Bengaluru News: ಕೆಲಸ ಕೊಡಿಸ್ತೀವಿ ಅಂತಾ ಕರೆದು ಸುಲಿಗೆ ಮಾಡಿದ್ದ ಗ್ಯಾಂಗ್​ ಬಂಧನ ​

ಕೆಲಸ ಕೊಡಿಸುತ್ತೇವೆ ಅಂತ ಕರೆದು ಸುಲಿಗೆ ಮಾಡಿದ್ದ ಗ್ಯಾಂಗ್​ನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Bengaluru News: ಕೆಲಸ ಕೊಡಿಸ್ತೀವಿ ಅಂತಾ ಕರೆದು ಸುಲಿಗೆ ಮಾಡಿದ್ದ ಗ್ಯಾಂಗ್​ ಬಂಧನ   ​
ಕೊಡಿಗೆಹಳ್ಳಿ ಪೊಲೀಸ್​​ ಠಾಣೆ
Follow us
TV9 Web
| Updated By: ವಿವೇಕ ಬಿರಾದಾರ

Updated on: Feb 03, 2023 | 12:01 PM

ಬೆಂಗಳೂರು: ಕೆಲಸ ಕೊಡಿಸುತ್ತೇವೆ ಅಂತ ಕರೆದು ಸುಲಿಗೆ ಮಾಡಿದ್ದ ಗ್ಯಾಂಗ್​ನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಮಲ್ಲು ಶಿವಶಂಕರ ರೆಡ್ಡಿ, ಗುಂಜ ಮಂಗರಾವ್, ಶೇಕ್ ಶಹಬಾಜಿ, ಮಹೇಶ್ ಬಂಧಿತ ಆರೋಪಿಗಳು. ಗ್ಯಾಂಗ್ ಸಾಮಾಜಿಕ ಜಾಲತಾಣದ ಮೂಲಕ ಕೆಲಸ ಕೊಡಿಸುತ್ತೇವೆ ಎಂದು ಜಾಹಿರಾತು ನೀಡಿದೆ. ಇದನ್ನು ನಂಬಿದ್ದ ಆಂಧ್ರಪ್ರದೇಶದ ಪ್ರದೀಪ್ ಅಸಾಮ್ವರ್​​ಗೆ ಆರೋಪಿ ಮಲ್ಲು ಶಿವಶಂಕರ್ ರೆಡ್ಡಿ ಫೇಸ್ ಬುಕ್​ ಮುಖಾಂತರ ಪರಿಚಯವಾಗಿದ್ದನು. ನಂತರ ಖಾಸಗಿ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇನೆಂದು ನಂಬಿಸಿ, ಆಂದ್ರದಿಂದ ಬೆಂಗಳೂರಿಗೆ ಬರುವಂತೆ ಆರೋಪಿ ಹೇಳಿದ್ದನು.

ಇದರಂತೆ ಪ್ರದೀಪ್ ಅಸಾಮ್ವರ್ ಜನವರಿ 11 ರಂದು ಬೆಳಗ್ಗೆ 5.30 ಕ್ಕೆ ಹೆಬ್ಬಾಳ ಬಳಿ ಬಂದು ಇಳಿದಿದ್ದನು. ಹೆಬ್ಬಾಳನಲ್ಲಿ ಪ್ರದೀಪ್ ಅಸಾಮ್ವರ್​​ನನ್ನು ಸ್ವಿಫ್ಟ್ ಕಾರಿನಲ್ಲಿ ಬಂದು ನಾಲ್ವರು ಪಿಕ್ ಮಾಡಿಕೊಂಡಿದ್ದಾರೆ. ಈ ವೇಳೆ ಪ್ರದೀಪ್ ಅಸಾಮ್ವರ್ ಕಾರಿನ ಫೋಟೊ ತೆಗೆದುಕೊಂಡಿದ್ದನು. ಪ್ರದೀಪ್​​ನ​ನ್ನು ಕಾರಿನಲ್ಲಿ ಕೂರಿಸಿಕೊಂಡಿದ್ದ ಗ್ಯಾಂಗ್​ ಮ್ಯಾನೆಜರ್ ಭೇಟಿ ಮಾಡಿಸ್ತೇವೆ ಎಂದು ಕರೆದೊಯ್ದಿದ್ದಾರೆ. ಹೀಗೆ ಕಾರಿನಲ್ಲಿ ಹೋಗುವಾಗ ಪ್ರದೀಪ್, ಶಿವಶಂಕರ್ ರೆಡ್ಡಿ ಜೊತೆಗೆ ಬಂದಿದ್ದವರ ಹೆಸರು ಕೇಳಿದ್ದಾನೆ. ಆಗ ಆರೋಪಿ ಶಿವಶಂಕರ್​ ರೆಡ್ಡಿ ಹೆಸರು ಹೇಳದಿದ್ದಾಗ ಆತನಿಗೆ ಅನುಮಾನ ಬಂದಿದೆ.

ಬಳಿಕ ಗ್ಯಾಂಗ್ ಡಾಕ್ಯುಮೆಂಟ್ ಚಾರ್ಜ್ ಎಂದು 30 ಸಾವಿರ ಹಣ ಹಾಕಲು ಪ್ರದೀಪ್​​ಗೆ ಹೇಳಿದೆ. ಗೂಗಲ್​​ ಪೇ ವರ್ಕ್ ಆಗದಿದ್ದಾಗ ಮೊಬೈಲ್ ಕಸಿದು ಪರಿಶೀಲನೆ ಮಾಡಿದ್ದಾರೆ. ಆಗ ಕಾರಿನ ಫೋಟೊ ಲೈವ್ ಲೊಕೇಶನ್ ನೋಡಿ ಪ್ರದೀಪ್​ಗೆ ಥಳಿಸಿದ್ದಾರೆ. ನಂತರ ನಿನಗೆ ಕೆಲಸ ಸಿಕ್ಕಿದೆ ಎಂದು ಸ್ನೇಹಿತರ ಬಳಿ ಹಣ ಹಾಕಿಸಿಕೊ ಎಂದು ಪ್ರದೀಪ್​ಗೆ ಬೆದರಿಸಿದ್ದಾರೆ. ಹೀಗೆ ಆರೋಪಿಗಳು ಒಟ್ಟು 6 ಲಕ್ಷ ಹಣ ಅಕೌಂಟ್ ಮೂಲಕ ಪಾವತಿ ಮಾಡಿಸಿಕೊಂಡಿದೆ. ಅಲ್ಲದೆ ಕ್ರಿಕೆಟ್ ಬೆಟ್ಟಿಂಗ್ ಆ್ಯಪ್​ನಲ್ಲೂ ಹಾಣ ಹಾಕಿಸಿಕೊಂಡಿದ್ದಾರೆ. ನಂತರ ಯಲಹಂಕ ಸಮೀದ ಡೆಕಾತ್ ಲ್ಯಾನ್ ಬಳಿ ಬಿಟ್ಟು ಪರಾರಿಯಾಗಿದ್ದಾರೆ.

ಬಳಿಕ ಪ್ರದೀಪ್ ಘಟನೆ ಸಂಬಂಧ ಕೊಡಿಗೆಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಸಿದ್ದಾರೆ. ಸದ್ಯ 5 ಅಕೌಂಟ್​ನಲ್ಲಿರುವ 5 ಲಕ್ಷ ಹಣ ಫ್ರೀಜ್ ಮಾಡಿಸಲಾಗಿದೆ.

ವಿಚಾರಣೆ ವೇಳೆ ಹೊರಬಂತು ಭಯಾನಕ ವಿಚಾರ

ಕೊಡಿಗೆಹಳ್ಳಿ ಪೊಲೀಸರ ವಿಚಾರಣೆ ವೇಳೆ ಭಯಾನಕ ವಿಚಾರ ಹೊರಬಂದಿದೆ. ಆರೋಪಿ ಮಲ್ಲು ಅಲಿಯಾಸ್​ ಗೋಪಿಚಂದ್ ಕೂಡ ಟೆಕ್ಕಿಯಾಗಿದ್ದಾನೆ. ಮಾನ್ಯತಾ ಟೆಕ್ ಪಾರ್ಕ್​​ನಲ್ಲಿ ಕೆಲಸ ಮಾಡಿಕೊಂಡಿದ್ದನು. ಆಸಾಮಿ ಡೂಪ್ಲಿಕೇಟ್ ದಾಖಲಾತಿ‌ ನೀಡಿ ಕೆಲಸಕ್ಕೆ ಸೇರಿಕೊಂಡಿದ್ದನು. ವಿಷಯ ಗೊತ್ತಾದ ಬಳಿಕ ಆತನನ್ನ ಕೆಲಸದಿಂದ ತೆಗೆದುಹಾಕಲಾಗಿತ್ತು. ಆಗಿನಿಂದ ಕೆಲಸ ಇಲ್ಲದೆ ಖಾಲಿ‌ ಇದ್ದನು.

ಹೀಗಾಗಿ ಫೇಸ್ ಬುಕ್ ನಲ್ಲಿ ಶಿವಶಂಕರ್ ಎನ್ನುವ ಹೆಸರಲ್ಲಿ‌ ನಕಲಿ‌ ಖಾತೆ ತೆರೆದಿದ್ದನು. ನಂತರ ನಮ್ಮಲ್ಲಿ ಕನ್ಸಲ್ಟೆನ್ಸಿ ಕೆಲಸ ಕೊಡಿಸುತ್ತೇವೆ ಎಂದು ಜಾಹಿರಾತು ನೀಡಿದ್ದರು. ಆಸಕ್ತಿ ಇರುವವರು ಸಂಪರ್ಕಿಸಿದಾಗ ಬಲೆ ಹಾಕುತ್ತಿದ್ದನು. ಆರೋಪಿ ಕೇವಲ‌ ಮೆಸೆಂಜರ್​ನಲ್ಲಿ ಮಾತ್ರ ಸಂಪರ್ಕ ಮಾಡುತ್ತಿದ್ದನು. ಕೆಲಸ ಕೊಡಿಸಲು 4-5 ಲಕ್ಷಕ್ಕೆ ಡಿಮ್ಯಾಂಡ್ ಮಾಡುತ್ತಿದ್ದನು. ದುಡ್ಡು ಇದ್ಯೋ‌ ಇಲ್ವೋ ಅನ್ನೋದನ್ನ ತಿಳಿಯಲು ಅಕೌಂಟ್ ಬ್ಯಾಲೆನ್ಸ್ ಸ್ಕ್ರೀನ್ ಶಾಟ್ ಕಳುಹಿಸಿಕೊಳ್ಳುತ್ತಿದ್ದನು.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್