ಮನುಷ್ಯ ಸಹಜ ಕಾಯಿಲೆಗಳನ್ನು ಹೊಡೆದೋಡಿಸುವ ಪುರಾತನ, ಆದರೆ ಸಾರ್ವಕಾಲಿಕ ಸರಳ ಸೂತ್ರಗಳು ಇಲ್ಲಿವೆ!

ಬಿಗುಮಾನವನ್ನು ತೊರೆದು ನಗುವನ್ನು ಹೊರಸೂಸುತ್ತಾ, ಆತ್ಮವಿಶ್ವಾಸದ ಕೆಚ್ಚಿನಿಂದ ಮುನ್ನಡೆದಲ್ಲಿ ಪರಸ್ಪರ ವೈಷಮ್ಯದ, ವಿರೋಧದ ಯಾವುದೇ ಗಾಯವನ್ನೂ ಬೇಗ ವಾಸಿಮಾಡಬಹುದು.

ಮನುಷ್ಯ ಸಹಜ ಕಾಯಿಲೆಗಳನ್ನು ಹೊಡೆದೋಡಿಸುವ ಪುರಾತನ, ಆದರೆ ಸಾರ್ವಕಾಲಿಕ ಸರಳ ಸೂತ್ರಗಳು ಇಲ್ಲಿವೆ!
ಸಾರ್ವಕಾಲಿಕ ಸರಳ ಚಿಕಿತ್ಸೆ: ಕಾಯಿಲೆಯನ್ನು ಓಡಿಸುವ ಪುರಾತನ ಆದರೆ ಸಾರ್ವಕಾಲಿಕ ಸರಳ ಸೂತ್ರಗಳು ಇಲ್ಲಿವೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 17, 2022 | 6:06 AM

ದಿನ ನಿತ್ಯವೂ ಹಠ ತೊಟ್ಟು ಈ ಕೆಳಗಿನ ಭಾವನೆಗಳಿಗೆ ಅಂಕಿತವಾದರೆ ಮನಸ್ಸು ಪ್ರಸನ್ನವಾಗಿಯೇ ಇರುತ್ತದೆ. ಯಾವುದೇ ಟಾನಿಕ್ಕು, ಮಾತ್ರೆಗಿಂತ ಇದು ಹೆಚ್ಚು ಆರೋಗ್ಯಕಾರಿ. ಸದ್ಭಾವನೆಗಳಿಂದ ಆರೋಗ್ಯಕ್ಕೆ ಎಂದಿಗೂ ಕೆಡಕು ಆಗದು. ದಿನನಿತ್ಯವೂ ಮಾಡುವ ಕ್ರಮಬದ್ಧ ಪ್ರಾರ್ಥನೆಯಿಂದ ದೇಹದ ಸರ್ವೋತೋಮುಖ ಏಳಿಗೆ ಸುಲಭ ಸಾಧ್ಯವಾಗಿ ಆಂತರಿಕ ಶಕ್ತಿ, ಚ್ಯೆತನ್ಯ ಹಾಗು ಸ್ಥಿರತೆ ಹೆಚ್ಚುತ್ತದೆ. ತನ್ಮೂಲಕ ಇತರರಲ್ಲೂ ಈ ಹೊಸತನ ಹಾಗೂ ಸ್ಪೂರ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಪುಟಿದೇಳುತ್ತದೆ.

  1. ಜೀವಿಗಳಲ್ಲಿ ಅನುಕಂಪ, ದಯೆ, ಸಹಾನುಭೂತಿಗಳನ್ನು ಬೆಳೆಸಿ, ಉಳಿಸಿಕೊಂಡಲ್ಲಿ ಆಂತರಿಕ ಸುಖಸಂತೋಷಗಳು ಹೆಚ್ಚುತ್ತವೆ ಮಾತ್ರವಲ್ಲ. ಎಲ್ಲ ಜೀರ್ಣ ರಸಗಳ ನಿರಾತಂಕ ಉತ್ಪಾದನೆಯಿಂದ ಸಂಬಂಧಿತ ರೋಗರುಜಿನಗಳು ದೂರ ಆಗುತ್ತವೆ.
  2. ಮಾತು ಕಡಿಮೆ, ಜಾಸ್ತಿ ದುಡಿಮೆ ಎಂಬ ತತ್ತ್ವದ ಅನ್ವಯ ಅನವಶ್ಯಕ ಮಾತುಕತೆ, ಕ್ಷುಲ್ಲಕ ವ್ಯವಹಾರಗಳನ್ನೂ ನಿಲ್ಲಿಸಿ ಕಾರ್ಯೋನ್ಮುಖರಾದಲ್ಲಿ ರೋಗಿಯಾಗಿ ನರಳುತ್ತಾ ಆಸ್ಪತ್ರೆಗೆ ಎಡತಾಕುವ ಪ್ರಮೇಯವೇ ಬಾರದು. ಬಂಗಾರದ ಬದುಕು ಕನ್ನಡಿಯೊಳಗಿನ ಗಂಟಿನಂತೆ ಎಂದೆಂದಿಗೂ ಆಗದು.
  3. ಪರೋಪಕಾರ ಗುಣ, ಉದಾರತೆ, ಉದಾತ್ತ ಮನೋಭಾವ ಹಾಗೂ ಸಹಕಾರ ಮನೋಭಾವವನ್ನು ದೇಹದ ಕಣಕಣದಲ್ಲೂ ತುಂಬಿಕೊಂಡು, ಹೃದಯದ ಮಿಡಿತದೊಂದಿಗೆ ಪ್ರತಿಸ್ಪಂದಿಸುತ್ತಿದ್ದರೆ ಕಳ್ಳತನ, ಕೊಲೆ, ಸುಲಿಗೆ, ಅನ್ಯಾಯ, ಅನಾಚಾರಗಳ ಯಾವ ರೋಗವೂ ಬಂದು ಬಾಧಿಸದು.
  4. ಬಿಗುಮಾನವನ್ನು ತೊರೆದು ನಗುವನ್ನು ಹೊರಸೂಸುತ್ತಾ, ಆತ್ಮವಿಶ್ವಾಸದ ಕೆಚ್ಚಿನಿಂದ ಮುನ್ನಡೆದಲ್ಲಿ ಪರಸ್ಪರ ವೈಷಮ್ಯದ, ವಿರೋಧದ ಯಾವುದೇ ಗಾಯವನ್ನೂ ಬೇಗ ವಾಸಿಮಾಡಬಹುದು.
  5. ತಾಳಿದವ ಬಾಳಿಯಾನು ಎಂಬುದನ್ನು ನೆಚ್ಚಿ ಸಹನೆಯನ್ನು ಹೆಚ್ಚಿಸಿಕೊಂಡು ವರ್ತಿಸಿದಲ್ಲಿ ದೂರದೃಷ್ಟಿಯೊಂದಿಗೆ ಅಂತಃದೃಷ್ಟಿಯೂ ವೃದ್ಧಿಸಿ ಬಾಳು ಬೆಳಗುತ್ತಾ ಹೋದೀತು, ಜೀವನ ಜೇನಾದೀತು.
  6. ಪೂರ್ವಾಪರ ವಿಮರ್ಶೆ ಹಾಗೂ ವಿವೇಕಗಳನ್ನು ನಿಮ್ಮದಾಗಿಸಿಕೊಂಡಲ್ಲಿ ಎಂತಹ ವಿಷಮ ಪರಿಸ್ಥಿತಿ, ಸಂದಿಗ್ಧ ಸನ್ನಿವೇಶದಲ್ಲೂ ಯಶಸ್ಸು ನಿಮ್ಮದಾಗಿಸಿಕೊಳ್ಳಬಹುದು. ಎಂತಹ ವಿಷಮ ಸ್ಥಿತಿಯನ್ನೂ ಸರಿಪಡಿಸುವ ನವಶಕ್ತಿ ಸಂಜೀವಿನಿಯ ರಸಭರಿತ ಟಾನಿಕ್ ಇದಲ್ಲದೆ ಬೇರೆ ಇರದು (ವಾಟ್ಸಪ್​ ಸಂದೇಶ)

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ