ಹುಟ್ಟುಹಬ್ಬ ಆಚರಣೆ ವೇಳೆ ಹೀಲಿಯಂ ಬಲೂನ್ ಸ್ಪೋಟ: ಓರ್ವ ವ್ಯಕ್ತಿ ಹಾಗೂ ನಾಲ್ವರು ಮಕ್ಕಳಿಗೆ ಗಾಯ

ಹುಟ್ಟುಹಬ್ಬದ ಆಚರಣೆ ವೇಳೆ ಹೀಲಿಯಂ ಬಲೂನ್ ವಿದ್ಯುತ್ ತಂತಿಗೆ ತಗುಲಿ ಸ್ಪೋಟಗೊಂಡು ಬೆಂಕಿ ಕಾಣಿಸಿಕೊಂಡಿದ್ದು, ಓರ್ವ ವ್ಯಕ್ತಿ ಹಾಗೂ ನಾಲ್ವರು ಮಕ್ಕಳಿಗೆ ಗಾಯಗಳಾಗಿರುವಂತಹ ಘಟನೆ ನಿನ್ನೆ ರಾತ್ರಿ‌ ಕಾಡುಗೋಡಿ ಠಾಣಾ ವ್ಯಾಪ್ತಿಯ ಬೆಲ್ತೂರಿನಲ್ಲಿ ನಡೆದಿದೆ. ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಹುಟ್ಟುಹಬ್ಬ ಆಚರಣೆ ವೇಳೆ ಹೀಲಿಯಂ ಬಲೂನ್ ಸ್ಪೋಟ: ಓರ್ವ ವ್ಯಕ್ತಿ ಹಾಗೂ ನಾಲ್ವರು ಮಕ್ಕಳಿಗೆ ಗಾಯ
ಪ್ರಾತಿನಿಧಿಕ ಚಿತ್ರ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Oct 01, 2023 | 7:54 PM

ಬೆಂಗಳೂರು, ಅಕ್ಟೋಬರ್​ 01: ಹೀಲಿಯಂ ಬಲೂನ್ (helium balloon) ವಿದ್ಯುತ್ ತಂತಿಗೆ ತಗುಲಿ ಸ್ಪೋಟಗೊಂಡು ಬೆಂಕಿ ಕಾಣಿಸಿಕೊಂಡಿದ್ದು, ಓರ್ವ ವ್ಯಕ್ತಿ ಹಾಗೂ ನಾಲ್ವರು ಮಕ್ಕಳಿಗೆ ಗಾಯಗಳಾಗಿರುವಂತಹ ಘಟನೆ ನಿನ್ನೆ ರಾತ್ರಿ‌ ಕಾಡುಗೋಡಿ ಠಾಣಾ ವ್ಯಾಪ್ತಿಯ ಬೆಲ್ತೂರಿನಲ್ಲಿ ನಡೆದಿದೆ. ಹುಟ್ಟುಹಬ್ಬದ ಆಚರಣೆ ವೇಳೆ ಭಾರಿ ಅವಘಡ ಸಂಭವಿಸಿದೆ. ವಿಜಯ್ ಆದಿತ್ಯ ಕುಮಾರ್ (44), ಧ್ಯಾನ್ ಚಂದ, ಇಷಾನ್, ಸಂಜಯ್, ಸೊಹಿಲ್ ಗಾಯಾಳು ಮಕ್ಕಳು. ಸದ್ಯ ಇವರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಎಚ್​ಎಎಲ್​ನಲ್ಲಿ ಉದ್ಯೋಗಿಯಾಗಿರುವ ವಿಜಯ್ ಆದಿತ್ಯ, ನಿನ್ನೆ ತನ್ನ ಒಂದು ವರ್ಷದ ಮಗನ ಬರ್ತಡೇ ಆಚರಣೆ ಮಾಡುತಿದ್ದರು. ಈ ವೇಳೆ ಮನೆಯ ಅಕ್ಕಪಕ್ಕದ ಮನೆ ಮಕ್ಕಳನ್ನು ಕರೆದಿದ್ದರು. ಈ ವೇಳೆ ಹೀಲಿಯಂ ಬಲೂನ್ ಸ್ಪೋಟದಿಂದ ಬರ್ತಡೆಗೆ ಬಂದ ಮಕ್ಕಳಿಗೆ ಬೆಂಕಿ ತಗುಲಿದೆ.

ಡಿಸಿಪಿ ಸಂಜೀವ್ ಪಾಟೀಲ್ ಹೇಳಿದ್ದಿಷ್ಟು

ಘಟನೆ ಕುರಿತಾಗಿ ವೈಟ್ ಫೀಲ್ಡ್ ಡಿಸಿಪಿ ಸಂಜೀವ್ ಪಾಟೀಲ್ ಹೇಳಿಕೆ ನೀಡಿದ್ದು, ನಿನ್ನೆ ಬೆಲ್ತೂರಿನಲ್ಲಿ ಬಾಲಕಿಯೊಬ್ಬಳ ಹುಟ್ಟು ಹಬ್ಬ ಆಚರಿಸಲಾಗುತಿತ್ತು. ಹಾಗಾಗಿ ಬಲೂನ್​ಗಳನ್ನ ಬಳಸಲಾಗಿತ್ತು. ಆ ಗ್ಯಾಸ್ ಬಲೂನ್​ಗಳನ್ನ ಮೆಟ್ಟಲುಗಳ ಮೇಲೆ ತೆಗೆದುಕೊಂಡು ಹೊಗುತಿದ್ದರು. ಈ ಸಮಯದಲ್ಲಿ ಬಲೂನ್ ಮನೆ ಮುಂದೆ ಇದ್ದ ವಿದ್ಯುತ್ ತಂತಿಗೆ ತಾಗಿದೆ. ಆಗ ಬೆಂಕಿ ತಗುಲಿ ಬಲೂನ್​ಗಳು ಸ್ಪೋಟಗೊಂಡಿದೆ ಎಂದು ತಿಳಿಸಿದ್ದಾರೆ.

ಭೀಕರ ರಸ್ತೆ ಅಪಘಾತ: ಹೊತ್ತಿ ಉರಿದ ಕಾರು

ಮಂಡ್ಯ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಅಪಘಾತದಲ್ಲಿ ಒಬ್ಬ ಸ್ಥಳದಲ್ಲಿ ಸಾವು, ನಾಲ್ವರಿಗೆ ಗಾಯವಾಗಿ ಅಪಘಾತದ ನಂತರ ಕಾರು ಹೊತ್ತು ಉರಿದಿರುವ ಘಟನೆ ಇತ್ತೀಚೆಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗ್ರಾಮದ ಬಳಿ ನಡೆದಿತ್ತು. ಆನೇಕಲ್​ ಮೂಲದ ಕಿಶೋರ್ ಬಾಬು(47) ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಗಾಯಾಳುಗಳನ್ನ ಮೈಸೂರು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.

ಇದನ್ನೂ ಓದಿ: ಜೆಡಿಎಸ್ ಸಭೆಯಲ್ಲಿ ಕಳ್ಳನ ಕೈಚಳ: 40 ಸಾವಿರ ರೂ. ಎಗರಿಸಿದವನಿಗೆ ಭರ್ಜರಿ ಗೂಸಾ

ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ಘಟನೆ ಸಂಭವಿಸಿದ್ದು, ಕಾರಿನಲ್ಲಿದ್ದವರನ್ನ ಪೊಲೀಸರು ಹಾಗು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶಾರ್ಟ್ ಸರ್ಕ್ಯೂಟ್​: ಅಪಾರ ಪ್ರಮಾಣದ ಕಬ್ಬು ಬೆಂಕಿಗೆ ಅಹುತಿ

ಕೊಪ್ಪಳ: ಜಿಲ್ಲೆಯ ಕುಣಿಕೇರಿ ಗ್ರಾಮದ ರೈತನ ಜಮೀನಿನಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಅಪಾರ ಪ್ರಮಾಣದ ಕಬ್ಬು ಸುಟ್ಟಿದ್ದು, ಬರಗಾಲದಲ್ಲೂ ಕಷ್ಟಪಟ್ಟು ಬೆಳೆದ ರೈತ ಕಣ್ಣೀರಿಡುವಂತ್ತಾಗಿದೆ. ಜಿಲ್ಲೆಯ ಕುಣಿಕೇರಿಯ ರೈತ ಬಸವರಾಜ ಸಬರದ ಎನ್ನುವವರು 3 ಎಕರೆ ಜಮೀನಿನಲ್ಲಿ ಬೆಳೆದ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಕಬ್ಬು ಬೆಂಕಿಗೆ ಅಹುತಿಯಾಗಿದೆ.

ಜಮೀನಿನಲ್ಲಿದ್ದ ಹೈಟೆನ್ಷನ್ ವೈರ್ ನ ಶಾರ್ಟ್ ಸರ್ಕ್ಯೂಟ್​ನಿಂದ ಈ ಅವಘಡ ಜರುಗಿದ್ದು, ಕಬ್ಬಿನ ಬೆಳೆಗೆ ಬೆಂಕಿ ಆವರಿಸಿಕೊಂಡಿದೆ. ಇದರಿಂದ ಜಮೀನ ಮಾಲೀಕ ಹಾಗೂ ಕೂಲಿಕಾರರು ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ನಂತರ ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕೆಲಸ‌ ಮಾಡಿದ್ದಾರೆ. ಆದರೆ ಲಕ್ಷಾಂತರ ಬೆಲೆ ಬಾಳುವ ಕಬ್ಬು ಬೆಂಕಿಗೆ ಆಹುತಿಯಾಗಿದ್ದು, ಪರಿಹಾರಕ್ಕೆ ಮನವಿ‌ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:06 pm, Sun, 1 October 23

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್