ವಿಜಯಪುರದಲ್ಲಿ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ; ಹಂತಕರ ಪತ್ತೆಗೆ ಖಾಕಿ ಕಸರತ್ತು

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 10, 2023 | 3:27 PM

ವಿಜಯಪುರ ನಗರದಲ್ಲಿ ಜನರು ಬೆಳ್ಳಂ-ಬೆಳಿಗ್ಗೆಯೇ ಭಯಗೊಂಡಿದ್ದರು. ನಗರದ ಜಿಮ್ಮಾ ಮಸೀದಿಯ ಬಳಿಯ ಝೆಂಡಾಕಟ್ಟೆಯ ಹಳಕೇರಿ ಓಣಿಯಲ್ಲಿ ಯುವಕನೋರ್ವನನ್ನು ಬರ್ಬರ ಹತ್ಯೆ ಮಾಡಲಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಎಸ್ಪಿ ಹಾಗೂ ಇತರೆ ಆಧಿಕಾರಿಗಳು, ಪರಿಶೀಲನೆ ನಡೆಸಿದ್ದು, ಹಂತಕರ ಪತ್ತೆಗೆ ಖಾಲಿ ಜಾಲ ಬೀಸಿದ್ದಾರೆ.

ವಿಜಯಪುರದಲ್ಲಿ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ; ಹಂತಕರ ಪತ್ತೆಗೆ ಖಾಕಿ ಕಸರತ್ತು
ಕೊಲೆಯಾದ ಯುವಕ, ವಿಜಯಪುರ ಎಸ್ಪಿ
Follow us on

ವಿಜಯಪುರ, ಡಿ.10: ವಿಜಯಪುರ ನಗರದ ಜುಮ್ಮಾ ಮಸೀದಿಯ ಝೆಂಡಾ ಕಟ್ಟೆಯ ಹಳಕೇರಿ ಓಣಿಯಲ್ಲಿ ಬೆಳ್ಳಂ ಬೆಳಿಗ್ಗೆ ಸಾಹಿಲ್ ಭಾಂಗಿ(21)ಎಂಬ ಯುವಕನನ್ನು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಸ್ಥಳಕ್ಕೆ ಎಸ್ಪಿ ಹಾಗೂ ಇತರೆ ಆಧಿಕಾರಿಗಳು ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ, ಹಂತಕರ ಪತ್ತೆಗೆ ಮುಂದಾಗಿದ್ದಾರೆ. ನಿನ್ನೆ ತಡರಾತ್ರಿಯಿಂದ ಇಂದು ನಸುಕಿನ ಅವಧಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇನ್ನು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಇನ್ನು ಹತ್ಯೆ ಕುರಿತು ಸ್ಥಳೀಯರು ಗೋಲ್ ಗುಂಬಜ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಗೋಲಗುಮ್ಮಟ ಪೊಲೀಸರು ಭೇಟಿ ನೀಡಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಸುತ್ತಮುತ್ತಲ ಜನರ ವಿಚಾರಣೆ ಮಾಡಿ ಸಾಹಿಲ್ ಬಾಂಗಿ ಕೊಲೆಗೆ ಯಾರು ಕಾರಣವೇನು ಎನ್ನುವುದರ ಪತ್ತೆಗೆ ಮುಂದಾಗಿದ್ದರು. ಇದೇ ವೇಳೆ ಎಸ್ಪಿ ಋಷಿಕೇಶ ಸೋನೆವಣೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಶ್ವಾನದಳ ಬೆರಳಚ್ಚು ತಜ್ಞರ ತಂಡವೂ ಹಂತಕರ ಜಾಡಿಗಾಗಿ ಪರೀಕ್ಷೆ ನಡೆಸಿದರು.

ಇದನ್ನೂ ಓದಿ:ಹಾಡಹಗಲೇ ವಕೀಲನ ಬರ್ಬರ ಹತ್ಯೆ ಪ್ರಕರಣ; 6 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲು

ಇದೇ ವೇಳೆ ಮಾತನಾಡಿ ಎಸ್ಪಿ ಋಷಿಕೇಶ ಸೋನೆವಣೆ ‘ರಾತ್ರಿ 10 ರಿಂದ ಬೆಳಿಗ್ಗೆ 7 ಗಂಟೆಯೊಳಗೆ ಕೊಲೆ ನಡೆದಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಕೊಲೆಗೀಡಾದ ಯುವಕ ಯಾರೆಂದು ತಿಳಿದು ಬಂದಿದೆ. ಸದ್ಯ ಯುವಕನನ್ನು ಯಾರು ಕೊಲೆ ಮಾಡಿದ್ದಾರೆ ಎಂಬ ನಿಟ್ಟಿನಲ್ಲಿ ತನಿಖೆ ನಡೆದಿದೆ. ಇನ್ನು ಹತ್ಯೆಯಾದ ಯುವಕ ಸಾಹಿಲ್ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಇತನ ಮನೆಯವರು ನೀಡುವ ದೂರಿನ ಪ್ರಕಾರ ಪ್ರಕರಣ ದಾಖಲು ಮಾಡಿಕೊಳ್ಳಲಾಗುತ್ತದೆ. ಪೂರ್ಣ ತನಿಖೆಯ ಬಳಿವಷ್ಟೇ ಸಾಹಿಲ್ ಬಾಂಗಿ ಕೊಲೆಗೆ ಕಾರಣ ಹಾಗೂ ಯಾರು ಕೊಲೆ ಮಾಡಿದ್ಧಾರೆ ಎಂಬುದು ತಿಳಿದು ಬರಲಿದೆ ಎಂದರು.

ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಮೃತ ಸಾಹಿಲ್ ಬಾಂಗಿ ಕೊಲೆಯ ಕುರಿತು ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಂತಕರ ಪತ್ತೆಗೆ ಖಾಕಿ ಜಾಲ ಬೀಸಿದೆ. ಕೊಲೆಯಾದ ಯುವಕನ ಮೊಬೈಲ್ ಕಾಲ್ ಡಿಟೇಲ್ಸ್ ಕಲೆ ಹಾಕಿ ಯಾರೆಲ್ಲ, ಕಾಲ್ ಮಾಡಿದ್ದರು. ಇತ ಯಾರಿಗೆ ಕಾಲ್ ಮಾಡಿದ್ದ ಎಂಬುದರ ಕುರಿತು ತನಿಖೆ ನಡೆಸಲಿದ್ದಾರೆ. ಶೀಘ್ರವಾಗಿ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಲಾಗುತ್ತದೆ ಎಂದು ಪೊಲೀಸ್ ಆಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ