ಶ್ರೀ ಕೃಷ್ಣನಂತೆ ಚುನಾವಣಾ ಯುದ್ಧದಲ್ಲಿ ಪಾಲ್ಗೊಳ್ಳಬೇಕಿದೆ. ಅದರಿಂದ ಸುಳ್ಳು, ಸ್ವಾರ್ಥದ, ಪರಿವಾರವಾದದ ರಾಜಕಾರಣ ಕೊನೆಗೊಳಿಸಬೇಕಿದೆ : ಪ್ರಲ್ಹಾದ ಜೋಶಿ ಅಭಿಮತ
Pralhad Joshi: ಜೆಡಿಎಸ್ ಕುಟುಂಬ ರಾಜಕಾರಣವನ್ನು ಟೀಕಿಸಿದ ಪ್ರಲ್ಹಾದ ಜೋಶಿ, ಜೆಡಿಎಸ್ ನಾಯಕರು ಪಂಚರತ್ನ ಯಾತ್ರೆ ಮಾಡುವ ಬದಲು ನವಗ್ರಹ ಯಾತ್ರೆ ಮಾಡಬೇಕು. ಯಾಕೆಂದರೆ ಅವರ ಕುಟುಂಬದ 9 ಜನರೇ ಅವರಿಗೆ ಹೈಕಮಾಂಡ್! ಮತ್ತು ಅವರೇ ಅಧಿಕಾರಕ್ಕಾಗಿ ದುಂಬಾಲು ಬಿದ್ದಿದ್ದಾರೆ ಎಂದು ವ್ಯಂಗ್ಯವಾಡಿದರು.
ಬೆಂಗಳೂರು : ಶ್ರೀ ಕೃಷ್ಣನಂತೆ (Lord krishna) ಈ ಚುನಾವಣೆ ಎಂಬ ಯುದ್ಧದಲ್ಲಿ ಪಾಲ್ಗೊಳ್ಳಬೇಕಿದೆ. ತನ್ಮೂಲಕ ಸುಳ್ಳಿನ, ಸ್ವಾರ್ಥದ, ಪರಿವಾರವಾದದ ರಾಜಕಾರಣವನ್ನು (family politics) ಕೊನೆಗೊಳಿಸಬೇಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು (Pralhad Joshi) ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ನಡೆದ ಭಾರತೀಯ ಜನತಾ ಪಕ್ಷದ ( BJP) ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿರೋಧ ಪಕ್ಷಗಳು ಕೇವಲ ಹುದ್ದೆ ಹಾಗೂ ಅಧಿಕಾರಕ್ಕಾಗಿ ಹಪಹಪಿಸುತ್ತವೆ. ಈ ಸಮಯದಲ್ಲಿ ರಾಜ್ಯದ ಜನರ ಹಿತ ಕಾಪಾಡುವ, ಜನ ಬಯಸುವ ಅಭಿವೃದ್ಧಿ ಕಾರ್ಯಗಳನ್ನು ಪೂರೈಸುವ ಜವಾಬ್ದಾರಿ ಬಿಜೆಪಿಯ ಮೇಲಿದೆ. ನಾವೆಲ್ಲ ಶಕ್ತಿ ಮೀರಿ ಪ್ರಯತ್ನಿಸಿ, ಜನರ ವಿಶ್ವಾಸ ಗೆಲ್ಲಬೇಕಿದೆ ಸಚಿವ ಪ್ರಲ್ಹಾದ ಜೋಶಿ ರವಾನಿಸಿದರು (Karnataka Assembly Elections 2023).
ವಿಜಯ ಸಂಕಲ್ಪ ಯಾತ್ರೆಯ ಮಧ್ಯದಲ್ಲಿ, ಕೇಂದ್ರ ಸರ್ಕಾರದಿಂದ ಅಮೃತದಂತಹ ಬಜೆಟ್ ಮಂಡನೆಯಾದ ಈ ಪೂರಕ ಸಂದರ್ಭದಲ್ಲಿ ಕರ್ನಾಟಕ ಚುನಾವಣೆಗೆ ಸಿದ್ಧವಾಗುತ್ತಿದೆ ಎಂದ ಅವರು ಶ್ರೀ ಕೃಷ್ಣನಂತೆ ಈ ಚುನಾವಣೆ ಎಂಬ ಯುದ್ಧದಲ್ಲಿ ಪಾಲ್ಗೊಳ್ಳಬೇಕಿದೆ. ತನ್ಮೂಲಕ ಸುಳ್ಳಿನ, ಸ್ವಾರ್ಥದ, ಪರಿವಾರವಾದದ ರಾಜಕಾರಣವನ್ನು ಕೊನೆಗೊಳಿಸಬೇಕಿದೆ. ವಿರೋಧ ಪಕ್ಷಗಳು ಕೇವಲ ಹುದ್ದೆ ಹಾಗೂ ಅಧಿಕಾರಕ್ಕಾಗಿ ಹಪಹಪಿಸುತ್ತವೆ. ಈ ಸಮಯದಲ್ಲಿ ರಾಜ್ಯದ ಜನರ ಹಿತ ಕಾಪಾಡುವ, ಅವರು ಬಯಸುವ ಅಭಿವೃದ್ಧಿ ಕಾರ್ಯಗಳನ್ನು ಪೂರೈಸುವ ಜವಾಬ್ದಾರಿ ಬಿಜೆಪಿಯ ಮೇಲಿದೆ. ನಾವೆಲ್ಲ ಶಕ್ತಿ ಮೀರಿ ಪ್ರಯತ್ನಿಸಿ, ಜನರ ವಿಶ್ವಾಸ ಗೆಲ್ಲಬೇಕಿದೆ ಎಂಬ ಸಂದೇಶವನ್ನು ನೀಡಿದರು.
ಇದೇ ವೇಳೆ ಜೆಡಿಎಸ್ ಪಕ್ಷದ ಕುಟುಂಬ ರಾಜಕಾರಣವನ್ನು ಟೀಕಿಸಿದ ಅವರು, ಜೆಡಿಎಸ್ ನಾಯಕರು ಪಂಚರತ್ನ ಯಾತ್ರೆಯನ್ನು ಮಾಡುವ ಬದಲು ನವಗ್ರಹ ಯಾತ್ರೆಯನ್ನು ಮಾಡಬೇಕು. ಯಾಕೆಂದರೆ ಅವರ ಕುಟುಂಬದ ಒಂಬತ್ತು ಜನರೇ ಅವರಿಗೆ ಹೈಕಮಾಂಡ್! ಮತ್ತು ಅವರೇ ಅಧಿಕಾರಕ್ಕಾಗಿ ದುಂಬಾಲು ಬಿದ್ದಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕಟುವಾಗಿ ಟೀಕಿಸಿದ ಸಚಿವ ಪ್ರಲ್ಹಾದ ಜೋಶಿ ಅವರು, ದಲಿತರ ಹೆಸರು ಹೇಳಿಕೊಂಡು ತಮ್ಮದೇ ಪಕ್ಷದ ದಲಿತ ನಾಯಕರಾದ ಪರಮೇಶ್ವರ್ ಅವರ ರಾಜಕೀಯ ಜೀವನವನ್ನು ಮುಗಿಸಲು ಹೊರಟ ಸಿದ್ದರಾಮಯ್ಯ ಮತ್ತು ಡಿಕೆಶಿ ಕೇವಲ ತಮಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕೆಂದು ಹೋರಾಡುತ್ತಿದ್ದಾರೆ ಎಂದರು.
ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಗೋಸ್ಕರ ಅಧಿಕಾರ ಬಯಸುವ ಜೆಡಿಎಸ್ ನವರು ಪ್ರಜಾಪ್ರಭುತ್ವ, ಜನರ ಹಿತದ ಬಗ್ಗೆ ಮಾತಾಡ್ತಾರೆ…! ಇದಕ್ಕಿಂತ ಹಾಸ್ಯಾಸ್ಪದವಾದ ಸಂಗತಿ ರಾಜ್ಯ ರಾಜಕಾರಣದಲ್ಲಿ ಮತ್ತೊಂದಿಲ್ಲ. pic.twitter.com/TsKZmcD9jg
— Pralhad Joshi (@JoshiPralhad) February 4, 2023
ಬಜೆಟ್‌ನಲ್ಲಿ ಕರ್ನಾಟಕಕ್ಕೆ ವಿಶೇಷ ಪ್ರಾಶಸ್ತ್ಯ ನೀಡಿರುವ ಬಗ್ಗೆ ಒತ್ತಿ ಹೇಳಿದ ಜೋಶಿ, ಈ ಬಾರಿಯ ಚುನಾವಣೆಯಲ್ಲಿ ನಾವು 140+ ಸ್ಥಾನದೊಂದಿಗೆ ಸ್ಪಷ್ಟ ಬಹುಮತ ಪಡೆದು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಆತ್ಮವಿಶ್ವಾಸದಿಂದ ನುಡಿದರು.
ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು , ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಸದಾನಂದ ಗೌಡ, ಜಗದೀಶ್ ಶೆಟ್ಟರ್, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಜ್ಯ ಸಹ ಉಸ್ತುವಾರಿಗಳಾದ ಶ್ರೀಮತಿ ಅರುಣಾ ಅವರು ಉಪಸ್ಥಿತರಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:40 pm, Sat, 4 February 23