AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಾಫಿಕ್​ ಪೊಲೀಸರ ಸಮಯ ಪ್ರಜ್ಞೆಯಿಂದ ಮಹಿಳಾ ಹೋಟೆಲ್ ಉದ್ಯಮಿ ಬಚಾವ್

ಬುರ್ಖಾ ಧರಿಸಿಕೊಂಡು ಬಂದು ಬೆಂಗಳೂರಿನ ಎಂಇಎಸ್ ರಿಂಗ್ ರಸ್ತೆಯಲ್ಲಿ ಹೊಟೇಲ್​​ ನಡೆಸುತ್ತಿರುವ ಮಹಿಳಾ ​ಉದ್ಯಮಿಯನ್ನು ಕಿಡ್ನಾಪ್​ ಮಾಡಿ ಆಟೋದಲ್ಲಿ ಕರೆದೊಯ್ಯುತ್ತಿದ್ದವರನ್ನು ಜಾಲಹಳ್ಳಿ ಸಂಚಾರಿ ಪೊಲೀಸರು ತಡೆದರು. ಮುಂದೆ ಏನಾಯ್ತು? ಸ್ಟೋರಿ ಓದಿ

ಟ್ರಾಫಿಕ್​ ಪೊಲೀಸರ ಸಮಯ ಪ್ರಜ್ಞೆಯಿಂದ ಮಹಿಳಾ ಹೋಟೆಲ್ ಉದ್ಯಮಿ ಬಚಾವ್
ಮಹಿಳಾ ಉದ್ಯಮಿಯ ಅಪಹರಣ
ಜಗದೀಶ ಬಿ.
| Edited By: ವಿವೇಕ ಬಿರಾದಾರ|

Updated on: Oct 02, 2023 | 2:14 PM

Share

ಬೆಂಗಳೂರು ಅ.02: ಜಾಲಹಳ್ಳಿ ಸಂಚಾರಿ ಪೊಲೀಸರ (Traffic Police) ಸಮಯ ಸಮಯ ಪ್ರಜ್ಞೆಯಿಂದ ಕಿಡ್ನಾಪ್ ಆಗಿದ್ದ ಮಹಿಳಾ ಹೋಟೆಲ್ ಉದ್ಯಮಿ (Businessman) ಬಚಾವ್​ ಆಗಿದ್ದಾರೆ. ನಿವೃತ್ತ ಸೇನಾಧಿಕಾರಿ ವಿಜಯ್ ಪತ್ನಿ, ಮಹಿಳಾ ಹೋಟೆಲ್ ಉದ್ಯಮಿ ಪಂಕಜಾ ಅಪಹರಣವಾಗಿದ್ದ ಮಹಿಳೆ. ನಗರದ ಎಂಇಎಸ್ ರಿಂಗ್ ರಸ್ತೆಯಲ್ಲಿ ಪಂಕಜಾ ಕಳೆದ ನಾಲ್ಕು ವರ್ಷಗಳಿಂದ ಡಿಎಂ ರೆಸಿಡೆನ್ಸಿ ಹೋಟೆಲ್ (Hotel) ನಡೆಸುತ್ತಿದ್ದಾರೆ. ಭಾನುವಾರ  ಮಧ್ಯಾಹ್ನ 12 ಗಂಟೆ ಸುಮಾರಿಗೆ ರೂಂ ಬುಕ್​​ ಮಾಡಲು ಬುರ್ಖಾ ಧರಿಸಿಕೊಂಡು ನಾಲ್ವರು ಮಹಿಳೆಯರು ಬಂದಿದ್ದಾರೆ.

ಆದರೆ ಪಂಕಜಾ ಅವರು ಸ್ಥಳೀಯರಿಗೆ ರೂಂ ಕೊಡಲ್ಲ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಐವರ ಮಧ್ಯೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಪಂಕಜಾ ಅವರ ಮೇಲೆ ಬುರ್ಖಾಧಾರಿ ಮಹಿಳೆಯರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ನಂತರ ಈ ನಾಲ್ವರು ಮಹಿಳೆಯರು ಪಂಕಜಾ ಅವರನ್ನು ಸುತ್ತುವರೆದು ಕಿಡ್ನಾಪ್​ ಮಾಡಿಕೊಂಡು ಆಟೋದಲ್ಲಿ ಕರೆದೊಯ್ಯುತ್ತಿದ್ದರು.

ಇದನ್ನೂ ಓದಿ: ಬೆಂಗಳೂರು: ಆಟೋದಲ್ಲಿ ಕಿಡ್ನಾಪ್ ಮಾಡಿಕೊಂಡು ಹೋಗಿ ಕುತ್ತಿಗೆ ಕೊಯ್ದು ಕೊಲೆ

ಈ ವಿಚಾರ ಜಾಲಹಳ್ಳಿ ಸಂಚಾರಿ ಪೊಲೀಸರಿಗೆ ತಿಳಿದಿದೆ. ಆರೋಪಿಗಳು ಹೋಟೆಲ್​ನಿಂದ ಕೊಂಚ ದೂರ ಹೊಗುತಿದ್ದಂತೆ ಜಾಲಹಳ್ಳಿ ಸಂಚಾರಿ ಪೊಲೀಸರು ಆಟೋ ತಡೆದು, ಪಂಕಜಾ ಅವರನ್ನು ರಕ್ಷಿಸಿದ್ದಾರೆ. ಘಟನೆ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪಂಕಜಾ ಅವರು ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
ಜಗದೀಶ ಬಿ.
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More