ಜೆಡಿಎಸ್ ಸಭೆಯಲ್ಲಿ ಕಳ್ಳನ ಕೈಚಳ: 40 ಸಾವಿರ ರೂ. ಎಗರಿಸಿದವನಿಗೆ ಭರ್ಜರಿ ಗೂಸಾ

ಜೆಡಿಎಸ್​​ ಸಭೆಯಲ್ಲಿ ಕಾರ್ಯಕರ್ತ ಜೇಬಿನಲ್ಲಿದ್ದ ಕಳ್ಳ 40 ಸಾವಿರ ರೂ. ಕಳ್ಳತನ ಮಾಡಿರುವಂತಹ ಘಟನೆ ರಾಮನಗರ ಬಿಡದಿ ತೋಟದಲ್ಲಿ ನಡೆದಿದೆ. ಕುಂದಾಪುದ ಜೆಡಿಎಸ್ ಕಾರ್ಯಕರ್ತನ ಜೇಬಿಗೆ ಕೈ ಹಾಕಿ 40 ಸಾವಿರ ರೂ. ಕಳ್ಳತನ ಮಾಡಲಾಗಿದೆ. ತಕ್ಷವೇ ಎಚ್ಚೆತ್ತುಕೊಂಡ ಕಾರ್ಯಕರ್ತರು ಕಳ್ಳನನ್ನ ಹಿಡಿದಿದ್ದಾರೆ. ಕುಮಾರಸ್ವಾಮಿ ಗನ್ ಮ್ಯಾನ್​ಗಳಿಂದ ಖದೀಮನಿಗೆ ಗೂಸಾ ಕೊಡಲಾಗಿದೆ. 

ಜೆಡಿಎಸ್ ಸಭೆಯಲ್ಲಿ ಕಳ್ಳನ ಕೈಚಳ: 40 ಸಾವಿರ ರೂ. ಎಗರಿಸಿದವನಿಗೆ ಭರ್ಜರಿ ಗೂಸಾ
ಜೆಡಿಎಸ್ ಸಭೆಯಲ್ಲಿ ಕಳ್ಳ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Oct 01, 2023 | 5:12 PM

ರಾಮನಗರ, ಅಕ್ಟೋಬರ್​ 01: ಜೆಡಿಎಸ್​​ ಸಭೆಯಲ್ಲಿ ಕಾರ್ಯಕರ್ತ ಜೇಬಿನಲ್ಲಿದ್ದ ಕಳ್ಳ 40 ಸಾವಿರ ರೂ. ಕಳ್ಳತನ (Theft) ಮಾಡಿರುವಂತಹ ಘಟನೆ ರಾಮನಗರ ಬಿಡದಿ ತೋಟದಲ್ಲಿ ನಡೆದಿದೆ. ಜೆಡಿಎಸ್ ಹಾಲಿ ಮತ್ತು ಮಾಜಿ ಶಾಸಕರ ಸಭೆ ಮಾಡಲಾಗಿದ್ದು, ಈ ವೇಳೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಮಾತನಾಡಿಸುವ ವೇಳೆ‌ ಕುಂದಾಪುದ ಜೆಡಿಎಸ್ ಕಾರ್ಯಕರ್ತನ ಜೇಬಿಗೆ ಕೈ ಹಾಕಿ 40 ಸಾವಿರ ರೂ. ಕಳ್ಳತನ ಮಾಡಲಾಗಿದೆ. ತಕ್ಷವೇ ಎಚ್ಚೆತ್ತುಕೊಂಡ ಕಾರ್ಯಕರ್ತರು ಕಳ್ಳನನ್ನ ಹಿಡಿದಿದ್ದಾರೆ. ಕುಮಾರಸ್ವಾಮಿ ಗನ್ ಮ್ಯಾನ್​ಗಳಿಂದ ಖದೀಮನಿಗೆ ಗೂಸಾ ಕೊಡಲಾಗಿದೆ.

ರಾತ್ರಿ ನಿಲ್ಲಿಸಿ ಬೆಳಗ್ಗೆ ನೋಡೋಷ್ಟರಲ್ಲಿ ಮಾಯವಾಗುತ್ತಿವೆ ಬೈಕ್​ಗಳು

ದೇವನಹಳ್ಳಿ: ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಲಸೂರು ಗ್ರಾಮದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ರಾತ್ರಿ ನಿಲ್ಲಿಸಿ ಬೆಳಗ್ಗೆ ನೋಡೋಷ್ಟರಲ್ಲಿ ಬೈಕ್​ಗಳು ಮಾಯವಾಗಿವೆ. ಕಳೆದೊಂದು ತಿಂಗಳಿನಿಂದ ಹತ್ತಾರು ಬೈಕ್​ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಸದ್ಯ ಕಳ್ಳರು ಬೈಕ್​ಗಳನ್ನು ಖದೀಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ.

ಇದನ್ನೂ ಓದಿ: ರಾಯಚೂರು: ಡಿಜೆ ಸೌಂಡಿಗೆ 19 ದಿನದ ಹಸುಗೂಸು ಸಾವನ್ನಪ್ಪಿತೇ? ವೈದ್ಯರು ಹೇಳುವುದೇನು? ಇಲ್ಲಿದೆ ವಿವರ

ಒಂದು ತಿಂಗಳಿನಿಂದ ಡಿಯೋ , ಪಲ್ಸರ್, ಎವಿ ಡ್ಯೂಟಿ, ಯಮಹಾ ಸೇರಿದಂತೆ ಹಲವು ಬೈಕ್​ಗಳು ಕಳವು ಮಾಡಲಾಗಿದೆ. ರಾತ್ರಿ ವೇಳೆ ಬೈಕ್​ಗಳು ಕಾಣೆಯಾಗುತ್ತಿರುವುದರಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ನಾಲ್ಕೈದು ಕಳ್ಳರು ಗ್ರಾಮಕ್ಕೆ ಲಗ್ಗೆ ಹಾಕಿ ಕದಿಯುತ್ತಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಮನೆಯ ಪಾಯಾ ತೆಗೆಯುವಾಗ ಸಿಕ್ತು ಎಂದು ನಕಲಿ ಚಿನ್ನ ನೀಡಿ ವಂಚನೆ; ಹಣ ಕಳೆದುಕೊಂಡು ಕಂಗಾಲಾದ ಗುತ್ತಿಗೆದಾರ

ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಕಂಡುಬಂದಿದ್ದು, ಬೈಕ್ ಕಳ್ಳರನ್ನ ಹಿಡಿಯಲು ಪೊಲೀಸರು ನಿರ್ಲಕ್ಷ ವಹಿಸಿದ್ದಾರೆ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಮನ ಬೇರೆಡೆ ಸೆಳೆದು 20 ಸಾವಿರ ರೂ. ಕಳ್ಳತನ  

ನೆಲಮಂಗಲ: ಮೊಬೈಲ್ ರಿಪೇರಿ ಅಂಗಡಿಯಲ್ಲಿ ಮಾಲೀಕನಿಗೆ ಮಂಕುಬೂದಿ ಎರಚಿ ಗಮನ ಬೇರೆಡೆಗೆ ಸೆಳೆದು 20 ಸಾವಿರ ರೂ. ಕಳ್ಳತನ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್​ನಲ್ಲು ಘಟನೆ ನಡೆದಿದೆ. ಓರ್ವ ವ್ಯಕ್ತಿ, ಇಬ್ಬರು ಮಹಿಳೆಯರಿಂದ ಕೃತ್ಯವೆಸಗಲಾಗಿದೆ. ಹೇಮಂತ್ ಹಣ ಕಳೆದುಕೊಂಡ ಅಂಗಡಿ ಮಾಲೀಕ.

ಮಗನ ಸ್ಕೂಲ್ ಫೀಜ್ ಕಟ್ಟಲೆಂದು ಹಣ ತೆಗೆದಿಟ್ಟಿದ್ದರು. ದುಷ್ಕರ್ಮಿಗಳ ಕೃತ್ಯ ಸಿಸಿಕ್ಯಾಮೆರಾದಲ್ಲಿ ಸೆರೆ ಆಗಿದೆ. ಅಪರಿಚಿತರನ್ನು ಬಂಧಿಸುವಂತೆ ನೆಲಮಂಗಲ ಟೌನ್ ಠಾಣೆಗೆ ದೂರು ನೀಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್