ಉಡುಪಿ: ಹಳೆಯ ದ್ವೇಷ; ಅಪರಿಚಿತ ವ್ಯಕ್ತಿಯಿಂದ ಯುವಕನಿಗೆ ಚಾಕು ಇರಿತ
ಹಳೆಯ ದ್ವೇಷ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿಯಿಂದ ಯುವಕನಿಗೆ ಚಾಕು ಇರಿದಿರುವಂತಹ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಚಿಕ್ಕನ್ ಸಾಲ್ನ ಅಂಚೆ ಕಚೇರಿ ಬಳಿ ನಡೆದಿದೆ. ರಾಘವೇಂದ್ರ ಎಂಬುವವರಿಗೆ ಕಾಲು, ಹೃದಯ ಭಾಗಕ್ಕೆ ಚೂರಿ ಇರಿದು ಕಾರಿನಲ್ಲಿ ಪರಾರಿ ಆಗಿದ್ದಾನೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಉಡುಪಿ, ಅಕ್ಟೋಬರ್ 02: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿಯಿಂದ ಯುವಕನಿಗೆ ಚಾಕು (stabbed) ಇರಿದಿರುವಂತಹ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನ ಚಿಕ್ಕನ್ ಸಾಲ್ನ ಅಂಚೆ ಕಚೇರಿ ಬಳಿ ನಡೆದಿದೆ. ರಾಘವೇಂದ್ರ ಎಂಬುವವರಿಗೆ ಕಾಲು, ಹೃದಯ ಭಾಗಕ್ಕೆ ಚೂರಿ ಇರಿದು ಕಾರಿನಲ್ಲಿ ಪರಾರಿ ಆಗಿದ್ದಾನೆ. ಗಾಯಾಳು ರಾಘವೇಂದ್ರಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಬೆಳ್ಳಿಯಪ್ಪ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಹಾಡಹಗಲೇ ಚಾಕು ತೋರಿಸಿ ಖದೀಮರ ಗ್ಯಾಂಗ್ನಿಂದ ದರೋಡೆ
ಆನೇಕಲ್: ಹಾಡಹಗಲೇ ಮೆಡಿಕಲ್ ಶಾಪ್ ಬಳಿ ಯುವಕರಿಗೆ ಚಾಕು ತೋರಿಸಿ ಹಣ ದೋಚಿರುವಂತಹ ಘಟನೆ ನಿನ್ನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ ಮರಸೂರಿನಲ್ಲಿ ನಡೆದಿದೆ. ಡೈಲಿ ಫೈನಾನ್ಸ್ ಕಲೆಕ್ಷನ್ ಮಾಡೋ ಯುವಕರನ್ನೇ ಟಾರ್ಗೆಟ್ ಮಾಡಿ, ಚಾಕು ತೋರಿಸಿ ಹಣ ದೋಚಿ ಎಸ್ಕೇಪ್ ಆಗಿದ್ದಾರೆ. ಹೊಸೂರಿನ ಶ್ರೀರಾಮ್ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಶಿವಲಿಂಗ ಹಾಗೂ ಚರಣ್ ಅತ್ತಿಬೆಲೆ, ಚಂದಾಪುರ ಮಾರ್ಗವಾಗಿ ಡೈಲಿ ಫೈನಾನ್ಸ್ ಕಲೆಕ್ಷನ್ ಮಾಡಿಕೊಂಡು ಮರಸೂರಿನ ಎಸ್.ಎಲ್.ಎನ್ ಮೆಡಿಕಲ್ ಶಾಪ್ ಬಳಿ ಬಂದಿದ್ದಾರೆ.
ಇದನ್ನೂ ಓದಿ: ಹುಟ್ಟುಹಬ್ಬ ಆಚರಣೆ ವೇಳೆ ಹೀಲಿಯಂ ಬಲೂನ್ ಸ್ಪೋಟ: ಓರ್ವ ವ್ಯಕ್ತಿ ಹಾಗೂ ನಾಲ್ವರು ಮಕ್ಕಳಿಗೆ ಗಾಯ
ಮೆಡಿಕಲ್ ಶಾಪ್ ನವರ ಬಳಿ ಫೈನಾನ್ಸ್ ಕಲೆಕ್ಷನ್ ಮಾಡಿ ಹಣವನ್ನ ಜೇಬಿನಲ್ಲಿ ಇಟ್ಟುಕೊಳ್ಳುವಷ್ಟರಲ್ಲಿ ಬೈಕ್ ನಲ್ಲಿ ಬಂದ ಮೂವರು ಚಾಕು ತೋರಿಸಿ ಅವರ ಬಳಿ ಇದ್ದ ಐವತ್ತು ಸಾವಿರಕ್ಕೂ ಅಧಿಕ ಹಣವನ್ನ ಕಸಿದು ಸಿನಿಮೀಯ ರೀತಿಯಲ್ಲಿ ಖದೀಮರು ಬೈಕ್ನಲ್ಲಿ ಎಸ್ಕೇಪ್ ಆಗಿದ್ದಾರೆ. ಈವೊಂದು ದರೋಡೆಕೋರರ ಕೈಚಳಕದ ದೃಶ್ಯ ಮೆಡಿಕಲ್ ಶಾಪ್ನ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.
ಭೀಕರ ರಸ್ತೆ ಅಪಘಾತ: ಹೊತ್ತಿ ಉರಿದ ಕಾರು
ಮಂಡ್ಯ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಅಪಘಾತದಲ್ಲಿ ಒಬ್ಬ ಸ್ಥಳದಲ್ಲಿ ಸಾವು, ನಾಲ್ವರಿಗೆ ಗಾಯವಾಗಿ ಅಪಘಾತದ ನಂತರ ಕಾರು ಹೊತ್ತು ಉರಿದಿರುವ ಘಟನೆ ಇತ್ತೀಚೆಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗ್ರಾಮದ ಬಳಿ ನಡೆದಿತ್ತು. ಆನೇಕಲ್ ಮೂಲದ ಕಿಶೋರ್ ಬಾಬು(47) ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಗಾಯಾಳುಗಳನ್ನ ಮೈಸೂರು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.
ಇದನ್ನೂ ಓದಿ: ಜೆಡಿಎಸ್ ಸಭೆಯಲ್ಲಿ ಕಳ್ಳನ ಕೈಚಳ: 40 ಸಾವಿರ ರೂ. ಎಗರಿಸಿದವನಿಗೆ ಭರ್ಜರಿ ಗೂಸಾ
ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ಘಟನೆ ಸಂಭವಿಸಿದ್ದು, ಕಾರಿನಲ್ಲಿದ್ದವರನ್ನ ಪೊಲೀಸರು ಹಾಗು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.