ಹಾಸನ: ತಾಲೂಕಿನ ದೊಡ್ಡಪುರ ಗ್ರಾಮದಲ್ಲಿ ಒಂಟಿ ಮಹಿಳೆಯ ಬರ್ಬರ ಹತ್ಯೆ (Murder) ಆಗಿದೆ. ಹಂತಕರು ಮನೆಯ ಬಳಿಯೇ ಕೊಚ್ಚಿ ಕೊಂದು ಎಸ್ಕೇಪ್ (Escape) ಆಗಿದ್ದಾರೆ. ಗ್ರಾಮದ ಗುರುಪ್ರಸಾದ್ ಪತ್ನಿ ರೇವತಿ(35) ಕೊಲೆಯಾದ ಮಹಿಳೆ. ಮನೆಯಲ್ಲಿ ಪತಿ ಹಾಗು ಮಕ್ಕಳು ಇಲ್ಲದ ವೇಳೆ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಕೊಚ್ಚಿ ಕೊಂದಿರುವ ಶಂಕೆ ಮೂಡಿದೆ. ಮಹಿಳೆ ನಿನ್ನೆ (ಮಾರ್ಚ್ 16) ಸಂಜೆ ಮನೆ ಹೊರಗೆ ಬಟ್ಟೆ ತೊಳೆಯುತ್ತಾ ಕುಳಿತಿದ್ದರು. ಆಗ ಆಕೆಯ ಮೇಲೆ ದಾಳಿ ಮಾಡಿ ಹತ್ಯೆಗೈದಿದ್ದಾರೆ.
ಸ್ಥಳಕ್ಕೆ ಶ್ವಾನದಳ, ಎಸ್ಪಿ ಡಾ.ನಂದಿನಿ ಸೇರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ:
ವಿಜಯಪುರ: ಜಿಲ್ಲೆ ಇಂಡಿ ಪಟ್ಟಣದ ಅಗರಖೇಡ ರಸ್ತೆ ಬಳಿ ಇರುವ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅವಘಡ ಸಂಭವಿಸಿದೆ. ರಸಗೊಬ್ಬರ ಸಂಗ್ರಹ ಮಾಡಿದ್ದ ಅಂಗಡಿ ಬೆಂಕಿಗಾಹುತಿಯಾಗಿದೆ. ರಾಘು ಧನಶೆಟ್ಟಿ ಎಂಬುವರಿಗೆ ಸೇರಿದ ನಂದಿ ಅಗ್ರೊ ಟ್ರೇಡರ್ಸ್ನಲ್ಲಿ ಘಟನೆ ಸಂಭವಿಸಿದೆ. ಬೆಂಕಿಗಾಹುತಿಯಿಂದಾಗಿ ಲಕ್ಷಾಂತರ ಮೌಲ್ಯದ ಗೊಬ್ಬರ ನಾಶವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮನಿಸಿ ಬೆಂಕಿ ನಂದಿಸಿದೆ.
ಇದನ್ನೂ ಓದಿ
ಈ ಥಿಯೇಟರ್ ಜೊತೆ ಅಣ್ಣಾವ್ರ ಕುಟುಂಬಕ್ಕೆ ಇದೆ ವಿಶೇಷ ನಂಟು; ಏನೆಂದು ತಿಳಿಸಿದ ರಾಘಣ್ಣ
ಮನುಷ್ಯ ಸಹಜ ಕಾಯಿಲೆಗಳನ್ನು ಹೊಡೆದೋಡಿಸುವ ಪುರಾತನ, ಆದರೆ ಸಾರ್ವಕಾಲಿಕ ಸರಳ ಸೂತ್ರಗಳು ಇಲ್ಲಿವೆ!