AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Telangana Crime: ಹೈದರಾಬಾದ್​ನಲ್ಲಿ ಇಬ್ಬರು ತೃತೀಯಲಿಂಗಿಗಳ ಹತ್ಯೆ

ಹೈದರಾಬಾದ್‌ನ ಓಲ್ಡ್ ಸಿಟಿ ಪ್ರದೇಶದ ತಪ್ಪಚಬುತ್ರ ಪೊಲೀಸ್ ಠಾಣೆ ವ್ಯಾಪ್ತಿಯ ಡೈಬಾಗ್‌ನಲ್ಲಿ ಬುಧವಾರ ಮುಂಜಾನೆ ಇಬ್ಬರು ತೃತೀಯಲಿಂಗಿಗಳನ್ನು ಹತ್ಯೆ ಮಾಡಲಾಗಿದೆ

Telangana Crime: ಹೈದರಾಬಾದ್​ನಲ್ಲಿ ಇಬ್ಬರು ತೃತೀಯಲಿಂಗಿಗಳ ಹತ್ಯೆ
ಕ್ರೈಂ
ನಯನಾ ರಾಜೀವ್
|

Updated on:Jun 21, 2023 | 11:23 AM

Share

ಹೈದರಾಬಾದ್‌ನ ಓಲ್ಡ್ ಸಿಟಿ ಪ್ರದೇಶದ ತಪ್ಪಚಬುತ್ರ ಪೊಲೀಸ್ ಠಾಣೆ ವ್ಯಾಪ್ತಿಯ ಡೈಬಾಗ್‌ನಲ್ಲಿ ಬುಧವಾರ ಮುಂಜಾನೆ ಇಬ್ಬರು ತೃತೀಯಲಿಂಗಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಟಿವಿ9 ತೆಲುಗು ವರದಿ ಮಾಡಿದೆ.  ಮೃತರನ್ನು ಯೂಸುಫ್ ಅಲಿಯಾಸ್ ಡಾಲಿ ಮತ್ತು ರಿಯಾಜ್ ಅಲಿಯಾಸ್ ಸೋಫಿಯಾ ಎಂದು ಗುರುತಿಸಲಾಗಿದೆ. ಪ್ರತ್ಯೇಕ ಸ್ಥಳದಲ್ಲಿ ತಮ್ಮ ಆಕ್ಟಿವಾದಲ್ಲಿ  ತಪ್ಪಚಬುತ್ರಾಕ್ಕೆ  ಅವರ ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ದಾಳಿಕೋರರು ಅವರನ್ನು ದಾರಿ ತಪ್ಪಿಸಿ ದೊಡ್ಡ ಕಲ್ಲುಗಳು ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪರಿಚಿತ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಈ ತೃತೀಯಲಿಂಗಿಗಳು ತಮ್ಮ ಬೈಕ್‌ನಲ್ಲಿ ತಪ್ಪಚಬುತ್ರದಲ್ಲಿರುವ ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ಈ ಕೊಲೆ ನಡೆದಿದೆ.

Davanagere News: ಕಾಲೇಜು ಸೇರಿದ ನಾಲ್ಕೇ ದಿನಕ್ಕೆ ಕಾಂಪೌಂಡ್ ಮೇಲಿಂದ ಬಿದ್ದು ವಿದ್ಯಾರ್ಥಿನಿ ಸಾವು

ಸುದ್ದಿ ತಿಳಿದ ಪೊಲೀಸರು ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದುವರೆಗೆ ಯಾರ ವಿರುದ್ಧವೂ ಕೊಲೆಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳು ನಮ್ಮ ಬಳಿ ಇಲ್ಲ. ನಿಖರವಾದ ಕಾರಣವನ್ನು ಕಂಡುಹಿಡಿಯಲು ಎಲ್ಲಾ ಕೋನಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಹೈದರಾಬಾದ್‌ನ ನೈಋತ್ಯ ಡಿಸಿಪಿ ಕಿರಣ್ ಖರೆ ತಿಳಿಸಿದ್ದಾರೆ.

ಮೇ ತಿಂಗಳಲ್ಲಿ ಪಹಾಡಿಶರೀಫ್ ಎಂಬಲ್ಲಿ ತೃತೀಯಲಿಂಗಿಯೊಬ್ಬಳ ಮನೆಯಲ್ಲಿ ಅಜರ್ ಎಂಬ ಆಟೋ ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇಬ್ಬರು ತೃತೀಯಲಿಂಗಿಗಳ ಕೊಲೆ ಪ್ರಕರಣಕ್ಕೂ ಇದಕ್ಕೂ ಸಂಬಂಧವಿರಬಹುದು ಎಂದು ಅಂದಾಜಿಸಲಾಗಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:23 am, Wed, 21 June 23

Follow Us
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು