ಮಹಿಳಾ ಸಹೋದ್ಯೋಗಿಯನ್ನು ಹತ್ಯೆ ಮಾಡಿದ್ದ ಪೊಲೀಸ್ ಕಾನ್ಸ್ಟೆಬಲ್ 2 ವರ್ಷಗಳ ಬಳಿಕ ಸಿಕ್ಕಿಬಿದ್ದಿದ್ದಾರೆ. ಎರಡು ವರ್ಷಗಳ ಕಾಲ ಹತ್ಯೆಯನ್ನು ಮುಚ್ಚಿಡಲು ಪೊಲೀಸರು ಹಾಗೂ ಆಕೆಯ ಪೋಷಕರ ಸುತ್ತಿನ ಬೃಹತ್ ಸುಳ್ಳಿನ ಜಾಲವನ್ನೇ ಹೆಣೆದಿದ್ದ. ಎರಡು ವರ್ಷಗಳ ಕಾಲ ತಮ್ಮ ಮಗಳು ಜೀವಂತವಾಗಿದ್ದಾಳೆ ಎಂದೇ ಪೋಷಕರು ನಂಬಿದ್ದರು. ಇದೀಗ ದೆಹಲಿ ಪೊಲೀಸರು ಪ್ರಕರಣವನ್ನು ಭೇದಿಸಿದ್ದು ಕಾನ್ಸ್ಟೆಬಲ್ನನ್ನು ಬಂಧಿಸಲಾಗಿದೆ.
ಘಟನೆ ಏನು?
ಸುರೇಂದ್ರ ರಾಣಾ(42) ದೆಹಲಿ ಪೊಲೀಸ್ ಕಾನ್ಸ್ಟೆಬಲ್ ಆಗಿದ್ದು, ಆತ ವಿವಾಹಿತ ಕೂಡ. ಮಹಿಳಾ ಕಾನ್ಸ್ಟೆಬಲ್ ಮೋನಾಳನ್ನು ಪ್ರೀತಿಸುತ್ತಿದ್ದರು. ಆದರೆ ಆಕೆ ನಿರಾಕರಿಸಿದಾಗ ಹತ್ಯೆ ಮಾಡಿದ್ದಾನೆ. ರಾಣಾ ಸೋದರಳಿಯ ರವಿನ್ ಹಾಗೂ ರಾಜ್ಪಾಲ್ ಸಹಾಯದಿಂದ ಆಕೆಯ ದೇಹವನ್ನು ವಿಲೇವಾರಿ ಮಾಡಿದ್ದ.
ಮೃತ ಮೋನಾ 2014ರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು, ಇಬ್ಬರನ್ನೂ ಕಂಟ್ರೋಲ್ ರೂಂಗೆ ನಿಯೋಜಿಸಲಾಗಿತ್ತು. ಅಲ್ಲಿ ಪರಸ್ಪರ ಪರಿಚಯವಾಯಿತು. ಅದರ ನಡುವೆ ಮೋನಾ ಸಬ್ ಇನ್ಸ್ಟೆಕ್ಟರ್ ಆಗಿ ಉತ್ತರ ಪ್ರದೇಶದಲ್ಲಿ ಪೋಸ್ಟಿಂಗ್ ಆಗಿತ್ತು. ಇಲ್ಲಿ ಕೆಲಸವನ್ನು ಬಿಟ್ಟು ಯುಪಿಎಸ್ಇಗೆ ತಯಾರಿ ಆರಂಭಿಸಿದ್ದರು. ಕಾನ್ಸ್ಟೆಬಲ್ ಸುರೇಂದ್ರ ರಾಣಾ ಆಕೆ ಕೆಲಸ ಬಿಟ್ಟಿದ್ದರೂ ಅವರ ಮೇಲೆ ಕಣ್ಣಿಟ್ಟಿದ್ದ. ಈ ಕುರಿತು ಆಕೆ ಹಲವು ಬಾರಿ ಜಗಳ ಆಡಿದ್ದಳು, 2021ರ ಸೆಪ್ಟೆಂಬರ್ 8 ರಂದು ಕೂಡ ಜಗಳವಾಗಿತ್ತು. ಸುರೇಂದ್ರ ಮೋನಾಳನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿ ದೇಹವನ್ನು ಚರಡಂಡಿಗೆ ಎಸೆದಿದ್ದ, ದೇಹದ ಮೇಲೆ ಕಲ್ಲುಗಳನ್ನು ಹಾಕಿದ್ದ.
ಮತ್ತಷ್ಟು ಓದಿ: 854 ಕೋಟಿ ರೂ. ವಂಚನೆ ಪ್ರಕರಣ ಭೇದಿಸಿದ ಸಿಸಿಬಿ: ಆರೋಪಿಗಳು ಜನರಿಗೆ ವಂಚಿಸಿದ್ದು ಹೇಗೆ? ಇಲ್ಲಿದೆ ಸೈಬರ್ ಕಹಾನಿ
ನಂತರ ಮೋನಾಳ ಮನೆಯವರಿಗೆ ಕರೆ ಮಾಡಿ ಮೋನಾ ಅರವಿಂದ್ ಎಂಬುವವನ ಜತೆ ಓಡಿ ಹೋಗಿದ್ದಾಳೆ ಎಂದು ನಂಬಿಸಿದ್ದ, ಆಕೆಯನ್ನು ಹುಡುಕುತ್ತಿದ್ದಂತೆ ನಟಿಸುತ್ತಿದ್ದ. ಮೋನಾ ಜೀವಂತವಾಗಿದ್ದಾಳೆ ಎಂದು ಬಿಂಬಿಸಲು ಕೊರೊನಾವೈರಸ್ ವಿರುದ್ಧದ ಲಸಿಕೆಯ ಸುಳ್ಳು ಪ್ರಮಾಣಪತ್ರವನ್ನು ಕೂಡ ಸೃಷ್ಟಿಸಿದ್ದ. ಬ್ಯಾಂಕ್ ಖಾತೆಯಿಂದ ವಹಿವಾಟು ನಡೆಸುತ್ತಿದ್ದ. ಅರವಿಂದ್ ಮೋನಾ ಇಬ್ಬರೂ ಗುರುಗ್ರಾಮದಲ್ಲಿದ್ದಾರೆ ಮದುವೆಯಾಗಿದ್ದಾರೆ ಎಂದು ನಂಬಿಸಿದ್ದ, ಆತನ ಸೋದರಳಿಯನೇ ಅರವಿಂದ್ ಎಂದು ಪರಿಚಯ ಮಾಡಿಕೊಂಡಿದ್ದ. ಆಕೆಯ ಬಳಿ ಮಾತನಾಡಬೇಕು ಎಂದಾಗಲೆಲ್ಲಾ ಆಕೆ ಮಾತನಾಡುವ ಸ್ಥಿತಿಯಲ್ಲಿಲ್ಲ ಎನ್ನುತ್ತಿದ್ದ.
ಆರೋಪಿ ಮೋನಾಳ ಹಲವು ಧ್ವನಿ ಮುದ್ರಿತ ಎಡಿಟೆಡ್ ಆಡಿಯೋಗಳನ್ನು ಕುಟುಂಬಕ್ಕೆ ಕಳುಹಿಸುತ್ತಿದ್ದ, ಅದರಲ್ಲಿ ಒಂದು ವಿಡಿಯೋದಲ್ಲಿ ತನ್ನ ತಾಯಿ ತನ್ನ ಮೇಲೆ ಕೋಪಗೊಂಡಿದ್ದಾಳೆ ಎಂದು ತಿಳಿದು ಮನೆಗೆ ಹೋಗುತ್ತಿಲ್ಲ ಎಂದಿದ್ದಳು. ಆದರೆ ಆಕೆಗೆ ತಾಯಿಯೇ ಇಲ್ಲ.
ಬಳಿಕ ಇದೇ ಸುಳಿವು ಇಟ್ಟುಕೊಂಡು ರಾಬಿನ್ ಮಾತನಾಡುತ್ತಿದ್ದ ಸಂಖ್ಯೆಯನ್ನು ಪತ್ತೆಹಚ್ಚಿದ್ದಾರೆ. ಬಳಿಕ ಆರೋಪಿ ಬಳಿಗೆ ತಲುಪಿದ್ದಾರೆ, ಪೊಲೀಸರು ಚರಂಡಿಯಿಂದ ಅಸ್ಥಿಪಂಜರಗಳನ್ನು ವಶಪಡಿಸಿಕೊಂಡಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ