ಬೆಂಗಳೂರು: ರಾಜಧಾನಿಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ಕಸದ ರಾಶಿಯಲ್ಲಿ ಅಡಗಿಸಿಟ್ಟಿದ್ದ, ಹಸುಗೂಸಿದ್ದ ಕವರ್ ನಡು ರಸ್ತೆಯಲ್ಲಿ ಬಿದ್ದ ಪರಿಣಾಮ, ವಾಹನಗಳು ಹರಿದು ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಫೆಬ್ರವರಿ 28ರಂದು ಪ್ರಕರಣ ನಡೆದಿದ್ದು, ಅಮೃತಹಳ್ಳಿಯ ಪಂಪಾ ಲೇಔಟ್ ಪೊಲೀಸರು ಸ್ವಯಂ ಪ್ರೇರಿತ ಸೆಕ್ಷನ್ 318ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಮೃತಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
4-5 ತಿಂಗಳ ಹಸುಗೂಸವೊಂದನ್ನು ಪ್ಲಾಸ್ಟಿಕ್ ಕವರ್ನಲ್ಲಿ ಹಾಕಿ ಬಿಬಿಎಂಪಿ ಕಸದ ಲಾರಿಯಲ್ಲಿ ಹಾಕಿದ್ದಾರೆ. ಮಧ್ಯಾಹ್ನ 1:30ರ ಸುಮಾರಿಗೆ ಬಿಬಿಎಂಪಿ ಲಾರಿ ಅಮೃತಹಳ್ಳಿಯ ಪಂಪಾ ಲೇಔಟ್ನಲ್ಲಿ ಕಸ ತುಂಬಿಕೊಂಡು ಹೋಗುತ್ತಿದ್ದಾಗ, ಲಾರಿಯಿಂದ ಮಗು ಇದ್ದ ಪ್ಲಾಸ್ಟಿಕ್ ಕವರ್ ರಸ್ತೆಯಲ್ಲಿ ಬಿದ್ದಿದೆ. ಇದನ್ನು ತಿಳಿಯದೆ ವಾಹನಗಳು ಹರಿದ ಪರಿಣಾಮ ಹಸುಗೂಸು ಸಾವನ್ನಪ್ಪಿದ್ದು, ಇನ್ನು ಮಗು ಗಂಡೋ, ಹೆಣ್ಣೋ ಎಂಬುವುದು ತಿಳಿದುಬಂದಿಲ್ಲ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Sun, 5 March 23