ ಮಕ್ಕಳು ಅಸ್ವಸ್ಥ

ಹಾವೇರಿ: ಕಾಡು ಔಡಲ ಬೀಜ ತಿಂದು 9 ಶಾಲಾ ಮಕ್ಕಳು ಅಸ್ವಸ್ಥಗೊಂಡಿರುವಂತಹ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ನೀರಲಕಟ್ಟಿ ತಾಂಡಾದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ನೀರಲಕಟ್ಟಿ ತಾಂಡಾದ ಸರ್ಕಾರಿ ಶಾಲೆಯ ಬಳಿ ಸಿಕ್ಕ ಕಾಡು ಔಡಲ ಬೀಜ ತಿಂದು ಈ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದೆ. ಮಕ್ಕಳಿಗೆ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡ ಹಿನ್ನೆಲೆ ಅಸ್ವಸ್ಥಗೊಂಡ ಮಕ್ಕಳನ್ನ ಶಿಗ್ಗಾಂವಿ ತಾಲ್ಲೂಕು ಆಸ್ಪತ್ರೆ ದಾಖಲು ಮಾಡಲಾಗಿದೆ. ಸದ್ಯ ಎಲ್ಲಾ ಮಕ್ಕಳು ಪ್ರಾಣಾಪಯಾದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಶಿಗ್ಗಾಂವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.