Bengaluru News: ರೀಲ್ಸ್​​​ನಲ್ಲಿ ಪರಿಚಯವಾದವನ ಜೊತೆ ಪತ್ನಿ ಹೋಗಿದ್ದಾಳೆಂದು ಪತಿ ದೂರು

ಪತ್ನಿ ರೀಲ್ಸ್​​ನಲ್ಲಿ ಪರಿಚಯವಾದವನ ಜೊತೆ ಓಡಿ ಹೋಗಿದ್ದಾಳೆಂದು ಪತಿ ಯಶವಂತಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Bengaluru News: ರೀಲ್ಸ್​​​ನಲ್ಲಿ ಪರಿಚಯವಾದವನ ಜೊತೆ ಪತ್ನಿ ಹೋಗಿದ್ದಾಳೆಂದು ಪತಿ ದೂರು
ಸಾಂಧರ್ಬಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Feb 04, 2023 | 12:48 PM

ಬೆಂಗಳೂರು: ಇತ್ತೀಚಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾಮಾಜಿಕ ಜಾಲತಾಣದ ಮೂಲಕ ಮೋಸ ಮಾಡುವವರ ಬಲೆಗೆ ಬಿದ್ದು, ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಈ ಪ್ರಕರಣದಲ್ಲಿ ಪತ್ನಿ ರೀಲ್ಸ್​​ನಲ್ಲಿ ಪರಿಚಯವಾದವನ ಜೊತೆ ಓಡಿ ಹೋಗಿದ್ದಾಳೆಂದು ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಪತ್ನಿ ನಮಿತಾ ಕುಮಾರಿ ಮೊಬೈಲ್​ ಆ್ಯಪ್​ನಲ್ಲಿ ಹಾಡುವ ಹವ್ಯಾಸ ಬೆಳೆಸಿಕೊಂಡಿದ್ದಳಂತೆ. ಈ ಆ್ಯಪ್​​ ಮೂಲಕ 6 ತಿಂಗಳ ಹಿಂದೆ ದೆಹಲಿ ಮೂಲದ ದೀಪಕ್ ಮೆಹರಾ ಎಂಬ ವ್ಯಕ್ತಿ ಪರಿಚಯವಾಗಿದ್ದಾನೆ.

ಮುಂದೆ ನಮಿತಾ ಕುಮಾರಿ ದೆಹಲಿ ಮೂಲದ ದೀಪಕ್ ಮೆಹರಾ ಜೊತೆ ವಾಟ್ಸಪ್ ಕಾಲ್​​ ಮಾತನಾಡುತ್ತಿದ್ದಳು ಎಂದು ಪತಿ ಜೋಸೇಫ್ ಆಂಥೋನಿ ಆರೋಪ ಮಾಡಿದ್ದಾನೆ. ಅಲ್ಲದೆ ದೀಪಕ್ ಮೆಹರಾ ದೆಹಲಿಯಿಂದ ಬೆಂಗಳೂರಿಗೆ ಬಂದು ನಮಿತಾಳನ್ನ ಭೇಟಿಯಾಗಿದ್ದನು. ಈತನ ಜೊತಯೇ ಪತ್ನಿ ನಮಿತಾ ಕುಮಾರಿ ಹೋಗಿದ್ದಾಳೆಂದು ಹೋಗಿದ್ದು, ಜೊತೆಗೆ ಇಬ್ಬರ ಮಕ್ಕಳ ಜೊತೆ ಒಬ್ಬ ಮಗನನ್ನೂ ಕರೆದೊಯ್ದಿದ್ದಾಳೆಂದು ಆರೋಪ ಮಾಡಿದ್ದಾರೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಗಂಡನನ್ನ ಬಿಟ್ಟು ಓಡಿ ಬಂದಿದ್ದ ಮಹಿಳೆ ಪ್ರಿಯಕರನ ಜೊತೆ ದುರಂತ ಅಂತ್ಯಕಂಡಳು: ಮಕ್ಕಳು ಅನಾಥ

ಇನ್​​ಸ್ಟಾಗ್ರಾಮ್ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡು ನಗ್ನ ಚಿತ್ರ ಪಡೆದು ಬ್ಲ್ಯಾಕ್​ಮೇಲ್

ಇನ್​​ಸ್ಟಾಗ್ರಾಮ್ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡು, ವಿವಿಧ ಕಾರಣ ಹೇಳಿ ಅವರ ನಗ್ನ ಫೋಟೊಗಳ ಪಡೆದು ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ ಆರೋಪಿಯನ್ನು ಆಗ್ನೆಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ದಿಲ್ಲಿ ಪ್ರಸಾದ್ (26) ಬಂಧಿತ ಆರೋಪಿ. ಆಂಧ್ರ ಮೂಲದ ಆರೋಪಿ ದಿಲ್ಲಿ ಪ್ರಸಾದ್​​ 2018 ರಿಂದ ಬೆಂಗಳೂರಿನಲ್ಲಿ ವಾಸವಿದ್ದನು. ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದನು. ಈತ ಮೊನಿಯ ಮತ್ತು ಮ್ಯಾನೇಜರ್ ಎಂಬ ಎರಡು ನಕಲಿ ಖಾತೆ ಸೃಷ್ಟಿ ಮಾಡಿದ್ದಾನೆ.

ಈ ಖಾತೆಗಳ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡಿದ್ದಾನೆ. ನಂತರ ಯುವತಿಯರೊಂದಿಗೆ ಸಲುಗೆಯಿಂದ ವರ್ತಿಸಿ, ನಂಬಿಕಸ್ತ ಎಂದು ಭರವಸೆ ಮೂಡಿಸುತ್ತಿದ್ದನು. ಬಳಿಕ ಅವರಿಗೆ ವಿವಿಧ ಕಾರಣ ಹೇಳಿ ಅವರ ನಗ್ನ ಫೋಟೊಗಳನ್ನು ಪಡೆದು ಕೊಳ್ಳುತಿದ್ದನು. ಬಳಿಕ ಫೋಟೋಗಳನ್ನು ಬಳಸಿ ಬೆದರಿಸಿ ಬೇರೊಬ್ಬರ ಜೊತೆ ಲೈಂಗಿಕ ಕ್ರಿಯೆ ಮಾಡುವಂತೆ ಒತ್ತಾಯ ಮಾಡುತ್ತಿದ್ದನು.

ಇದನ್ನೂ ಓದಿ: ಕೆಲಸ ಕೊಡಿಸ್ತೀವಿ ಅಂತಾ ಕರೆದು ಸುಲಿಗೆ ಮಾಡಿದ್ದ ಗ್ಯಾಂಗ್​ ಬಂಧನ ​

ಈತ ಹೇಳಿದ ವ್ಯಕ್ತಿಗೆ ಭೇಟಿಯಾಗುವಂತೆ ಯುವತಿಯರಿಗೆ ಹೇಳುತ್ತಿದ್ದನು. ಇದರಂತೆ ಓರ್ವ ಯುವತಿ ಬ್ಯ್ಲಾಕ್​ಮೇಲ್​​ಗೆ ಒಳಗಾಗಿ ಮಡಿವಾಳದ ಓಯೋ ರೂಂನಲ್ಲಿ ಲೈಂಗಿಕ ಕ್ರಿಯೆ ವೇಳೆ ವಿಡಿಯೋ ದೃಶ್ಯವಳಿಗಳನ್ನು ಸೆರೆ ಹಿಡಿದುಕೊಂಡಿದ್ದನು. ವಿಷಯ ತಿಳಿಯುತ್ತಿದ್ದಂತೆ ಆಗ್ನೆಯ ವಿಭಾಗದ ಸಿಇಎನ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ವೇಳೆ ಮತ್ತಷ್ಟು ಕೃತ್ಯದ ಕುರಿತು ಕಕ್ಕಿದ್ದಾನೆ.

ತನಿಖೆ ವೇಳೆ ಮೂರು ಯುವತಿಯ ಜೊತೆ ಈ ರೀತಿ ಕೃತ್ಯ ನಡೆದಿದ್ದಾಗಿ ಹೇಳಿದ್ದಾನೆ. ಜೊತೆಗೆ 10ಕ್ಕೂ ಅಧಿಕ ಮಹಿಳೆಯರ ಫೋಟೊಗಳ ಹೊಂದಿರೊದು ಪತ್ತೆಯಾಗಿದೆ. ಯುವತಿಯರಿಗೆ ಬ್ಯ್ಲಾಕ್​ ಮೇಲ್​ ಮಾಡಿ ಅವರ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದನು. ಅಲ್ಲದೆ ಕೆಲವರಿಂದ ಹಣ ಪಡೆಯುತ್ತಿದ್ದನು. ಈ ಹಿನ್ನೆಲೆ ಮಹಿಳೆಯರು ಸಮಾಜಿಕ ಜಾಲತಾಣ ಬಳಸುವಾಗ ಎಚ್ಚರದಿಂದರಬೇಕೆಂದು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:47 pm, Sat, 4 February 23