AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಥುರಾ: ಯಮುನಾ ಎಕ್ಸ್‌ಪ್ರೆಸ್‌ವೇ ಬಳಿ ಸೂಟ್‌ಕೇಸ್‌ನಲ್ಲಿ ಯುವತಿಯ ಶವ ಪತ್ತೆ

ವಯಸ್ಸು ಅಂದಾಜು 22 ವರ್ಷ. ಈ ಕೊಲೆ ಬೇರೆ ಕಡೆ ನಡೆದಿದ್ದು ನಂತರ ಮೃತದೇಹವನ್ನು ತಂದು ಇಲ್ಲಿ ಬಿಸಾಡಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಯುವತಿಯ ಗುರುತು ಪತ್ತೆಯಾಗಿಲ್ಲ.

ಮಥುರಾ: ಯಮುನಾ ಎಕ್ಸ್‌ಪ್ರೆಸ್‌ವೇ ಬಳಿ ಸೂಟ್‌ಕೇಸ್‌ನಲ್ಲಿ ಯುವತಿಯ ಶವ ಪತ್ತೆ
ಯಮುನಾ ಎಕ್ಸ್ ಪ್ರೆಸ್ ವೇ ನಲ್ಲಿ ಪತ್ತೆಯಾದ ಶವImage Credit source: dainik bhaskar
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Nov 18, 2022 | 7:12 PM

Share

ಉತ್ತರ ಪ್ರದೇಶದ (Uttar Pradesh) ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ(Yamuna Expressway ) ಶುಕ್ರವಾರ ಬೆಳಗ್ಗೆ ಸೂಟ್‌ಕೇಸ್‌ನಲ್ಲಿ ಯುವತಿಯ ಶವ ಪತ್ತೆಯಾಗಿದೆ. ಎದೆಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ದೇಹದ ಮೇಲೆ ಹಲವು ಗಾಯದ ಗುರುತುಗಳಿವೆ ಎಂದು ದೈನಿಕ್ ಭಾಸ್ಕರ್ ಪತ್ರಿಕೆ ವರದಿ ಮಾಡಿದೆ. ಹತ್ಯೆಯಾಗುವ ಮೊದಲು, ಆಕೆ ಪಾರಾಗಲು ಪ್ರಯತ್ನಿಸಿದಳು ಎಂದು ತೋರುತ್ತದೆ. ವಯಸ್ಸು ಅಂದಾಜು 22 ವರ್ಷಗಳು. ಈ ಕೊಲೆ ಬೇರೆ ಕಡೆ ನಡೆದಿದ್ದು ನಂತರ ಮೃತದೇಹವನ್ನು ತಂದು ಇಲ್ಲಿ ಬಿಸಾಡಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಯುವತಿಯ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕಾಗಮಿಸಿದ ಪೊಲೀಸರು ವಿಚಾರಣೆ ಬಳಿಕ ವಿಧಿವಿಜ್ಞಾನ ತಂಡವನ್ನು ಕರೆಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.  ಎಕ್ಸ್‌ಪ್ರೆಸ್‌ವೇಯಲ್ಲಿ ರಾಯ್ ಕಟ್ ಸರ್ವಿಸ್ ರಸ್ತೆಯಲ್ಲಿ ಮಧ್ಯಾಹ್ನ, ಕೆಲವು ಕಾರ್ಮಿಕರು ಪೊದೆಗಳಲ್ಲಿ ಸೂಟ್‌ಕೇಸ್ ಬಿದ್ದಿರುವುದನ್ನು ನೋಡಿದರು. ಹೊಸ ಸೂಟ್‌ಕೇಸ್ ನೋಡಿದ ಕಾರ್ಮಿಕರು ಅದು ಕಾರಿನ ಟ್ರಂಕ್‌ನಿಂದ ಬಿದ್ದಿರಬೇಕು ಎಂದು ಭಾವಿಸಿದ್ದಾರೆ. ಆದರೆ, ಹತ್ತಿರ ಹೋದಾಗ ಸೂಟ್‌ಕೇಸ್‌ನಿಂದ ರಕ್ತ ಸೋರುತ್ತಿರುವುದು ಕಂಡಿತು. ರಕ್ತ ಕಂಡೊಡನೆ ಅಲ್ಲಿಂದ ಹಾದು ಹೋಗುತ್ತಿದ್ದ ಇತರೆ ವಾಹನಗಳೂ ನಿಂತವು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕಾಗಮಿಸಿದ ಪೊಲೀಸರು ಸೂಟ್‌ಕೇಸ್‌ ತೆರೆದಾಗ ಅದರಲ್ಲಿ ಯುವತಿಯ ಮೃತದೇಹವಿತ್ತು. ಕೈಕಾಲುಗಳನ್ನು ವಿರೂಪಗೊಳಿಸಿದ ನಂತರ ಶವವನ್ನು ಮೊದಲು ಪಾಲಿಥಿನ್‌ನಲ್ಲಿ ಇರಿಸಿ ನಂತರ ಸೂಟ್‌ಕೇಸ್‌ನಲ್ಲಿ ಇರಿಸಲಾಗಿತ್ತು.

ಪೊಲೀಸರು ಮೃತದೇಹದ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಯುವತಿ ಕಪ್ಪು ಟೀ ಶರ್ಟ್ ಮತ್ತು ಹಾಫ್ ಪ್ಯಾಂಟ್ ಧರಿಸಿದ್ದಳು. ಪೊಲೀಸರ ಪ್ರಕಾರ ಬಾಲಕಿಯ ಎತ್ತರ ಸುಮಾರು 5 ಅಡಿ 2 ಇಂಚು. ಗೋಧಿ ಮೈ ಬಣ್ಣ, ಕಪ್ಪು ಮತ್ತು ಉದ್ದ ಕೂದಲು ಇದೆ,. ಬೂದು ಬಣ್ಣದ ಟಿ-ಶರ್ಟ್ ಧರಿಸಿದ್ದು ಅದರ ಮೇಲೆ ಲೇಡಿ ಡೇಸ್ ಎಂದು ಬರೆಯಲಾಗಿದೆ. ಯುವತಿ ನೀಲಿ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದುಎಡಗೈಯಲ್ಲಿ ದಾರವಿದೆ. ಕಾಲಿಗೆ ಉಗುರಿನಲ್ಲಿ ಹಸಿರು ನೇಲ್ ಪೇಂಟ್ ಇದೆ.

ಬಾಲಕಿಯ ಎದೆಗೆ ಗುಂಡು ತಗುಲಿದೆ ಎಂದು ಹೇಳಲಾಗುತ್ತಿದೆ. ಗುರುತು ನೋಡಿದರೆ ಅತ್ಯಂತ ಸಮೀಪದಿಂದ ಗುಂಡು ಹಾರಿಸಲಾಗಿದೆ ಎಂದು ತೋರುತ್ತದೆ. ದೇಹದ ಹಲವೆಡೆ ಗಾಯದ ಗುರುತುಗಳಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Published On - 6:50 pm, Fri, 18 November 22