ಮಂತ್ರವಾದಿಯೊಬ್ಬ ಲಿಂಗ ಬದಲಿಸುವುದಾಗಿ ನಂಬಿಸಿ ಮಹಿಳೆಯನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಘಟನೆಯು ಆರ್ಸಿ ಮಿಷನ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ನಿವಾಸಿ ಪ್ರಿಯಾ (30) ಪುವಾಯನ್ ನಿವಾಸಿ ಪ್ರೀತಿ(24) ಅವರೊಂದಿಗೆ ಸ್ನೇಹ ಬೆಳೆಸಿದ್ದರು. ನಂತರ ಇಬ್ಬರೂ ಸಲಿಂಗ ಸಂಬಂಧ ಹೊಂದಿದ್ದರು ಎಂದು ಎಸ್ಪಿ ತಿಳಿಸಿದ್ದಾರೆ.
ಪ್ರಿಯಾ ಜೊತೆಗಿನ ಸಂಬಂಧ ಬೆಳಕಿಗೆ ಬಂದ ನಂತರ ಪ್ರೀತಿಯನ್ನು ಮದುವೆಯಾಗಲೂ ಯಾವೊಬ್ಬ ಯುವಕನೂ ಮುಂದೆ ಬರುತ್ತಿರಲಿಲ್ಲ. ಹಾಗಾಗಿ ಪ್ರೀತಿ ಹಾಗೂ ತಾಯಿ ಊರ್ಮಿಳಾ ಅವರು ಮೊಹಮ್ಮದಿ ಪ್ರದೇಶದ ನಿವಾಸಿ ತಂತ್ರಿ ರಾಮ್ನಿವಾಸ್ ಅವರನ್ನು ಭೇಟಿಯಾಗಿ ಪ್ರಿಯಾಳನ್ನು ಕೊಲ್ಲಲು ಯೋಜನೆ ರೂಪಿಸಿದ್ದರು.
ಪ್ರಿಯಾ ಪುರುಷನಾಗಲು ಬಯಸಿದ್ದಾಳೆ ಎಂದು ಪ್ರೀತಿ ತಂತ್ರಿಗೆ ತಿಳಿಸಿದ್ದಳು, ಇದರ ಲಾಭ ಪಡೆದ ಪ್ರೀತಿಯ ತಾಯಿ, ಪ್ರಿಯಾಳನ್ನು ಕೊಲ್ಲಲು 1.5 ಲಕ್ಷ ರೂಪಾಯಿ ನೀಡುವುದಾಗಿ ತಂತ್ರಿಗಳಿಗೆ ಭರವಸೆ ನೀಡಿದ್ದರು ಎನ್ನಲಾಗಿದೆ. ಯೋಜನೆಯ ಪ್ರಕಾರ, ಪ್ರೀತಿ ಪ್ರಿಯಾಗೆ ಕರೆ ಮಾಡಿ ತಂತ್ರಿ ನಿನ್ನ ಲಿಂಗವನ್ನು ಬದಲಾಯಿಸುತ್ತಾನೆ ಎಂದು ಹೇಳಿದ್ದಳು.
ಮತ್ತಷ್ಟು ಓದಿ: Davanagere News: ಕಾಲೇಜು ಸೇರಿದ ನಾಲ್ಕೇ ದಿನಕ್ಕೆ ಕಾಂಪೌಂಡ್ ಮೇಲಿಂದ ಬಿದ್ದು ವಿದ್ಯಾರ್ಥಿನಿ ಸಾವು
ಪ್ರಿಯಾ ಏಪ್ರಿಲ್ 13 ರಂದು ಮನೆಯಿಂದ ಹೊರಟು ನಾಪತ್ತೆಯಾಗಿದ್ದರು. ಆಕೆಯ ಕುಟುಂಬದವರು ಏಪ್ರಿಲ್ 18 ರಂದು ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ. ಪ್ರಿಯಾ ಪ್ರೀತಿ ಮತ್ತು ರಾಮನಿವಾಸ್ ಜೊತೆ ಮಾತನಾಡಿರುವುದು ಗೊತ್ತಾಗಿತ್ತು ಎಂದು ಎಸ್ಪಿ ತಿಳಿಸಿದ್ದಾರೆ.
ಮಾಹಿತಿ ಆಧರಿಸಿ ಪೊಲೀಸರು ರಾಮನಿವಾಸ್‌ನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ. ಪುರುಷನನ್ನಾಗಿ ಪರಿವರ್ತಿಸುವ ನೆಪದಲ್ಲಿ ಪ್ರಿಯಾಳನ್ನು ಕಾಡಿಗೆ ಕರೆದೊಯ್ದು ನದಿಯ ದಡದಲ್ಲಿ ಕಣ್ಣು ಮುಚ್ಚಿ ಮಲಗುವಂತೆ ಹೇಳಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಇದೇ ವೇಳೆ ಚಾಕುವಿನಿಂದ ಪ್ರಿಯಾಳ ಕುತ್ತಿಗೆ ಸೀಳಿದ್ದಾನೆ. ಆರೋಪಿ ತಂತ್ರಿ ಮತ್ತು ಪ್ರಿಯಾಳ ಸ್ನೇಹಿತೆ ಪ್ರೀತಿಯನ್ನು ಮಂಗಳವಾರ ಬಂಧಿಸಲಾಗಿದ್ದು, ಇಬ್ಬರನ್ನೂ ಜೈಲಿಗೆ ಕಳುಹಿಸಲಾಗಿದೆ ಎಂದು ಎಸ್ಪಿ ಆನಂದ್ ತಿಳಿಸಿದ್ದಾರೆ. ಹತ್ಯೆಗೆ ಬಳಸಿದ ಸುತ್ತಿಗೆಯನ್ನು ಕೂಡ ಪೊಲೀಸರು ತಂತ್ರಿ ಮನೆಯಿಂದ ವಶಪಡಿಸಿಕೊಂಡಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ