ತತ್ವ ಸಿದ್ಧಾಂತ ಬದಿಗಿಟ್ಟು ಬಿಜೆಪಿ ಜೊತೆಗಿನ ಮೈತ್ರಿ ಒಪ್ಪಿಕೊಂಡ ವೈಎಸ್​ವಿ ದತ್ತಾ..!

ತತ್ವ ಸಿದ್ಧಾಂತದ ಸಲುವಾಗಿಯೇ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದಿದ್ದ ಮಾಜಿ ಶಾಸಕ ವೈಎಸ್​ವಿ ದತ್ತಾ ಜೆಡಿಎಸ್​ ತೊರೆದಿದ್ದರು. ಅಲ್ಲದೇ ಜೆಡಿಎಸ್​ನ ತತ್ವ ಸಿದ್ಧಾಂತವನ್ನು ಕಟುವಾಗಿ ಟೀಕಿಸಿದ್ದರು. ಆದ್ರೆ, ಇದೀಗ ಇದೇ ದತ್ತಾ ಆ ತತ್ವ ಸಿದ್ಧಾಂತಗಳನ್ನು ಬದಿಗಿಟ್ಟು ಬಿಜೆಪಿ ಜೊತೆಗಿನ ಮೈತ್ರಿಯನ್ನು ಒಪ್ಪಿಕೊಂಡಿದ್ದಾರೆ. ಹಾಗಾದ್ರೆ, ಈ ಬಗ್ಗೆ ದತ್ತಾ ಹೇಳಿದ್ದೇನು ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.

ತತ್ವ ಸಿದ್ಧಾಂತ ಬದಿಗಿಟ್ಟು ಬಿಜೆಪಿ ಜೊತೆಗಿನ ಮೈತ್ರಿ ಒಪ್ಪಿಕೊಂಡ ವೈಎಸ್​ವಿ ದತ್ತಾ..!
ವೈಎಸ್​ವಿ ದತ್ತಾ
Follow us
ರಮೇಶ್ ಬಿ. ಜವಳಗೇರಾ
|

Updated on: Oct 01, 2023 | 5:13 PM

ಬೆಂಗಳೂರು, (ಅಕ್ಟೋಬರ್ 01): ಮಾಜಿ ಶಾಸಕ ವೈಎಸ್​ವಿ ದತ್ತಾ (YSV Datta) ಸದಾ ಜಾತ್ಯತೀತ, ತತ್ವ-ಸಿದ್ಧಾಂತದ ಬಗ್ಗೆ ಮಾತುಗಳನ್ನಾಡುತ್ತಾರೆ. ಬಿಜೆಪಿಯ(BJP) ತತ್ವ, ಸಿದ್ಧಾಂತಗಳು ಅಂದ್ರೆ ಉರಿದುಬಿಳುತ್ತಾರೆ. ಈ ಹಿಂದೆ ಸ್ವತಃ ಹೆಚ್​ಡಿ ಕುಮಾರಸ್ವಾಮಿ(HD Kumarswamy), ಬಿಜೆಪಿಯೊಂದಿಗೆ ಅನ್ಯೋನ್ಯತೆ , ಸಾಫ್ಟ್​ ಕಾರ್ನರ್​ ತೋರುತ್ತಿದ್ದಕ್ಕೆ ದತ್ತಾ ಆಕ್ರೋಶಗೊಂಡಿದ್ದರು. ಅಲ್ಲದೇ ಕೊನೆಗೆ ಕುಮಾರಸ್ವಾಮಿಗೆ ತತ್ವ ಸಿದ್ಧಾಂತಗಳು ಗೊತ್ತಿಲ್ಲ ಎಂದು ಜೆಡಿಎಸ್​ನಿಂದ ಆಚೆ ಬಂದಿದ್ದರು. ಆದ್ರೆ, ಇದೀಗ ಅದೇ ವೈಎಸ್​ವಿ ದತ್ತಾ, ಇದೀಗ ಬಿಜೆಪಿಯ ತತ್ವ-ಸಿದ್ಧಾಂತಗಳಿಗೆ ತಲೆಬಾಗಿ ಮೈತ್ರಿ ಒಪ್ಪಿಕೊಂಡಿದ್ದಾರೆ.

ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿರುವ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಅಸಮಧಾನಿತ ನಾಯಕರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದತ್ತಾ, ಯಾವುದೇ ಕಾರಣಕ್ಕೂ ನಾವು ಸಿದ್ಧಾಂತದಲ್ಲಿ ರಾಜಿಯಾಗುವುದಿಲ್ಲ. ಈ ಹಿಂದೆ ಬಿಜೆಪಿ ಜೊತೆ ಸೇರಿ ಜೆಡಿಎಸ್ ಆಡಳಿತ ಮಾಡಿರಲಿಲ್ವಾ. ಭಾರತೀಯ ಜನತಾ ಪಕ್ಷಕ್ಕೆ ಕುಮಾರಸ್ವಾಮಿ ಬಂಬಲ ನೀಡಿದ್ದರು. ಶೋಭಾಯಾತ್ರೆ ವಿಚಾರದಲ್ಲಿ ನಾವು ವಿರೋಧ ಮಾಡಿದ್ದೆವು/ ರಾಷ್ಟ್ರೀಯ ಪಕ್ಷಗಳೆರಡೂ ಪ್ರಾದೇಶಿಕ ಪಕ್ಷಕ್ಕೆ ಮಾರಕವಾಗಿವೆ/ ಕರ್ನಾಟಕಕ್ಕಾಗಿ ಪ್ರಾದೇಶಿಕ ಪಕ್ಷ ಜೆಡಿಎಸ್ ಉಳಿಯಬೇಕು. ರಾಜ್ಯದ ವಿಚಾರವಾಗಿ ನಾವು ಬಿಜೆಪಿ ಜೊತೆ ಹೋಗಲು ಸಿದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಅಂದು ಬಿಜೆಪಿಯ ತತ್ವ ಸಿದ್ಧಾಂತಗಳ ವಿರೋಧಿಸುತ್ತಿದ್ದ ದತ್ತಾ ಇದೀಗ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಜತೆ ಮೈತ್ರಿಗೆ ಇಬ್ರಾಹಿಂ ಅಸಮಾಧಾನ, ಕರೆ ಮಾಡಿ ಮುನಿಸು ಶಮನಕ್ಕೆ ಯತ್ನಿಸಿದ ದೇವೇಗೌಡ

ಜಾತ್ಯತೀತ ಫೈಟ್​

ಜಾತ್ಯತೀತ ಎಂದು ಹೆಸರು ಇಟ್ಟುಕೊಂಡಿರುವ ಜೆಡಿಎಸ್ ಇದೀಗ ಬಿಜೆಪಿಯೊಂದಿಗೆ ಕೈಜೋಡಿಸಿದ್ದು, ಇದಕ್ಕೆ ಕಾಂಗ್ರೆಸ್​ ನಾಯಕರು ಸೆಕ್ಯೂಲರಿಸಂ ಹೆಸರನ ಮೇಲೆ ವ್ಯಂಗ್ಯವಾಡುತ್ತಿದ್ದಾರೆ.​ ಈಗ ಜಾತ್ಯತೀತನ.. ಜನತಾದಳದ ಮುಂದೆ ಜಾತ್ಯತೀತ ಎಂದು ಬರೆದುಕೊಂಡಿದ್ದಾರೆ. ಈಗ ಏನಂತ ಕರೆಯೋದು ಎಂದು ಸಿಎಂ ಸಿದ್ದರಾಮಯ್ಯ ಕಮಲ-ದಳ ದೋಸ್ತಿಯನ್ನ ಕುಟುಕಿದ್ದಾರೆ. ಲೋಕಸಭೆಯಲ್ಲಿ ಕೈ ಕಟ್ಟಿಹಾಕಲು ಒಂದಾಗಿರೋ ಹೊಸ ಮೈತ್ರಿ ಬಗ್ಗೆ ವ್ಯಂಗ್ಯವಾಡಿದ್ದರು. ಇದೇ ಈಗ ದಳಪತಿ ವರ್ಸಸ್ ಸಿದ್ದು ನಡುವೆ ಸೆಕ್ಯುಲರ್ ಸಮರಕ್ಕೆ ವೇದಿಕೆಯಾಗಿದೆ. ಮತ್ತೊಂದೆಡೆ ಮೈತ್ರಿ ಮಾಡಿಕೊಂಡ್ರು ಜಾತ್ಯತೀತ ಬಿಡಲ್ಲ ಎಂದು ಜೆಡಿಎಸ್ ಸಮರ್ಥಿಸಿಕೊಳ್ತಿದ್ದಾರೆ. ಆದ್ರೆ, ಮುಸ್ಲಿಂ ಮುಖಂಡರು ತೆನೆ ಇಳಿಸೋಕೆ ಮುಂದಾಗಿದ್ದಾರೆ. ಇದೇ ಈಗ ಕಾಂಗ್ರೆಸ್‌ಗೆ ಅಸ್ತ್ರವಾಗಿ ಸಿಕ್ಕಿದೆ. ಇದನ್ನ ದಳಪತಿಗಳು ಹೇಗೆ ಬ್ಯಾಲೆನ್ಸ್​ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ