ರಾಯಚೂರು: ಡಿಜೆ ಸೌಂಡಿಗೆ 19 ದಿನದ ಹಸುಗೂಸು ಸಾವನ್ನಪ್ಪಿತೇ? ವೈದ್ಯರು ಹೇಳುವುದೇನು? ಇಲ್ಲಿದೆ ವಿವರ

ಇದೀಗ ಗಣೇಶ ವಿಸರ್ಜನೆ ವೇಳೆ ಬಳಸಿದ್ದ ಡಿಜೆ ಶಬ್ದದಿಂದ ಮಲಗಿದ್ದಲ್ಲೇ 19 ದಿನದ ಮಗು ಸಾವನ್ನಪ್ಪಿರುವ ಶಂಕೆ ಉಂಟಾಗಿದೆ. ರಾಯಚೂರಿನ ಮಡ್ಡಿಪೇಟೆಯಲ್ಲಿ ಸೆಪ್ಟೆಂಬರ್ 27ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅತಿಯಾದ ಡಿಜೆ ಸೌಂಡ್​ನಿಂದ ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ರಾಯಚೂರು: ಡಿಜೆ ಸೌಂಡಿಗೆ 19 ದಿನದ ಹಸುಗೂಸು ಸಾವನ್ನಪ್ಪಿತೇ? ವೈದ್ಯರು ಹೇಳುವುದೇನು? ಇಲ್ಲಿದೆ ವಿವರ
ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ವೇಳೆ ಡಿಜೆ ಬಳಕೆ
Follow us
ಭೀಮೇಶ್​​ ಪೂಜಾರ್
| Updated By: ಗಂಗಾಧರ​ ಬ. ಸಾಬೋಜಿ

Updated on:Oct 01, 2023 | 4:28 PM

ರಾಯಚೂರು, ಅಕ್ಟೋಬರ್​ 01: ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುವಾಗ ಮಹಿಳೆ ಕುಸಿದುಬಿದ್ದು ಮೃತಪಟ್ಟಿದ್ದರು. ಆ ಘಟನೆಯ ಕೂಡ ವಿಡಿಯೋ ವೈರಲ್​ ಆಗಿತ್ತು. ಇದೀಗ ಗಣೇಶ ವಿಸರ್ಜನೆ ವೇಳೆ ಬಳಸಿದ್ದ ಡಿಜೆ ಶಬ್ದ (DJ sound) ದಿಂದ ಮಲಗಿದ್ದಲ್ಲೇ 19 ದಿನದ ಮಗು ಸಾವನ್ನಪ್ಪಿರುವ ಶಂಕೆ ಉಂಟಾಗಿದೆ. ರಾಯಚೂರಿನ ಮಡ್ಡಿಪೇಟೆಯಲ್ಲಿ ಸೆಪ್ಟೆಂಬರ್ 27ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುರೇಶ್ ಬಾಬು, ಸುಮತಿ ದಂಪತಿಯ ಹೆಣ್ಣು ಮಗು ಮೃತಪಟ್ಟಿದ್ದು, ಅತಿಯಾದ ಡಿಜೆ ಸೌಂಡ್​ನಿಂದ ಮೃತಪಟ್ಟಿದೆ ಎಂದು ಆರೋಪ ಮಾಡಿದ್ದಾರೆ.

ಡಿಜೆ ಸೌಂಡ್​ ಜೊತೆ ಗಣೇಶ ಮೂರ್ತಿಗಳನ್ನು ಸಾಮೂಹಿಕ ವಿಸರ್ಜನೆ ಮಾಡಲಾಗುತ್ತದೆ. ಕಳೆದ 19 ದಿನಗಳ ಹಿಂದೆ ಜನಿಸಿದ್ದ ಮಗು ಆರೋಗ್ಯ ಸ್ಥಿತಿ ಸ್ಥಿರವಾಗಿತ್ತು. ಸೆ.27ರ ರಾತ್ರಿ ಮಗುವಿಗೆ ಹಾಲುಣಿಸಿ ತಾಯಿ ಸುಮತಿ ಮಲಗಿಸಿದ್ದಾರೆ. ಡಿಜೆ ಸೌಂಡ್​ನಿಂದ ಹೃದಯದ ಸಮಸ್ಯೆಯಾಗಿ ಮೃತಪಟ್ಟಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಕರಾಳ ಭಾನುವಾರ: ಕರ್ನಾಟಕದ ವಿವಿಧೆಡೆ ಸಾಲು-ಸಾಲು ಅಪಘಾತ, 8 ಜನ ದುರ್ಮರಣ

ಮೃತ ಮಗುವಿನ ಅಜ್ಜ ಜಿಟಿ ರೆಡ್ಡಿ ವೃತ್ತಿಯಲ್ಲಿ ವಕೀಲರಾಗಿದ್ದು ನಗರದ ಮಡ್ಡಿಪೇಟೆಯಲ್ಲಿ ವಾಸವಾಗಿದ್ದಾರೆ. ಇವರು ತಮ್ಮ ಮಗಳ ಸುಮತಿಯನ್ನ ಹೆರಿಗೆಗೆ ಕರೆತಂದಿದ್ದರು. ಕಳೆದ 19 ದಿನಗಳ ಹಿಂದಷ್ಟೆ ಹೆಣ್ಣುಮಗು ಜನಿಸಿತ್ತು. ಮನೆಗೆ ಮಹಾಲಕ್ಷ್ಮೀ ಬಂದ್ಲು ಅಂತ ರೆಡ್ಡಿ ಅವರ ಇಡೀ ಕುಟುಂಬ ಸಂತಸದಲ್ಲಿತ್ತು. ಆದರೆ ಇದೇ ಸೆಪ್ಟೆಂಬರ್ 27 ರ ರಾತ್ರಿ ಸಾಮೂಹಿಕ ಗಣೇಶ ವಿಸರ್ಜನೆ ವೇಳೆಯ ಡಿಜೆಗಳ ಕರ್ಕಶ ಶಬ್ಧಕ್ಕೆ 19 ದಿನಗಳ ಹಸುಗೂಸು ಮೃತಪಟ್ಟಿದೆ. ಇದಕ್ಕೆ ಡಿಜೆಯ ಅತಿಯಾದ ಶಬ್ಧ ಕಾರಣ ಅಂತ ಮೃತ ಮಗು ಪೋಷಕರು ಆರೋಪಿಸುತ್ತಿದ್ದಾರೆ.

ಮೃತ ಮಗುವಿನ ಪೋಷಕರು ಅತಿಯಾದ ಡಿಜೆ ಬಳಕೆ ಸಂಬಂಧ ಹಾಗೂ ಮಗು ಸಾವಿಗೆ ಡಿಜೆ ಕಾರಣ ಅಂತ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ.

ಈ ಕುರಿತಾಗಿ ಟಿವಿ9ಗೆ ಇಎನ್​ಟಿ ತಜ್ಞ ವೈದ್ಯ ಡಾ.ವೆಂಕಟೇಶ್ ಪ್ರತಿಕ್ರಿಯೆ ನೀಡಿದ್ದು, ಅತಿಯಾದ ಡಿಜೆ ಸೌಂಡ್​ನಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಹೃದಯದ ಬಡಿತ ಏರುಪೇರಾಗುತ್ತೆ, ಖಿನ್ನತೆಯಂತಹ ಸಮಸ್ಯೆ ಆಗಬಹುದು. ಮಗು ಮಲಗಿದ್ದ ವೇಳೆ ಸಡನ್​ ಆಗಿ ಅತಿಯಾದ ಶಬ್ದ ಕೇಳಿಬಂದರೆ ಆಘಾತವಾಗಬಹುದು ಎಂದಿದ್ದಾರೆ.

ಇದನ್ನೂ ಓದಿ: ಮನೆಯ ಪಾಯಾ ತೆಗೆಯುವಾಗ ಸಿಕ್ತು ಎಂದು ನಕಲಿ ಚಿನ್ನ ನೀಡಿ ವಂಚನೆ; ಹಣ ಕಳೆದುಕೊಂಡು ಕಂಗಾಲಾದ ಗುತ್ತಿಗೆದಾರ

ಪುಟ್ಟಮಕ್ಕಳಿಗೆ ಹೃದಯಸ್ತಂಭನವಾಗುವ ಸಾಧ್ಯತೆ ಇರುತ್ತೆ. ಆದರೆ ಈ ಘಟನೆ ಇದೇ ಕಾರಣಕ್ಕೆ ಆಯ್ತು ಎಂದು ಹೇಳಲು ಆಗುವುದಿಲ್ಲ. ಶಬ್ದ ಪ್ರಮಾಣ 185 ಡೆಸಿಬಲ್​ಗಿಂತ ಹೆಚ್ಚಿದ್ದರೆ ಪ್ರಾಣಹಾನಿ ಸಾಧ್ಯತೆ ಇರುತ್ತೆ. ಡಿಜೆ ಶಬ್ದ ಅಂದಾಜು 100 ಡೆಸಿಬಲ್​ನಿಂದ 120 ಡೆಸಿಬಲ್ ಇರುತ್ತೆ. ಡಿಜೆ ಶಬ್ದದಿಂದಲೇ 19 ದಿನದ ಮಗು ಮೃತಪಟ್ಟಿರುವ ಬಗ್ಗೆ ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ.

ಗಣೇಶೋತ್ಸವ ಮೆರವಣಿಗೆಯಲ್ಲಿ ಡಾನ್ಸ್ ಮಾಡುತ್ತಿದ್ದ ಮಹಿಳೆ ಸಾವು

ಗಣೇಶೋತ್ಸವ ಮೆರವಣಿಗೆಯಲ್ಲಿ ಡಾನ್ಸ್ ಮಾಡುತ್ತಿದ್ದ ಮಹಿಳೆ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದರು. ಅನಂತಮ್ಮ (56) ಮೃತ ಮಹಿಳೆ. ಮೆರವಣಿಗೆಯಲ್ಲಿ ತಮಿಳು ಹಾಡಿಗೆ ಡಾನ್ಸ್ ಮಾಡುತ್ತಿದ್ದಾಗ ಮಹಿಳೆಗೆ ಎದೆ ನೋವು ಕಾಣಿಸಿಕೊಂಡಿದ್ದು ಇದ್ದಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ರಾಯಚೂರಿನ ಮಾರ್ಕೆಟ್ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:38 pm, Sun, 1 October 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್