ದೊಡ್ಡ ದೊಡ್ಡ ಗಣಪತಿ ಮೂರ್ತಿಗಳು, ರಸ್ತೆ ತುಂಬೆಲ್ಲಾ ಜನಸಾಗರ. ಮಹಿಳೆಯರು ,ಮುದುಕಿಯರು, ಲಲನೆಯರು, ಮೈ ಚಳಿ ಬಿಟ್ಟು ಒಂದು ಸ್ಟೆಪ್ ಹಾಕಬೇಕು ಎಂದು ಡಿಜೆ ಸದ್ದಿಗೆ ಕುಣಿಯುತ್ತಿದ್ದು, ಅಷ್ಟೆ ಅಲ್ಲ ಶಾಸಕರ ಹೆಂಡತಿ ಹಾಗೂ ಮಗಳಿಂದಲೂ ಸಖತ್ ಸ್ಟೇಪ್.
1 / 6
ಈ ದೃಶ್ಯಗಳು ನೋಡುದ್ರೆ, ಸಾಮಾನ್ಯವಾಗಿ ಇದು ಬಹುಶಃ ಮುಬೈನ ಲಾಲ್‌ಬಾಗ್ ಗಣೇಶೋತ್ಸವ ಇರಬೇಕೆಂದು. ಆದ್ರೆ, ಇದು ಖಂಡಿತ ಅದಲ್ಲ, ಇದು ನಮ್ಮ ಬೆಂಗಳೂರಿನ ಬಾಗಲಗುಂಟೆಯ ಸಾಮೂಹಿಕ ಗಣೇಶೋತ್ಸವದ ದೃಶ್ಯಾವಳಿಗಳು.
2 / 6
ಹೌದು, ಬಾಗಲಗುಂಟೆಯ MEI ಬಡಾವಣೆಯ ಮೈದಾನದಲ್ಲಿ ಕಳೆದ ಐದು ದಿನದಿಂದ ಅದ್ದೂರಿ ಸಾಮೂಹಿಕ ಗಣೇಶೋತ್ಸವ ನಡೆದಿದ್ದು, ಇಂದು ವಿಸರ್ಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
3 / 6
ವಿಸರ್ಜನೆಗೂ ಮುನ್ನಾ 15 ಕೆಜಿ ಲಡ್ಡು ನಾಲ್ಕು ಲಕ್ಷಕ್ಕೆ ಹರಾಜಾಯಿತು. ಮೆರವಣಿಗೆಯಲ್ಲಿ ಪಂಜಾಬ್, ಮುಂಬೈ, ಕೇರಳ ರಾಜ್ಯಗಳ ಸಾಂಸ್ಕ್ರತಿಕ ಕಲಾತಂಡಗಳು ಗಮಸೆಳೆದವು.
4 / 6
ಅಲ್ಲದೆ ದಾಸರಹಳ್ಳಿ ಶಾಸಕ ಎಸ್‌ಮುನಿರಾಜು ಪತ್ನಿ ಸುಜಾತ ಹಾಗೂ ಮಗಳು ರೇಷ್ಮಾ ಡಿಜೆ ಸದ್ದಿಗೆ ಹೆಜ್ಜೆ ಹಾಕಿದ್ದಾರೆ. ಬಳಿಕ ನಗರದ ವಿವಿಧ ಪ್ರಮುಖ ಬೀದಿಗಳಲ್ಲಿ ಸಾಗಿದ ಗಣೇಶೋತ್ಸವದ ಮೆರವಣಿಗೆ ಕೊನೆಗೆ ಚೊಕ್ಕಸಂದ್ರ ಕೆರೆಯಲ್ಲಿ ವಿಸರ್ಜನೆ ಮಾಡುವ ಮುಖಾಂತರ ಅಂತ್ಯವಾಯಿತು.
5 / 6
ಒಟ್ಟಾರೆ ದಾಸರಹಳ್ಳಿ ಸಾಮೂಹಿಕ ಗಣೇಶೋತ್ಸವ ಸಂಪನ್ನವಾಗಿದ್ದು, ಸಾವಿರಾರು ಭಕ್ತರು ಗಣೇಶೋತ್ಸವದಲ್ಲಿ ಭಾಗಿಯಾಗಿ ಪುನೀತರಾಗಿದ್ದಾರೆ. ಇದ್ದ ಅದ್ದೂರಿ ಗಣೇಶೋತ್ಸದಲ್ಲಿ ಜನರು ಈ ವಾರದ ವೀಕೆಂಡ್ ಅನ್ನು ಎಂಜಾಯ್ ಮಾಡುತ್ತಾ ಮುಗಿಸಿದ್ದಾರೆ.