Holi 2022: ಕೆಟ್ಟದರ ಮೇಲಿನ ಒಳ್ಳೆತನದ ವಿಜಯವೇ ಹೋಲಿಕಾ ದಹನ, ಇಲ್ಲಿದೆ ಮಹತ್ವ ಶುಭ ಮುಹೂರ್ತ

ಈ ದಿನ ರಾತ್ರಿ ಜನರು ಮರ ಮತ್ತು ಹಸುವಿನ ಸಗಣಿಯಿಂದ ಮಾಡಿದ ಹೋಲಿಕಾ ಪೈರನ್ನು ತಯಾರಿಸಿ ಅದನ್ನು ಸುಟ್ಟು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ.

Holi 2022: ಕೆಟ್ಟದರ ಮೇಲಿನ ಒಳ್ಳೆತನದ ವಿಜಯವೇ ಹೋಲಿಕಾ ದಹನ, ಇಲ್ಲಿದೆ ಮಹತ್ವ ಶುಭ ಮುಹೂರ್ತ
ಹೋಲಿಕಾ ದಹನ
Follow us
TV9 Web
| Updated By: ಆಯೇಷಾ ಬಾನು

Updated on: Mar 17, 2022 | 6:30 AM

ಹೋಳಿ ಹಬ್ಬದ ಆಚರಣೆಗಳು ಹೋಲಿಕಾ ದಹನ ಅಥವಾ ಚೋಟಿ ಹೋಳಿ, ಚಿಕ್ಕ ಹೋಳಿಯಿಂದ ಪ್ರಾರಂಭವಾಗುತ್ತದೆ. ಈ ದಿನವನ್ನು ಹೋಳಿ ಹಬ್ಬದ ಒಂದು ದಿನ ಮುಂಚೆ ಅಂದರೆ ಈ ವರ್ಷ ಮಾರ್ಚ್ 17ರಂದು ಆಚರಿಸಲಾಗುತ್ತೆ. ಇದನ್ನು ಫಾಲ್ಗುಣ ಮಾಸದ ಪೂರ್ಣಿಮಾ ತಿಥಿಯ ಸಂಜೆ ಆಚರಿಸಲಾಗುತ್ತದೆ. ಕೆಟ್ಟದ್ದರ ಮೇಲೆ ಒಳ್ಳೆ ತನದ ವಿಜಯದ ಪ್ರತೀಕವಾಗಿ ಈ ದಿನದಂದು ಜನರು ತಮ್ಮ ನೆರೆ ಹೊರೆಯ, ಸಂಬಂಧಿಕರ ಮನೆಗಳಿಗೆ ಹೋಗಿ ಹಬ್ಬವನ್ನು ಆಚರಿಸುತ್ತಾರೆ. ಈ ದಿನ ರಾತ್ರಿ ಜನರು ಮರ ಮತ್ತು ಹಸುವಿನ ಸಗಣಿಯಿಂದ ಮಾಡಿದ ಹೋಲಿಕಾ ಪೈರನ್ನು ತಯಾರಿಸಿ ಅದನ್ನು ಸುಟ್ಟು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ.

ಹೋಲಿಕಾ ದಹನ ಶುಭ ಮುಹೂರ್ತ ಹೋಳಿಯ ಪೂರ್ಣಿಮಾ ತಿಥಿಯು ಮಾರ್ಚ್ 17 ರ ಗುರುವಾರ ಮಧ್ಯಾಹ್ನ 1:29ರಿಂದ ಆರಂಭವಾಗಿ ಮಾರ್ಚ್ 18ರ ಶುಕ್ರವಾರ ಮಧ್ಯಾಹ್ನ 12:47ಕ್ಕೆ ಮುಕ್ತಾಯಗೊಳ್ಳುತ್ತದೆ. ಭಾದ್ರ ಪುಣಚ: ರಾತ್ರಿ 9:6 ರಿಂದ ರಾತ್ರಿ 10:16 ರವರೆಗೆ (ಇದು ಹೋಲಿಕಾ ದಹನ ಮತ್ತು ಪೂಜೆಗೆ ಶುಭ ಸಮಯವಾಗಿದೆ) ಭಾದ್ರ ಮುಖ ಪ್ರಾರಂಭ: 2022 ರ ಮಾರ್ಚ್‌ 18 ರಂದು ಶುಕ್ರವಾರ 10:16 ರಿಂದ 12:13 ರವರಗೆ

ಕೆಟ್ಟದರ ಮೇಲಿನ ಒಳ್ಳೆತನದ ವಿಜಯವನ್ನು ಸೂಚಿಸುತ್ತದೆ ಹೋಲಿಕಾ ದಹನ ಈ ಸಂಪ್ರದಾಯವು ಶತಮಾನಗಳಿಂದಲೂ ಆಚರಣೆಯಲ್ಲಿದೆ ಮತ್ತು ಸತ್ಯಯುಗದಲ್ಲಿ ನಡೆದ ಘಟನೆಯಿಂದಾಗಿ ಇದು ಹೆಚ್ಚಿನ ಮಹತ್ವ ಪಡೆದಿದೆ. ಹೋಲಿಕಾ ದಹನ ಹಬ್ಬವು ಕೆಟ್ಟದರ ಮೇಲಿನ ಒಳ್ಳೆತನದ ವಿಜಯದ ಸಂಕೇತವಾಗಿದೆ. ಬ್ರಹ್ಮಾಂಡವನ್ನು ಆಳಲು ಬಯಸಿದ ರಾಕ್ಷಸ ರಾಜ ಹಿರಣ್ಯಕಶ್ಯಪುನ ಸಹೋದರಿ ಹೋಲಿಕಾ ಆತನ ಮಗ ಪ್ರಹ್ಲಾದನನ್ನು ಬೆಂಕಿಯಲ್ಲಿ ಸುಡಲು ಪ್ರಯತ್ನಿಸಿರುವುದು ಕೂಡ ಅದೇ ದಿನ ಎಂದು ಹೇಳಲಾಗುತ್ತದೆ. ಆದರೆ ಭಗವಾನ್ ವಿಷ್ಣುವು ಪ್ರಹ್ಲಾದನನ್ನು ರಕ್ಷಿಸಿದನು ಮತ್ತು ಹೋಲಿಕಾವನ್ನು ಬೂದಿ ಮಾಡಿದನು. ಈ ನಿಟ್ಟಿನಲ್ಲಿ, ಈ ದಿನದಂದು ಅಗ್ನಿದೇವನನ್ನು ಪೂಜಿಸಲಾಗುತ್ತದೆ ಮತ್ತು ಧಾನ್ಯಗಳು, ಬಾರ್ಲಿ, ಸಿಹಿತಿಂಡಿಗಳು ಇತ್ಯಾದಿಗಳನ್ನು ಅರ್ಪಿಸಲಾಗುತ್ತದೆ. ಹೀಗಾಗಿ ಹೋಲಿಕಾ ದಹನದ ಭಸ್ಮವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಹೋಲಿಕಾ ದಹನದ ಭಸ್ಮವನ್ನು ಮನೆಗೆ ತಂದು ಅದನ್ನು ದೇವರ ಕೋಣೆ ಅಥವಾ ಪವಿತ್ರ ಸ್ಥಳದಲ್ಲಿ ಇಡುವುದಕ್ಕೆ ವಿಶೇಷ ಮಹತ್ವವಿದೆ. ಹೋಲಿಕಾ ದಹನವನ್ನು ಫಾಲ್ಗುಣ ಮಾಸದ ಹುಣ್ಣಿಮೆಯ (ಪೂರ್ಣಿಮಾ) ಮುನ್ನಾದಿನದಂದು ಆಚರಿಸಲಾಗುತ್ತದೆ. ಮರುದಿನ ಬಣ್ಣಗಳ ಹಬ್ಬ ಹೋಳಿಯನ್ನು ಆಚರಿಸಲಾಗುತ್ತೆ.

ಇದನ್ನೂ ಓದಿ: Shani Trayodashi 2022: ಪ್ರದೋಷ ವ್ರತ ಪಾಲಿಸಿದ ಬಡ ಬ್ರಾಹ್ಮಣ ಮಹಿಳೆಯ ಬಾಳು ಬೆಳಗಿಸಿದ ಭಗವಾನ್ ಶಿವ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್