ಮೇಕೆಗಳು ಹೊಲವನ್ನು ಹಾಳು ಮಾಡಿದ್ದಕ್ಕಾಗಿ ವ್ಯಕ್ತಿಯೊಬ್ಬ ಪಕ್ಕದ ಮನೆಯವನ ಗುಪ್ತಾಂಗವನ್ನು ಕಚ್ಚಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಷಹಜಹಾನ್ಪುರದ ರೋಜಾದಲ್ಲಿ 28 ವರ್ಷದ ವ್ಯಕ್ತಿಯೊಬ್ಬ ಪಕ್ಕದ ಮನೆಯವನ ಖಾಸಗಿ ಅಂಗವನ್ನು ಕಚ್ಚಿದ್ದಾನೆ. ರಾತ್ರಿ ಹೊತ್ತು ಪಕ್ಕದ ಮನೆಯವರ ಮೇಕೆಗಳು ಈತನ ಹೊಲದಲ್ಲಿ ಓಡಾಡಿ ಬೆಳೆಯನ್ನು ನಾಶಪಡಿಸಿದ್ದವು. ಗಾಯಗೊಂಡಿರುವ ಕುರಿ ಮಾಲೀಕನಿಗೆ ನಾಲ್ಕು ಹೊಲಿಗೆಗಳನ್ನು ಹಾಕಲಾಗಿದೆ. ರೋಜಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅವರನ್ನು ಶಹಜಹಾನ್ಪುರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರ ಸ್ಥಿತಿ ಸ್ಥಿರವಾಗಿದೆ.
ಮೇಕೆಗಳ ವಿಚಾರವಾಗಿ ಗಂಗಾರಾಮ್ ಸಿಂಗ್ ಜತೆಗೆ ಪದೇ ಪದೇ ಜಗಳವಾಗುತ್ತಿತ್ತು, ಈ ಬಾರಿ ಕೋಪ ತಾರಕಕ್ಕೇರಿತ್ತು, ಕೋಪದಲ್ಲಿ ತನ್ನನ್ನು ಕೆಳಗೆ ಒದ್ದು ಬೀಳಿಸಿ ಗುಪ್ತಾಂಗವನ್ನು ಕಚ್ಚಿದ್ದಾನೆ ಎಂದಿದ್ದಾರೆ. ಪೊಲೀಸರು ಮೊದಲು ಅವರನ್ನು ಸಂಪರ್ಕಿಸಿದಾಗ ಎಫ್ಐಆರ್ ದಾಖಲಿಸಲು ಒಪ್ಪಿಗೆ ನೀಡಿರಲಿಲ್ಲ, ಬಳಿಕ ಒಪ್ಪಿಗೆ ಸೂಚಿಸಿದ್ದಾರೆ.
ಮತ್ತಷ್ಟು ಓದಿ: ಕೇರಳ ಬಸ್ನಲ್ಲಿ ನಟಿಗೆ ಗುಪ್ತಾಂಗ ತೋರಿಸಿ ಜೈಲು ಪಾಲಾದ ಯುವಕ ಜಾಮೀನಿನ ಮೇಲೆ ಬಿಡುಗಡೆ, ಹೂವಿನ ಮಾಲೆ ಹಾಕಿ ಸ್ವಾಗತ
ವೈದ್ಯರ ಪ್ರಕಾರ ಮೇಲ್ಮೈ ಗಾಯಗಳಷ್ಟೇ ಆಗಿದೆ, ಆಂತರಿಕ ನಾಳಗಳಿಗೆ ಯಾವುದೇ ಹಾನಿಯಾಗಿಲ್ಲ, ಕಾಲಾನಂತರದಲ್ಲಿ ರೋಗಿ ಗುಣಮುಖರಾಗುತ್ತಾರೆ ಎಂದು ತಿಳಿಸಿದ್ದಾರೆ. ಗಂಗಾರಾಮ್ಗೆ ಕಠಿಣ ಶಿಕ್ಷೆಯಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2017ರಲ್ಲಿ ಕೂಡ ಇಂಥದ್ದೇ ಘಟನೆ ನಡೆದಿತ್ತು, ಶಹಜಹಾನ್ ಪುರದಲ್ಲಿ ವ್ಯಕ್ತಿಯೊಬ್ಬ ಗೋಡೆಯೊಂದನ್ನು ನಿರ್ಮಿಸುತ್ತಿದ್ದ ಅದಕ್ಕೆ ಪಕ್ಕದ ಮನೆಯಲ್ಲೇ ವಾಸವಿದ್ದ ದಂಪತಿ ವಿರೋಧಿಸಿದ್ದರು, ಮಾತಿಗೆ ಮಾತು ಬೆಳದು ಕೊನೆಗೆ ಮಹಿಳೆ ಪಕ್ಕದ ಮನೆಯ ವ್ಯಕ್ತಿಯ ಗುಪ್ತಾಂಗವನ್ನು ಕಚ್ಚಿದ್ದ ನಾಚಿಕೆಗೇಡಿನ ಘಟನೆ ನಡೆದಿತ್ತು.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ